ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ, ಚೀನಾ 14ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಸಾಧ್ಯತೆ 

ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ ಮತ್ತು ಚೀನಾದ 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಯಿದೆ. 14ನೇ ಸುತ್ತಿನ ಮಾತುಕತೆಗೆ ಚೀನಾದಿಂದ ಆಹ್ವಾನ ಬಂದಿದೆ. ಇದು ಡಿಸೆಂಬರ್  15ರ ನಂತರ ನಡೆಯುವ ಸಾಧ್ಯತೆಯಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
ಭಾರತೀಯ ಸೇನೆಯ ಸಾಂದರ್ಭಿಕ ಚಿತ್ರ
ಭಾರತೀಯ ಸೇನೆಯ ಸಾಂದರ್ಭಿಕ ಚಿತ್ರ

ನವದೆಹಲಿ: ಡಿಸೆಂಬರ್ ದ್ವಿತೀಯಾರ್ಧದಲ್ಲಿ ಭಾರತ ಮತ್ತು ಚೀನಾದ 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಯಿದೆ. 14ನೇ ಸುತ್ತಿನ ಮಾತುಕತೆಗೆ ಚೀನಾದಿಂದ ಆಹ್ವಾನ ಬಂದಿದೆ. ಇದು ಡಿಸೆಂಬರ್  15ರ ನಂತರ ನಡೆಯುವ ಸಾಧ್ಯತೆಯಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

1971 ರ ಯುದ್ಧದಲ್ಲಿ ಭಾರತ ಗೆಲುವಿನ ಸುವರ್ಣ ಮಹೋತ್ಸವ ಹಾಗೂ ಪಾಕಿಸ್ತಾನ ಹೀನಾಯ ಸೋಲಿನ ಕಾರಣ ಸಶಸ್ತ್ರ ಪಡೆ ಸಂಭ್ರಮಾಚರಣೆಯಲ್ಲಿ ನಿರತವಾಗಿರುವುದರಿಂದ ಡಿಸೆಂಬರ್ 16 ರ ತನಕ ಭಾರತಕ್ಕೆ ಸಮಯ ಸೂಕ್ತವಾಗಿದೆ 
ಎಂದು ಮೂಲಗಳು ತಿಳಿಸಿವೆ. ವಾಸ್ತವ ನಿಯಂತ್ರಣ ರೇಖೆಯಲ್ಲಿನ ವಿವಾದ ಪರಿಹರಿಸಿಕೊಳ್ಳಲು ಈವರೆಗೂ ಭಾರತ ಮತ್ತು ಚೀನಾ ನಡುವೆ 14 ಸುತ್ತಿನ ಮಾತುಕತೆಗಳು ನಡೆದಿವೆ. 

ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಘರ್ಷಣೆಯ ಕೇಂದ್ರಬಿಂದು ಗಡಿಗಳಲ್ಲಿ ಉಭಯ ಸೇನೆಗಳನ್ನು ಹಿಂಪಡೆಯುವ ಕುರಿತು ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ  ಎಂದು ಹೇಳಲಾಗಿದೆ. ಗೋಗ್ರಾ ಹೈಟ್ಸ್ ಮತ್ತು ಪ್ಯಾಂಗೋಂಗ್ ಸರೋವರದ ಗಡಿ ಪ್ರದೇಶಗಳಲ್ಲಿ  ಸಮಸ್ಯೆ ಬಗೆಹರಿದಿದೆ ಆದರೆ, ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಸಮಸ್ಯೆ ಹಾಗೆಯೇ ಇರುವುದಾಗಿ ಮೂಲಗಳು ಹೇಳಿವೆ. 

ಸಿಎನ್ ಎನ್ ಜಂಕ್ಷನ್ ಮತ್ತು ಡಿಬಿಒ ಪ್ರದೇಶದಲ್ಲಿನ ಸಮಸ್ಯೆಗಳ ಪರಿಹಾರಕ್ಕೂ ಭಾರತ ಒತ್ತಾಯಿಸುತ್ತಿದೆ.  ಪಿಎಲ್ ಎ ಆರಂಭಿಕ ಭೀತಿ ಉಂಟುಮಾಡುವಲ್ಲಿ ಯಶಸ್ವಿಯಾದ ನಂತರ  ಚೀನಾದ ಆಕ್ರಮಣಕ್ಕೆ ಭಾರತವು ಅತ್ಯಂತ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿತು ಮತ್ತುಅನೇಕ ಸ್ಥಳಗಳಲ್ಲಿ ಅವರ ಕ್ರಮಗಳನ್ನು ಪರಿಶೀಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com