ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 38 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಗುಂಪೊಂದು ಕಬ್ಬಿಣದ ರಾಡು ಹಾಗೂ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಸಿಸಿಟಿವಿಯಲ್ಲಿ ಈ ಭಯಾನಕ ಹಲ್ಲೆಯ ದೃಶ್ಯ ಸೆರೆಯಾಗಿದೆ. ಕಾರಿನಿಂದ ಇಳಿದು ಬರುವ ಮಗಳು ಹಾಗೂ ತಾಯಿಯನ್ನು ಅಡ್ಡಗಟ್ಟಿದ್ದ ಗುಂಪೊಂದು ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸುವ ದೃಶ್ಯ ವಿಡಿಯೋದಲ್ಲಿದೆ.
ದೆಹಲಿಯ ಶಾಲಿಮರ್ ಬಾಗ್ ರೆಸಿಡೆನ್ಶಿಯಲ್ ಕಾಲೋನಿಯಲ್ಲಿ ಕಳೆದ ತಿಂಗಳು 19 ರಂದು ಈ ಘಟನೆ ನಡೆದಿದ್ದು, ಇದಕ್ಕೆ ಕಾರಣರಾಗಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಪಿ ಶಾಸಕ ಬಂಧನ ಕುಮಾರಿ ಅವರ ಬೆಂಬಲಿಗರಿಂದ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಶಾಸಕಿ ಬಂಧನ ಕುಮಾರಿ ಅವರ ಪತಿ ವಿರುದ್ಧ 2019ರಲ್ಲಿ ಎಫ್ ಐಆರ್ ದಾಖಲಿಸಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಮಹಿಳೆ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಶಾಸಕಿ ಬಂಧನ ಕುಮಾರಿ ಅಲ್ಲಗಳೆದಿದ್ದಾರೆ.
Advertisement