
ನವದೆಹಲಿ: ಹಣದುಬ್ಬರ, ಬೆಲೆ ಏರಿಕೆ ಮತ್ತು ರೈತರಿಗೆ ಸಂಬಂಧಿಸಿದ ವಿಚಾರಗಳಿಂದಾಗಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷ ಸದಸ್ಯರು ಗುರುವಾರ ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿದರು.
ಹಣದುಬ್ಬರ ಕುರಿತ ಚರ್ಚೆಗೆ ಉಪ ಸಭಾಪತಿ ಹರಿವಂಶ್ ನಿರಾಕರಿಸಿದ ನಂತರ ಮೊದಲಿಗೆ ಕಾಂಗ್ರೆಸ್ ಸಭಾತ್ಯಾಗ ನಡೆಸಿತು. ತದನಂತರ ಎಡ ಪಕ್ಷ ಮತ್ತಿತರ ಕೆಲ ಸಣ್ಣ ಪಕ್ಷಗಳ ಮುಖಂಡರು ಸದನದಿಂದ ಹೊರಗೆ ನಡೆದರು. ರೈತರ ಸಮಸ್ಯೆಗಳನ್ನು ಎತ್ತಿ ಟಿಎಂಸಿ, ಟಿಆರ್ ಎಸ್ , ಡಿಎಂಕೆ ಮತ್ತಿತರ ಪಕ್ಷಗಳು ಸದಸ್ಯರು ಕೂಡಾ ಸಭಾತ್ಯಾಗ ನಡೆಸಿದರು.
ಹಣದುಬ್ಬರ, ಬೆಲೆ ಏರಿಕೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ
ಬೇಡಿಕೆಯಿಟ್ಟರು. ಪ್ರಶ್ನೋತ್ತರ ಅವಧಿ ಇದುದ್ದರಿಂದ ಆ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಉಪ ಸಭಾಪತಿ ಹೇಳಿದರು.
ತದನಂತರ ಇತರ ಪಕ್ಷಗಳು ರೈತರ ಕುರಿತ ಸಮಸ್ಯೆಗಳು ಹಾಗೂ ಕನಿಷ್ಠ ಬೆಂಬಲ ಬೆಲೆ ವಿಚಾರ ಪ್ರಸ್ತಾಪಿಸಿ ಸದನದಿಂದ ನಿರ್ಗಮಿಸಿದರು.
Advertisement