ಕೇರಳದ ಶ್ರುತಿ ಸಿತಾರಗೆ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟ

ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಕೇರಳದ ಶ್ರುತಿ ಸಿತಾರ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಆರು ತಿಗಳ ಹಿಂದೆ ಈ ಪ್ರಶಸ್ತಿಗೆ ಭಾರತವನ್ನು ಶ್ರುತಿ ಸಿತಾರ ಪ್ರತಿನಿಧಿಸಿದ್ದರು. ಟಾಪ್ ಐವರು ಅಭ್ಯರ್ಥಿಗಳಲ್ಲಿ ತಾನೂ ಒಬ್ಬಳಾಗುವ ವಿಶ್ವಾಸದಲ್ಲಿದ್ದ ಶ್ರುತಿ ಸಿತಾರ, ಇದೀಗ ತಾನೇ ಆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಶ್ರುತಿ ಸಿತಾರ
ಶ್ರುತಿ ಸಿತಾರ
Updated on

ಕೊಚ್ಚಿ: ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಕೇರಳದ ಶ್ರುತಿ ಸಿತಾರ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಆರು ತಿಗಳ ಹಿಂದೆ ಈ ಪ್ರಶಸ್ತಿಗೆ ಭಾರತವನ್ನು ಶ್ರುತಿ ಸಿತಾರ ಪ್ರತಿನಿಧಿಸಿದ್ದರು. ಟಾಪ್ ಐವರು ಅಭ್ಯರ್ಥಿಗಳಲ್ಲಿ ತಾನೂ ಒಬ್ಬಳಾಗುವ ವಿಶ್ವಾಸದಲ್ಲಿದ್ದ ಶ್ರುತಿ ಸಿತಾರ, ಇದೀಗ ತಾನೇ ಆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಆನ್ ಲೈನ್ ಕಾರ್ಯಕ್ರಮದ ಮೂಲಕ ಡಿಸೆಂಬರ್ 1 ರಂದು ಬೆಳಗ್ಗೆ ಶ್ರುತಿ ಸಿತಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದರಿಂದ ತುಂಬಾ ಸಂತೋಷವಾಗುತ್ತಿದೆ. ಇಂತಹ ಸಾಧನೆ ಮಾಡುತ್ತಿನಿ ಅಂದುಕೊಂಡಿರಲಿಲ್ಲ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಿಂಗಳು ಗಟ್ಟಲೇ ಪೂರ್ವ ತಯಾರಿ ನಡೆಸಿದ್ದೆ. ಇಂತಹ ಅತ್ಯುನ್ನತ್ತ ಪ್ರಶಸ್ತಿಯೊಂದಿಗೆ ಇದೀಗ ಅದೆಲ್ಲಾ ಫಲ ನೀಡಿದೆ ಎಂದು ಅವರು ಹೇಳಿದ್ದಾರೆ. 

ವಿಶ್ವದಾದ್ಯಂತ ಜನರು ವಿಶೇಷವಾಗಿ ಆಕೆಯ ಸ್ನೇಹಿತರು, ಕುಟುಂಬಸ್ಥರು ಅಭಿನಂದಿಸುತ್ತಿದ್ದು, ನನ್ನಗಾಗಿ ನಮ್ಮ ಸುತ್ತ ಇರುವ ಪ್ರತಿಯೊಬ್ಬರು ಸಂತೋಷಪಡುತ್ತಿರುವುದಾಗಿ ಶ್ರುತಿ ಸಿತಾರ ತಿಳಿಸಿದ್ದಾರೆ.  ಫಿಲಿಫೈನ್ಸ್ ಮತ್ತು ಕೆನಡಾದಿಂದ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ನಲ್ಲಿಯೂ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಆಫ್ ಪ್ರಶಸ್ತಿಯನ್ನು ಶ್ರುತಿ ಸಿತಾರ ಪಡೆದುಕೊಂಡಿದ್ದಾರೆ. 

ಈ ಹಿಂದೆ ಸಾಮಾಜಿಕ ನ್ಯಾಯ ವಿಭಾಗದ ಲೈಂಗಿಕ ಅಲ್ಪಸಂಖ್ಯಾತ ಘಟಕದಲ್ಲಿ ಭಾಗವಾಗಿದ್ದ ಶ್ರುತಿ ಸಿತಾರ, ಇದೀಗ ಮಾಡೆಲ್ -ಆರ್ಟಿಸ್ಟ್ ಕೆಲಸ ಮಾಡುತ್ತಿದ್ದು, ಸಮಾನತೆ ಹಾಗೂ ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಕಾಲೇಜು ಹಾಗೂ ಶಾಲೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಕುರಿತ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com