ಹಣ ಪಾವತಿಸಿದ ಬಗ್ಗೆ ನಕಲಿ ಸ್ಕ್ರೀನ್‌ಶಾಟ್‌ ತೋರಿಸಿ ಮೊಬೈಲ್ ಖರೀದಿಸಿದ್ದ ಫರಿದಾಬಾದ್ ವ್ಯಕ್ತಿಯ ಬಂಧನ

ಹಣ ಪಾವತಿಸಿದ ಬಗ್ಗೆ ನಕಲಿ ಸ್ಕ್ರೀನ್‌ಶಾಟ್‌ ತೋರಿಸಿ ಮೊಬೈಲ್ ಫೋನ್‌ಗಳನ್ನು ಖರೀದಿಸಿ ಅಂಗಡಿಯವರಿಗೆ ವಂಚಿಸಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಣ ಪಾವತಿಸಿದ ಬಗ್ಗೆ ನಕಲಿ ಸ್ಕ್ರೀನ್‌ಶಾಟ್‌ ತೋರಿಸಿ ಮೊಬೈಲ್ ಫೋನ್‌ಗಳನ್ನು ಖರೀದಿಸಿ ಅಂಗಡಿಯವರಿಗೆ ವಂಚಿಸಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿಯನ್ನು ಹರಿಯಾಣದ ಫರಿದಾಬಾದ್‌ ನಿವಾಸಿ ಹೇಮಂತ್ ವಶಿಷ್ಠ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಕೇಂದ್ರ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಗುರುವಾರ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜಿಂದರ್ ನಗರದ ಅಂಗಡಿಯ ಮೊಹ್ಸಿನ್ ಖಾನ್ ಎಂಬವರು ವಂಚನೆ ಆರೋಪದ ವಿರುದ್ಧ ದೂರು ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಆಗಸ್ಟ್‌ನಲ್ಲಿ ಗ್ರಾಹಕರೊಬ್ಬರು ಸ್ಯಾಮ್‌ಸಂಗ್ ಎಸ್-21 ಮೊಬೈಲ್ ಫೋನ್ ಖರೀದಿಸಲು ತಮ್ಮ ಅಂಗಡಿಗೆ ಬಂದಿದ್ದರು. ಅವರು ಆನ್‌ಲೈನ್ ಮೋಡ್ ಮೂಲಕ ಹಣ ಪಾವತಿ ಮಾಡುವುದಾಗಿ ಹೇಳಿದರು ಮತ್ತು ಅದಕ್ಕೆ ತಾನು ಒಪ್ಪಿದಾಗ ಗ್ರಾಹಕರು ಹಣ ಪಾವತಿಯ ಬಗ್ಗೆ ಸ್ಕ್ರೀನ್‌ಶಾಟ್ ತೋರಿಸಿದರು. ಆದರೆ ಖರೀದಿದಾರರಿಂದ ನನ್ನ ಖಾತೆಗೆ ಯಾವುದೇ ಹಣ ಪಾವತಿಯಾಗಿಲ್ಲ. ಹೀಗಾಗಿ ಮೊಹ್ಸಿನ್ ಖಾನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ನಕಲಿ ಸ್ಕ್ರೀನ್‌ಶಾಟ್ ತೋರಿಸಿ ಮೊಬೈಲ್ ಖರೀದಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com