ಕೆ ರೋಸಯ್ಯ(ಸಂಗ್ರಹ ಚಿತ್ರ)
ಕೆ ರೋಸಯ್ಯ(ಸಂಗ್ರಹ ಚಿತ್ರ)

ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ, ತಮಿಳು ನಾಡು ಮಾಜಿ ರಾಜ್ಯಪಾಲ ಕೆ ರೋಸಯ್ಯ ನಿಧನ

ತಮಿಳು ನಾಡಿನ ಮಾಜಿ ರಾಜ್ಯಪಾಲ ಮತ್ತು ಹಿಂದಿನ ಏಕೀಕೃತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೊಣಿಜೇಟಿ ರೋಸಯ್ಯ ಶನಿವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಹೈದರಾಬಾದ್(ತೆಲಂಗಾಣ): ತಮಿಳು ನಾಡಿನ ಮಾಜಿ ರಾಜ್ಯಪಾಲ ಮತ್ತು ಹಿಂದಿನ ಏಕೀಕೃತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೊಣಿಜೇಟಿ ರೋಸಯ್ಯ(K Rosaiah) ಶನಿವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅನಾರೋಗ್ಯಕ್ಕೆ ತುತ್ತಾದ ರೋಸಯ್ಯ ಅವರನ್ನು ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಹೈದರಾಬಾದ್ ನಲ್ಲಿ ನೆರವೇರಲಿದೆ. 

ರೋಸಯ್ಯ ಅವರ ನಿಧನಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ರೋಸಯ್ಯ, ಅವರು ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಆಂಧ್ರ ಪ್ರದೇಶದಲ್ಲಿ ಕೆ. ವಿಜಯ ಭಾಸ್ಕರ್ ರೆಡ್ಡಿ, ವೈ ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು. ಹಣಕಾಸು ಸಚಿವರಾಗಿ ಅವರು ಸದನದಲ್ಲಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರು.

2009ರಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಹಠಾತ್ ನಿಧನ ನಂತರ ಹಣಕಾಸು ಸಚಿವರಾಗಿದ್ದ ರೋಸಯ್ಯ ಅವರು ಮುಖ್ಯಮಂತ್ರಿಯಾದರು. ನಂತರ  ತಮಿಳು ನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com