ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರ
ವೆಲ್ಲಿಂಗ್ಟನ್: ತಮಿಳುನಾಡಿನ ಕೂನೂರ್ ನಲ್ಲಿ ನಿನ್ನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಅವರನ್ನು ವೆಲ್ಲಿಂಗ್ಟನ್ ನ ಸೇನಾ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಅವರ ತಂದೆ ಗುರುವಾರ ಹೇಳಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತಿತರ 12 ಮಂದಿ ಸಾವನ್ನಪ್ಪಿದ್ದರು.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಫೋನ್ ಮೂಲಕ ಮಾತನಾಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ತಂದೆ ನಿವೃತ್ತ ಕರ್ನಲ್ ಕೆ.ಪಿ. ಸಿಂಗ್, ವೆಲ್ಲಿಂಗ್ಟನ್ ಗೆ ತೆರಳಿದ್ದು, ವರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಪುತ್ರನ ಆರೋಗ್ಯ ಪರಿಸ್ಥಿತಿ ಕುರಿತಂತೆ ಏನನ್ನೂ ಹೇಳಲು ಸಾಧ್ಯವಿಲ್ಲ, ಯಾವುದನ್ನೂ ಖಚಿತತೆ ಇಲ್ಲ ಎಂದಿದ್ದಾರೆ.
ಕರ್ನಲ್ ಪಿ. ಸಿಂಗ್ ಭೂಪಾಲ್ ನಲ್ಲಿ ವಾಸಿಸುತ್ತಿದ್ದಾರೆ. ಅವರ ನಿವಾಸದ ಪಕ್ಕದಲ್ಲಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಇಶಾನ್, ವರುಣ್ ಸಿಂಗ್ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಬೆಳ್ಳಗೆ ಕೆ.ಪಿ. ಸಿಂಗ್ ಅವರೊಂದಿಗೆ ಮಾತನಾಡಿದ್ದು, ತನ್ನ ಮಗ ಹೋರಾಟಗಾರನಾಗಿದ್ದು, ದುರಂತದಿಂದ ಹೊರ ಬರುವುದಾಗಿ ಹೇಳಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಪ್ರಯೋಗಾರ್ಥ ಪರೀಕ್ಷೆ ವೇಳೆಯಲ್ಲಿ ತೇಜಸ್ ಯುದ್ದ ವಿಮಾನ ಹಾರಾಟ ಸಂದರ್ಭದಲ್ಲಿ ಸಂಭವಿಸಿದ್ದ ಅವಘಡದಿಂದಲೂ ವರುಣ್ ಸಿಂಗ್ ಬದುಕುಳಿದಿದ್ದನ್ನು ಅವರು ನೆನಪಿಕೊಂಡಿದ್ದಾರೆ. ಅವರ ಧೈರ್ಯಶಾಲಿ ಮನೋಭಾವಕ್ಕಾಗಿ ಈ ವರ್ಷ ಶೌರ್ಯ ಚಕ್ರ ಪ್ರಶಸ್ತಿ ಬಂದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ