ಕಾಶಿ: ಶಿಷ್ಟಾಚಾರ ಬದಿಗೊತ್ತಿ ಸ್ಥಳೀಯರಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ 

ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ನ್ನು ಡಿ.13 ರಂದು ಉದ್ಘಾಟನೆ ಮಾಡಿದ್ದು, ಗಂಗಾರತಿಯಲ್ಲಿ ಭಾಗವಹಿಸಿದ್ದರು. 
ಕಾಶಿಯಲ್ಲಿ ಸ್ಥಳೀಯರಿಂದ ಉಡುಗೊರೆ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಕಾಶಿಯಲ್ಲಿ ಸ್ಥಳೀಯರಿಂದ ಉಡುಗೊರೆ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ನ್ನು ಡಿ.13 ರಂದು ಉದ್ಘಾಟನೆ ಮಾಡಿದ್ದು, ಗಂಗಾರತಿಯಲ್ಲಿ ಭಾಗವಹಿಸಿದ್ದರು. 

ಇದಕ್ಕೂ ಮುನ್ನ ಸ್ಥಳೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದರು. ಈ ವೇಳೆ ಪ್ರಧಾನಿ ಶಿಷ್ಟಾಚಾರವನ್ನು ಬದಿಗಿರಿಸಿ ಸ್ಥಳೀಯರು ಆದರದಿಂದ ನೀಡಿದ ಉಡುಗೊರೆಗಳನ್ನು ಸ್ವೀಕರಿಸಿ ಹಸ್ತಲಾಘವ ನೀಡಿದ್ದಾರೆ. 

ತಮ್ಮ ಭದ್ರತಾ ಸಿಬ್ಬಂದಿಗಳಿಗೆ ಪಕ್ಕಕ್ಕೆ ತೆರಳುವಂತೆ ಸೂಚಿಸಿದ ಪ್ರಧಾನಿ ಮೋದಿ, ವ್ಯಕ್ತಿಯೊಬ್ಬರು ನೀಡಿದ ಪಗ್ಡಿ (ಟರ್ಬನ್) ನ್ನು ಸ್ವೀಕರಿಸಿದ್ದಾರೆ. 

ಪ್ರಧಾನಿ ಮೋದಿ ಅವರ ಕಾರು ಸಂಚರಿಸುತ್ತಿದ್ದ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಜನತೆ ಮೋದಿ ಪರ ಘೋಷಣೆ ಕೂಗಿ, ಪುಷ್ಪವೃಷ್ಟಿ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಗ್ಡಿ ಹಾಗೂ ಸ್ಕಾರ್ಫ್ ನ್ನು ನೀಡಲು ಯತ್ನಿಸಿದ ವ್ಯಕ್ತಿಯನ್ನು ಎಸ್ ಪಿಜಿ ಸಿಬ್ಬಂದಿಗಳು ತಡೆದರು. ಆದರೆ ಮಧ್ಯಪ್ರವೇಶಿಸಿದ ಮೋದಿ ಕಾರಿನ ಬಾಗಿಲು ತೆಗೆದು ವ್ಯಕ್ತಿಯಿಂದ ಉಡುಗೊರೆ ಸ್ವೀಕರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com