ಪ್ರಧಾನಿ ಬಗ್ಗೆ ಏಕೆ ನಾಚಿಕೆಪಡುತ್ತೀರಿ?: ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಗೆ ಕೇರಳ ಹೈಕೋರ್ಟ್ ಪ್ರಶ್ನೆ

ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿರುವುದರಿಂದ ನಿಮಗೆ ಏನು ತೊಂದರೆ? ಪ್ರಧಾನಿ ಬಗ್ಗೆ ನೀವು ಏಕೆ ನಾಚಿಕೆಪಡುತ್ತೀರಿ? ಎಂದು ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಮೂಲಭೂತ...
ಕೇರಳ ಉಚ್ಛ ನ್ಯಾಯಾಲಯ
ಕೇರಳ ಉಚ್ಛ ನ್ಯಾಯಾಲಯ

ಕೊಚ್ಚಿ: ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿರುವುದರಿಂದ ನಿಮಗೆ ಏನು ತೊಂದರೆ? ಪ್ರಧಾನಿ ಬಗ್ಗೆ ನೀವು ಏಕೆ ನಾಚಿಕೆಪಡುತ್ತೀರಿ? ಎಂದು ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

"ಅವರು ನಮ್ಮ ಪ್ರಧಾನಿಯೇ ಹೊರತು ಅಮೆರಿಕದ ಪ್ರಧಾನಿಯಲ್ಲ. ಮೋದಿಯವರು ಅಧಿಕಾರಕ್ಕೆ ಬಂದದ್ದು ಜನಾದೇಶದಿಂದ ಹೊರತು ಯಾವುದೇ ಶಾರ್ಟ್‌ಕಟ್‌ಗಳ ಮೂಲಕ ಅಲ್ಲ" ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ಹೇಳಿದ್ದಾರೆ.

"ನೀವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ, ಆ ಸಂಸ್ಥೆಯಿಂದ ನೆಹರು ಹೆಸರನ್ನು ತೆಗೆದುಹಾಕುವ ನಿಲುವನ್ನು ನೀವು ಏಕೆ ತೆಗೆದುಕೊಳ್ಳುತ್ತಿಲ್ಲ? ಮೋದಿ ನಮ್ಮ ಪ್ರಧಾನಿ, ನಿಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿಯವರ ಫೋಟೋದಿಂದ ನಿಮೆಗ ಏನು ಸಮಸ್ಯೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೊಟ್ಟಾಯಂನ ಪೀಟರ್ ಮಾಯಲಿಪರಂಬಿಲ್ ಅವರು ಲಸಿಕೆ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮೋದಿ ಭಾವಚಿತ್ರ ಇಲ್ಲದ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿದ್ದಾರೆ.

ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರ ಅಪ್ರಸ್ತುತ ಎಂದು ವಾದಿಸಿದ ಅರ್ಜಿದಾರರು, ಇತರ ದೇಶಗಳು ನೀಡಿದ ಲಸಿಕೆ ಪ್ರಮಾಣ ಪತ್ರಗಳನ್ನು ನ್ಯಾಯಾಲಕ್ಕೆ ಸಲ್ಲಿಸಿದ್ದಾರೆ.

ಇಂಡೋನೇಷಿಯಾ, ಇಸ್ರೇಲ್, ಜರ್ಮನಿ ಸೇರಿದಂತೆ ಇತರ ದೇಶಗಳಲ್ಲಿ ಲಸಿಕೆ ಪ್ರಮಾಣ ಪತ್ರದಲ್ಲಿ ಮಹತ್ವದ ಮಾಹಿತಿಗಳು ಇದೆ. ಆದರೆ ಅಲ್ಲಿನ ನಾಯಕರ ಫೋಟೋ ಇಲ್ಲ. ಹೀಗಾಗಿ ಭಾರತದಿಂದ ವಿದೇಶಕ್ಕೆ ತೆರಳುವ ವೇಳೆ ಮೋದಿ ಫೋಟೋ ಇರುವ ಪ್ರಮಾಣ ಪತ್ರಕ್ಕಿಂತ ಯಾವುದೇ ಫೋಟೋ ಇಲ್ಲದ ಪ್ರಮಾಣ ಪತ್ರ ನೀಡುವಂತೆ ಎಂ ಪೀಟರ್ ಮನವಿ ಮಾಡಿದ್ದಾರೆ.

"ಸರ್ಕಾರದ ಸಂದೇಶ ಕಳುಹಿಸುವಿಕೆ ಮತ್ತು ಪ್ರಚಾರಗಳು, ವಿಶೇಷವಾಗಿ ಅದು ಸರ್ಕಾರಿ ಹಣವನ್ನು ಬಳಸುವಾಗ, ಯಾವುದೇ ರಾಜಕೀಯ ಪಕ್ಷದ ನಾಯಕನನ್ನು ವ್ಯಕ್ತಿಗತಗೊಳಿಸಬಾರದು. ಇದು ಅರ್ಜಿದಾರರ ಸ್ವತಂತ್ರ ಮತದಾನದ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪೀಟರ್ ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com