ಸ್ವರ್ಣಮಂದಿರದಲ್ಲಿ ಅಪಚಾರ ಘಟನೆ: ಪ್ರಾಯಶ್ಚಿತ್ತಕ್ಕಾಗಿ ಎಸ್ ಜಿಪಿಸಿ ಅಖಂಡ ಪಠ್!

ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪಚಾರವೆಸಗಲು ನಡೆದ ಯತ್ನಕ್ಕೆ ಪ್ರಾಯಶ್ಚಿತ್ತವಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ ಜಿಪಿಸಿ) ಭಾನುವಾರದಂದು ಅಖಂಡ್ ಪಠ್ (ಪವಿತ್ರ ಗ್ರಂಥದ ತಡೆರಹಿತ ಪಠಣೆ)ಯನ್ನು ಪ್ರಾರಂಭಿಸಿದೆ.
ಅಮೃತಸರದಲ್ಲಿರುವ ಸ್ವರ್ಣ ಮಂದಿರ
ಅಮೃತಸರದಲ್ಲಿರುವ ಸ್ವರ್ಣ ಮಂದಿರ
Updated on

ಅಮೃತಸರ: ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪಚಾರವೆಸಗಲು ನಡೆದ ಯತ್ನಕ್ಕೆ ಪ್ರಾಯಶ್ಚಿತ್ತವಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ ಜಿಪಿಸಿ) ಭಾನುವಾರದಂದು ಅಖಂಡ್ ಪಠ್ (ಪವಿತ್ರ ಗ್ರಂಥದ ತಡೆರಹಿತ ಪಠಣೆ)ಯನ್ನು ಪ್ರಾರಂಭಿಸಿದೆ.
 
ಎಸ್ ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಅಖಂಡ ಪಠ್ ಚಾಲನೆ ವೇಳೆ ಉಪಸ್ಥಿತರಿದ್ದರು. ಗುರುದ್ವಾರದಲ್ಲಿ ಶನಿವಾರ ಸಂಜೆ ನಡೆದ ಅಪಚಾರದ ಯತ್ನದ ಘಟನೆ ಸಿಖ್ ಸಮುದಾಯದಲ್ಲಿ ಆಳವಾದ ಮಾನಸಿಕ ಮತ್ತು ಆಧ್ಯಾತ್ಮಿಕ ದುಃಖವನ್ನುಂಟು ಮಾಡಿದೆ ಎಂದು ಹರ್ಜಿಂದರ್ ಸಿಂಗ್ ಹೇಳಿದ್ದಾರೆ. 

ಈ ಘಟನೆಯ ಹಿಂದಿನ ಷಡ್ಯಂತ್ರವನ್ನು ಸರ್ಕಾರ ಬಹಿರಂಗಗೊಳಿಸಬೇಕು, ಇಂತಹ ಘಟನೆಗಳನ್ನು ತಪ್ಪಿಸದೇ ಇದ್ದಲ್ಲಿ ಸರ್ಕಾರ ರಾಜ್ಯದಲ್ಲಿ ಹದಗೆಡುವ ವಾತಾವರಣಕ್ಕೆ ಹೊಣೆಯಾಗಬೇಕಾಗುತ್ತದೆ ಎಂದು ಹರ್ಜಿಂದರ್ ಸಿಂಗ್ ಎಚ್ಚರಿಸಿದ್ದಾರೆ.
 
ಶನಿವಾರ ಸಿಖ್​​ರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರ ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಯುವಕನನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ಈ ಘಟನೆ ಬೆನ್ನಲ್ಲೇ ಕಪುರ್ತಲಾದಲ್ಲೂ ಇಂಥಹದ್ದೇ ಘಟನೆ ವರದಿಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com