ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಚೀನಾ- ಭಾರತದ ನಡುವಿನ ಮಾತುಕತೆ ಉಭಯ ರಾಷ್ಟ್ರಗಳಿಗೂ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.
ಈಶಾನ್ಯ ಗಡಿ ಭಾಗದಲ್ಲಿ ಫೆಬ್ರವರಿಯಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಬಳಿಕ ಪರಿಸ್ಥಿತಿ ಸಹಜವಾಗಿದ್ದು, ಉಳಿದ ವಿಷಯಗಳೂ ಇತ್ಯರ್ಥವಾಗಲಿದೆ ಎಂದು ನರವಾಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಂತಕರ ಚಾವಡಿಯೊಂದರಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಸಂವಾದಾತ್ಮಕ ಅಧಿವೇಶನದಲ್ಲಿ ಮಾತನಾಡಿರುವ ಜನರಲ್ ನಾರವಣೆ, ಹಲವು ಮಟ್ಟದಲ್ಲಿ ಉಭಯ ರಾಷ್ಟ್ರಗಳ ಸೇನಾಪಡೆಗಳು ಮಾತುಕತೆಯಲ್ಲಿ ತೊಡಗಿವೆ, ಫೆಬ್ರವರಿಯಲ್ಲಿ ಸೇನಾ ಹಿಂತೆಗೆತವನ್ನು ಉಭಯ ಸೇನೆಗಳೂ ಬದ್ಧವಾಗಿದೆ ಎಂದು ನರವಾಣೆ ಹೇಳಿದ್ದಾರೆ.
Advertisement