ದುರಹಂಕಾರ, ಅಜ್ಞಾನದ ವೈರಸ್‌ಗೆ ಲಸಿಕೆ ಇಲ್ಲ: ಡೋಸ್ ಕೊರತೆ ಕುರಿತು ರಾಹುಲ್ ಟೀಕೆಗೆ ಕೇಂದ್ರ ಸಚಿವ ತಿರುಗೇಟು!

ದೇಶದಲ್ಲಿ ಕೊರೋನಾ ಲಸಿಕೆ ಲಭ್ಯತೆ ಕುರಿತು ಪ್ರಶ್ನೆ ಕೇಳಿದ್ದ ರಾಹುಲ್ ಗಾಂಧಿ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ತಿರುಗೇಟು ನೀಡಿದ್ದಾರೆ. "ದುರಹಂಕಾರ ಮತ್ತು ಅಜ್ಞಾನದ ವೈರಸ್‌ಗೆ ಯಾವುದೇ ಲಸಿಕೆ ಇಲ್ಲ" ಎಂದು ಸಚಿವರು ಹೇಳಿದ್ದಾರೆ.
ಹರ್ಷ್ ವರ್ಧನ್
ಹರ್ಷ್ ವರ್ಧನ್

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಲಭ್ಯತೆ ಕುರಿತು ಪ್ರಶ್ನೆ ಕೇಳಿದ್ದ ರಾಹುಲ್ ಗಾಂಧಿ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ತಿರುಗೇಟು ನೀಡಿದ್ದಾರೆ. "ದುರಹಂಕಾರ ಮತ್ತು ಅಜ್ಞಾನದ ವೈರಸ್‌ಗೆ ಯಾವುದೇ ಲಸಿಕೆ ಇಲ್ಲ" ಎಂದು ಸಚಿವರು ಹೇಳಿದ್ದಾರೆ.

"ನಿನ್ನೆ, ನಾನು ಜುಲೈ ತಿಂಗಳಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಸತ್ಯವನ್ನು ಹೇಳಿದ್ದೇನೆ. ರಾಹುಲ್ ಗಾಂಧಿ ಅವರ ಸಮಸ್ಯೆ ಏನಿದೆ? ಅವರು ಓದುವುದಿಲ್ಲವೆ? ಅವರಿಗೆ ಅರ್ಥವಾಗುತ್ತಿಲ್ಲವೇ? ದುರಹಂಕಾರ ಮತ್ತು ಅಜ್ಞಾನದ ವೈರಸ್‌ಗೆ ಲಸಿಕೆ ಇಲ್ಲ! ”ಎಂದು ವರ್ಧನ್ ಟ್ವೀಟ್ ಮಾಡಿದ್ದಾರೆ.

ಗುರುವಾರ ರಾಹುಲ್ ಗಾಂಧಿ ಜುಲೈ ತಿಂಗಳು ಪ್ರಾರಂಭವಾಗಿದೆ. ಆದರೆ ಲಸಿಕೆಗಳು ಬಂದಿಲ್ಲ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಕೋವಿಡ್ ಲಸಿಕೆ ಅಭಿಯಾನದಬಗ್ಗೆ ವಿವಿಧ ನಾಯಕರು "ಬೇಜವಾಬ್ದಾರಿಯುತ ಹೇಳಿಕೆಗಳನ್ನು" ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ ಮತ್ತು ಸಾಂಕ್ರಾಮಿಕ ರೋಗದ ಮಧ್ಯೆ "ರಾಜಕೀಯ ಮಾಡಲು ನಾಚಿಕೆಯಿಲ್ಲವೆ, ಇಂತಹಾ ಪ್ರಚೋದನೆಯಿಂದ" ದೂರವಿರಲು ವಿನಂತಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಅವರು, ಈ ನಾಯಕರನ್ನು "ಯೋಜನೆಯಲ್ಲಿ ಹೆಚ್ಚಿನ ಶಕ್ತಿ ವ್ಯಯವಾಗಬೇಕು ಹೊರತು ಭಯವನ್ನು ಸೃಷ್ಟಿಸುವುದರಲ್ಲಿ ಅಲ್ಲ" ಎಂದು ಒತ್ತಾಯಿಸಿದರು. "ಅತಿದೊಡ್ಡ ಲಸಿಕೆ ಅಭಿಯಾನ ಬಗ್ಗೆ ವಿವಿಧ ನಾಯಕರ ಬೇಜವಾಬ್ದಾರಿ ಹೇಳಿಕೆಗಳನ್ನು ನಾನು ನೋಡುತ್ತಿದ್ದೇನೆ. ಈ ನಾಯಕರ ಉದ್ದೇಶಗಳನ್ನು ಜನರು ನಿರ್ಣಯಿಸಬೇಕಿದೆ.ಅದಕ್ಕೆ ಸತ್ಯ ಹೇಳಲೇಬೇಕು. ಭಾರತ ಸರ್ಕಾರಶೇಕಡಾ 75 ರಷ್ಟು ಲಸಿಕೆಗಳನ್ನು ಉಚಿತವಾಗಿ ನೀಡಿದ ನಂತರ, ಲಸಿಕೆ ಅಭಿಯಾನ ವೇಗವನ್ನು ಪಡೆದುಕೊಂಡಿದೆ ಮತ್ತು ಜೂನ್‌ನಲ್ಲಿ 11.50 ಕೋಟಿ ಡೋಸ್‌ಗಳನ್ನು ನೀಡಲಾಗಿದೆ" ಎಂದು ವರ್ಧನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜುಲೈಗೆ ಲಸಿಕೆ ಸರಬರಾಜು ಮಾಡುವ ಬಗ್ಗೆ ರಾಜ್ಯಗಳಿಗೆ ಮೊದಲೇ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು. "ಜುಲೈಗೆ ಕೊರೋನಾ ಲಸಿಕೆ ಸರಬರಾಜು ಬಗ್ಗೆ ರಾಜ್ಯಗಳಿಗೆ ಮೊದಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು 15 ದಿನಗಳ ಮೊದಲು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ, ಜೊತೆಗೆ ದಿನದಪೂರೈಕೆಯ ವಿವರಗಳೊಂದಿಗೆ. ಜುಲೈನಲ್ಲಿ ಒಟ್ಟು 12 ಕೋಟಿ ಡೋಸೇಜ್ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗೆ ಸಹ ಇದರ ಹೊರತಾಗಿ ಲಸಿಕೆ ಪೂರೈಕೆ ಇರುತ್ತದೆ ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ರಾಜ್ಯಗಳಲ್ಲಿ ಸಮಸ್ಯೆಗಳಿದ್ದರೆ, ಅವರು ತಮ್ಮ ಲಸಿಕೆ ಅಭಿಯಾನವನ್ನು ಉತ್ತಮವಾಗಿ ಯೋಜಿಸುವ ಅಗತ್ಯವಿದೆ ಎಂದು ಇದು ತೋರಿಸುತ್ತದೆ ಎಂದು ಅವರು ಹೇಳಿದರು. "ಅಂತರಾಜ್ಯ ಯೋಜನೆ ಮತ್ತು ಜಾರಿ ರಾಜ್ಯಗಳ ಜವಾಬ್ದಾರಿ" ಎಂದು ಅವರು ಹೇಳಿದರು. "ಈ ನಾಯಕರು ಈ ಸಂಗತಿಗಳ ಬಗ್ಗೆ ತಿಳಿದಿದ್ದರೂ ಇನ್ನೂ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದರೆ, ನಾನು ಅದನ್ನು ಅತ್ಯಂತ ದುರದೃಷ್ಟಕರವೆಂದು ಪರಿಗಣಿಸುತ್ತೇನೆ. ಅವರಿಗೆ ಗೊತ್ತಿಲ್ಲದಿದ್ದರೆ, ಅವರು ಆಡಳಿತ ಹೇಗೆ ನಡೆಯುತ್ತಿದೆ ಎನ್ನುವುದನ್ನು ನೋಡಬೇಕಿದೆ. ಯೋಜನೆಯಲ್ಲಿ ಹೆಚ್ಚಿನ ಶಕ್ತಿಯನ್ನು ವ್ಯಯಿಸುವಂತೆ ನಾನು ನಾಯಕರನ್ನು ಮತ್ತೊಮ್ಮೆ ವಿನಂತಿಸುತ್ತೇವೆ."

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ದೇಶದಲ್ಲಿ ನೀಡಲಾಗುವ ಸಂಚಿತ ಕೊರೋನಾ ಲಸಿಕೆ ಪ್ರಮಾಣವು ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿಯಲ್ಲಿ 34 ಕೋಟಿ ದಾಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com