"ಉತ್ತರ ಪ್ರದೇಶ ಚುನಾವಣೆ 2022: ಬಿಎಸ್ ಪಿ, ಎಸ್ ಪಿ ಇಲ್ಲದೆಯೂ ಸ್ಪರ್ಧಿಸುವ ಸಾಮರ್ಥ್ಯ ಕಾಂಗ್ರೆಸ್ ಗೆ ಇದೆ" 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು ಪ್ರಮುಖ ಪಕ್ಷಗಳೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಎಸ್ ಪಿ ಹಾಗೂ ಬಿಎಸ್ ಪಿ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ. 
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು ಪ್ರಮುಖ ಪಕ್ಷಗಳೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಎಸ್ ಪಿ ಹಾಗೂ ಬಿಎಸ್ ಪಿ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ. 

ಕಾಂಗ್ರೆಸ್ ನ ರಾಜ್ಯ ವಿಭಾಗದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಎಸ್ ಪಿ, ಬಿಎಸ್ ಪಿಯೊಂದಿಗಿನ ಮೈತ್ರಿ ಇಲ್ಲದೆಯೂ ಸ್ಪರ್ಧಿಸುವ ಸಾಮರ್ಥ್ಯ ಕಾಂಗ್ರೆಸ್ ಗೆ ಇದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸ್ವತಂತ್ರವಾಗಿ ಆಡಳಿತಕ್ಕೆ ಬರಲಿದೆ ಎಂದು ಅಜಯ್ ಕುಮಾರ್ ಲಲ್ಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ವಾಧ್ರ ಅವರ ಉಸ್ತುವಾರಿಯಲ್ಲಿ ಈ ಬಾರಿ ಕಾಂಗ್ರೆಸ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದು, ಮೂರು ದಶಕಗಳ ಅಧಿಕಾರದ ಕನಸು ನನಸಾಗಲಿದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.

ಅಧಿಕಾರದ ದಾಹದಲ್ಲಿರುವ ಉತ್ತರ ಪ್ರದೇಶದ ಸರ್ಕಾರಕ್ಕೆ ಕಾಂಗ್ರೆಸ್ ಪ್ರಮುಖ ಸವಾಲಾಗಿದೆ. ಕೇವಲ 5 ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷ ಸಮಾಜವಾದಿ ಪಕ್ಷಕ್ಕಿಂತಲೂ ಪರಿಣಾಮಕಾರಿಯಾದ ವಿಪಕ್ಷ ಎಂಬುದನ್ನು ಸಾಬೀತುಪಡಿಸಿರುವುದಾಗಿ ಅಜಯ್ ಕುಮಾರ್ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com