ತಪ್ಪಿಸಿಕೊಳ್ಳಲು ಯತ್ನಿಸುವ ಅಪರಾಧಿಗಳ ಮೇಲೆ ಗುಂಡು ಹಾರಿಸುವುದು ಒಂದು ಮಾದರಿಯಾಗಬೇಕು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ತಪ್ಪಿಸಿಕೊಳ್ಲಲು. ಪರಾರಿಯಾಗಲು ಯತ್ನಿಸುವ ಅಪರಾಧಿಗಳಿಗೆ ಗುಂಡೇಟು ಹೊಡೆಯುವುದು ಒಂದು ಮಾದರಿಯಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶರ್ಮಾ ಮೇಲಿನ ಮಾತುಗಳನ್ನಾಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
Updated on

ಗುವಾಹತಿ: ತಪ್ಪಿಸಿಕೊಳ್ಲಲು. ಪರಾರಿಯಾಗಲು ಯತ್ನಿಸುವ ಅಪರಾಧಿಗಳಿಗೆ ಗುಂಡೇಟು ಹೊಡೆಯುವುದು ಒಂದು ಮಾದರಿಯಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶರ್ಮಾ ಮೇಲಿನ ಮಾತುಗಳನ್ನಾಡಿದ್ದಾರೆ. 

ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಅಪರಾಧಿಗಳ ಮೇಲೆ ಗುಂಡು ಹಾರಿಸುವ ಘಟನೆಗಳ ಹೆಚ್ಚಳಕ್ಕೆ ಸಂಬಂಧಿಸಿ ಇದು ಒಂದು ಮಾದರಿ ಎಂದು ನೀವು ಭಾವಿಸಿದ್ದೀರಾ ಎಂದು ಪ್ರಶ್ನಿಸಲಾಗಿದೆ. ಆಗ ಮುಖ್ಯಮಂತ್ರಿ ರೆ ಹೌದು, “ಇದು ಒಂದು ಮಾದರಿಯಾಗಿರಬೇಕು” ಎಂದು ನಂಬಿದ್ದೇನೆ ಎಂದರು.

"ಯಾರಾದರೂ ಪೊಲೀಸ್ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಓಡಿಹೋಗಲು ಪ್ರಯತ್ನಿಸಿದರೆ, ಮತ್ತು ಅವನು ಅತ್ಯಾಚಾರಿಯಾಗಿದ್ದಲ್ಲಿ ಪೋಲೀಸರು ಅವನ ಎದೆಗೆ ಗುಂಡು ಹಾರಿಸುವುದಿಲ್ಲ ಆದರೆ ಕಾಲಿಗೆ ಗುಂಡು ಹಾರಿಸುವುದು ಕಾನೂನು" ಎಂದು ಅವರು ಹೇಳಿದ್ದಾರೆ. ‘Redefining Policing Standards in Assam’ ಕುರಿತಾದ ಸಮಾವೇಶದಲ್ಲಿ , ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಿದ್ದರು

ಗೃಹಖಾತೆಯನ್ನೂ ಹೊಂದಿರುವ ಶರ್ಮಾ ಜಾನುವಾರು ಕಳ್ಳಸಾಗಣೆಯಲ್ಲಿ ತೊಡಗಿರುವವರೊಂದಿಗೆ ಪೊಲೀಸರು ವಿಶೇಷವಾಗಿ ಕಟ್ಟುನಿಟ್ಟಾಗಿರಬೇಕು ಎಂದು ಹೇಳಿದ್ದಾರೆ."ಹಸುಗಳನ್ನು ಕಳ್ಳಸಾಗಣೆ ಮಾಡುವವರನ್ನು ಯಾವುದೇ ಬೆಲೆ ತೆತ್ತಾದರೂ ಹಿಡಿಯಬೇಕು.ನಮ್ಮ ಹಸುಗಳನ್ನು ರಕ್ಷಿಸಬೇಕಾದ ಕಾರಣ ಅದು ಚಾರ್ಜ್‌ಶೀಟ್ ಹಂತಕ್ಕೆ ಹೋಗುವುದನ್ನು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದರು,  ಹಸು ನಮಗೆ ದೇವರಂತೆ." ಎಂದರು.

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ (ಶ್ರೀರಾಂಪುರ, ಗೊಸ್ಸೈಗಾಂವ್, ಧುಬ್ರಿ, ಮತ್ತು ಸಗೋಲಿಯಾ) ಗಡಿಯಲ್ಲಿರುವ ಜಿಲ್ಲೆಗಳ ಉಸ್ತುವಾರಿ ಅಧಿಕಾರಿಗಳನ್ನು ಅವರು ನಿರ್ದಿಷ್ಟ ಉದ್ದೇಶದ ಕುರಿತು ಗಮನಿಸುವಂತೆ ಹೇಳಿದ್ದಾರೆ.

ಮೇ ತಿಂಗಳಲ್ಲಿ ಶರ್ಮಾ ಅಧಿಕಾರ ವಹಿಸಿಕೊಂಡಾಗಿನಿಂದ, ಕನಿಷ್ಠ ಎಂಟು ಅಪರಾಧಿಗಳು - ದನ-ಕಳ್ಳಸಾಗಣೆ, ಅತ್ಯಾಚಾರ, ಕೊಲೆ ಮತ್ತು ಮಾದಕವಸ್ತು ಕಳ್ಳತನಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ - ಬಂಧನದಲ್ಲಿದ್ದಾಗ ಗುಂಡೇಟಿನ ಗಾಯಗಳಾಗಿದೆ. ಪ್ರಶ್ನಿಸಿದರೆ ಪೊಲೀಸರು ಪರಾರಿಯಾಗಲು ಪ್ರಯತ್ನಿಸಿದ್ದಾರೆಂದು  ಆರೋಪಿಸಿದ್ದಾರೆ. ಇತರ ಸಂಘಟಿತ ಅಪರಾಧಗಳ ನಡುವೆ ಮಾದಕವಸ್ತು ಕಳ್ಳಸಾಗಣೆ ಮತ್ತು ಜಾನುವಾರು ಕಳ್ಳಸಾಗಣೆ ವಿರುದ್ಧ ಶರ್ಮಾ ಸರ್ಕಾರವು ಪ್ರಮಾಣದಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. "ಇಂದು, ಇಬ್ಬರು ಅಪಹರಣಕಾರರನ್ನು ಬಂಧಿಸಿದಾಗ ಅವರು ಪ್ರತಿಭಟಿಸಿದರೆ ಪೊಲೀಸರಿಗೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಇಲ್ಲದಿದ್ದರೆ ಪೊಲೀಸ್ ಸ್ವತಃ ಸಾಯಬೇಕಾಗಿದೆ " ಎಂದು ಸಿಎಂ ಹೇಳಿದರು.

ಗುಂಡೇಟಿನ ಘಟನೆಗಳು ರಾಜ್ಯದಲ್ಲಿ ಒಂದು ಮಾದರಿಯಾಗುತ್ತಿದೆಯೇ ಎಂದು ಯಾರಾದರೂ ನನ್ನನ್ನು ಕೇಳಿದರೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಅಪರಾಧಿಯನ್ನು ಒಳಗೊಂಡಿದ್ದರೆ ಗುಂಡೇಟು ಮಾದರಿಯಾಗಿರಬೇಕು ಎಂದು ನಾನು ಉತ್ತರಿಸುತ್ತೇನೆ.ಆದರೆ ಯಾವ ಕಾನೂನು ಮಾಡಲು ನಮಗೆ ಅನುಮತಿ ನೀಡಿದೆ, ನಾವು ಮಾಡಬೇಕು ನಮ್ಮ ಕೆಲಸವು ಜನರ ಒಳಿತಿಗಾಗಿ ಮತ್ತು ನಮ್ಮ ಸ್ವಂತ ಹಿತಾಸಕ್ತಿಗೆ ಪೂರಕವಾಗಿ ಅಲ್ಲ.ನಮ್ಮ ಆತ್ಮಸಾಕ್ಷಿಯನ್ನು ಸ್ಪಷ್ಟವಾಗಿರಿಸಿಕೊಳ್ಳಬೇಕು" 

ಸಾಮಾನ್ಯ ಕಾರ್ಯವಿಧಾನದಡಿಯಲ್ಲಿ, ಆರೋಪಿಯನ್ನು ಚಾರ್ಜ್‌ಶೀಟ್ ಮತ್ತು ಶಿಕ್ಷೆಗೆ ಗುರಿಪಡಿಸಲಾಗುತ್ತದೆ, ಆದರೆ ಯಾರಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, “ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.

ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, “ಎನ್‌ಕೌಂಟರ್‌ಗಳಿಗೆ ಪೊಲೀಸರಿಗೆ ಅಧಿಕಾರವಿಲ್ಲ. ಪ್ರಜಾಪ್ರಭುತ್ವದಲ್ಲಿ, ಅಪರಾಧವನ್ನು ಕಾನೂನಿನ ಮೂಲಕ ಶೋಧಿಸಲಾಗುತ್ತದೆ.ಮತ್ತು ಎದುರಿಸುವುದಿಲ್ಲ. ಬೇರೆ ಮಾರ್ಗಗಳಿಲ್ಲದಿದ್ದಾಗ ಮಾತ್ರ ಇವು ಸಂಭವಿಸುತ್ತವೆ. ” ಅತ್ಯಾಚಾರ, ಕೊಲೆ, ಶಸ್ತ್ರಾಸ್ತ್ರ, ಮಾದಕ ವಸ್ತುಗಳು, ಸುಲಿಗೆ ಮುಂತಾದ ಅಪರಾಧಗಳ ಚಾರ್ಜ್‌ಶೀಟ್‌ಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಶರ್ಮಾ ಒತ್ತಿ ಹೇಳಿದರು. "ಚಾರ್ಜ್‌ಶೀಟ್ ತ್ವರಿತವಾಗಿ ಸಲ್ಲಿಸಿದರೆ ಅಸ್ಸಾಂನಲ್ಲಿ ಕ್ರಿಮಿನಲ್ ಪ್ರಕರಣಗಳು ಶೇಕಡಾ 50 ರಷ್ಟು ಕಡಿಮೆಯಾಗುತ್ತವೆ" ಎಂದು ಅವರು ಹೇಳಿದರು.

ಪಾಸ್ ಪೋರ್ಟ್ ಅರ್ಜಿಗಳ ಭಾಗವಾಗಿ ಪೊಲೀಸ್ ಪರಿಶೀಲನೆಯ ವಿಷಯವನ್ನು ಎತ್ತಿದ ಸರ್ಮಾ, "ಅನುಮಾನಾಸ್ಪದ ರಾಷ್ಟ್ರೀಯತೆ" ಎಂದು ಪೊಲೀಸರು ಶಂಕಿಸುವವರನ್ನು ಹೊರತುಪಡಿಸಿ, ಏಳು ದಿನಗಳಲ್ಲಿ ಅದನ್ನು ತೆರವುಗೊಳಿಸುವಂತೆ ಪೊಲೀಸರನ್ನು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com