ಟ್ವಿಟರ್ ಗೆ ಯಾವುದೇ ರಕ್ಷಣೆ ನೀಡಿಲ್ಲ, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಮುಕ್ತ ಅವಕಾಶವಿದೆ: ದೆಹಲಿ ಹೈಕೋರ್ಟ್

ಐಟಿ ನಿಯಮಗಳು 2021ನ್ನು ಅನುಸರಿಸದ ಆರೋಪಕ್ಕೊಳಪಟ್ಟ ಟ್ವಿಟರ್ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಟ್ವಿಟರ್
ಟ್ವಿಟರ್
Updated on

ನವದೆಹಲಿ: ಐಟಿ ನಿಯಮಗಳು 2021ನ್ನು ಅನುಸರಿಸದ ಆರೋಪಕ್ಕೊಳಪಟ್ಟ ಟ್ವಿಟರ್ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಟ್ವಿಟರ್ ಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ, ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಕ್ತ ಅವಕಾಶವಿದೆ ಎಂದು ಹೇಳಿದೆ. ಅಲ್ಲದೇ, ದೇಶದಲ್ಲಿ ಟ್ವಿಟರ್ ಕಾರ್ಯನಿರ್ವಹಿಸಲು ಬಯಸಿದರೆ, ಇಲ್ಲಿನ ನಿಯಮಗಳನ್ನು ಅನುಸರಿಸುವಂತೆ ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.

ಎಲ್ಲಾ ಪ್ರಮುಖ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿದ್ದರೂ ಕಳೆದ 42 ದಿನಗಳಿಂದಲೂ ಟ್ವಿಟರ್ ಸಂಸ್ಥೆ ಸಂಪೂರ್ಣವಾಗಿ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಹೆಚ್ಚುವರಿ ಸಾಲಿಸಿಟಿರ್ ಜನರಲ್ ವರದಿ ಸಲ್ಲಿಕೆ ಬಳಿಕ ನ್ಯಾಯಾಲಯ ಈ ರೀತಿಯಲ್ಲಿ ಹೇಳಿದೆ.

ನೂತನ ಐಟಿ ನಿಯಮಗಳ ಅನುಸರಣೆ ಸಂಬಂಧ ಟ್ವಿಟರ್ ಸಂಸ್ಥೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಟ್ವಿಟರ್ ಪರ ವಕೀಲ ಎಸ್ ಆರ್ ಸಜನ್ ಪೂವಯ್ಯ ಅವರಿಗೆ ಹೇಳಿದ ನ್ಯಾಯಾಧೀಶೆ ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠ, ಈ ವಿಚಾರವನ್ನು ಜುಲೈ 8ಕ್ಕೆ ಮುಂದೂಡಿತು.

ಕುಂದುಕೊರತೆ ಅಧಿಕಾರ ನೇಮಕ ಮಾತ್ರವಲ್ಲದೇ, ನೂತನ ನಿಯಮಗಳಡಿ ಅನುಸರಿಸದೆ ಇರುವ ಎಲ್ಲಾ ಅಂಶಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕೆಂದು ನ್ಯಾಯಾಲಯ ಟ್ವಿಟರ್ ಇಂಕ್ ವಕೀಲರಿಗೆ ಸೂಚಿಸಿತು. ಕುಂದುಕೊರತೆ ಅಧಿಕಾರಿ ನೇಮಕ ಮಾಡಲು ವಿಳಂಬ ಮಾಡುತ್ತಿರುವ ಟ್ವಿಟರ್ ಸಂಸ್ಥೆ ಧೋರಣೆ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ಪ್ರಕ್ರಿಯೆಗಾಗಿ ಇನ್ನು ಎಷ್ಟು ದಿನಗಳು ಬೇಕಾಗುತ್ತದೆ ಎಂದು ಕೇಳಿದ ನ್ಯಾಯಾಧೀಶೆ ರೇಖಾ ಪಲ್ಲಿ, ಟ್ವಿಟರ್ ನಮ್ಮ ದೇಶದಲ್ಲಿ ಬಯಸಿದಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಭಾವಿಸಿದರೆ, ನಾನು ಅದಕ್ಕೆ ಅನುಮತಿಸುವುದಿಲ್ಲ ಎಂದರು. 

ಈ ಮಧ್ಯೆ, ಸ್ಯಾನ್ ಫ್ರಾನ್ಸಿಸ್ಕೋನಲ್ಲಿನ ಟ್ವಿಟರ್ ನಿಂದ ಸ್ಪಷ್ಪ ಸೂಚನೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ಸಮಯ ವಲಯದಲ್ಲಿನ ವ್ಯತ್ಯಾಸಗಳಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಟ್ವಿಟರ್ ಪರ ಹಾಜರಾದ ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com