ಕೇಂದ್ರ ಸಚಿವ ಸಂಪುಟ ಪುನರ್ ರಚನೆ: ಚಿರಾಗ್ ವಿರುದ್ಧ ಪಶುಪತಿ ಕುಮಾರ್ ಪಾರಸ್ ಕ್ಷಿಪ್ರಕ್ರಾಂತಿಯನ್ನು ಯಶಸ್ವಿಯಾಗಿಸಿದ್ದು ಹೀಗೆ...

ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಬಿಹಾರದ ಪಶುಪತಿ ಕುಮಾರ್ ಪಾರಸ್ ಜು.11 ರಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಪಶುಪತಿ ಕುಮಾರ್ ಪಾರಸ್
ಪಶುಪತಿ ಕುಮಾರ್ ಪಾರಸ್
Updated on

ಪಾಟ್ನ: ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಬಿಹಾರದ ಪಶುಪತಿ ಕುಮಾರ್ ಪಾರಸ್ ಜು.11 ರಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಸಹೋದರ ರಾಮ್ ವಿಲಾಸ್ ಪಾಸ್ವಾನ್ ಅವರ ನೆರಳಿನಲ್ಲೇ ದೀರ್ಘಕಾಲ ರಾಜಕಾರಣದಲ್ಲಿದ್ದವರು ಪಶುಪತಿ ಕುಮಾರ್ ಪಾರಸ್ ಸಹೋದರನ ಪುತ್ರ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದು ಕೇಂದ್ರ ಸಚಿವರಾಗಿದ್ದಾರೆ. 

ಪಾಸ್ವಾನ್ ಜೀವಿಸಿದ್ದಾಗ ಲೋಕ ಜನಶಕ್ತಿಯ ಬಿಹಾರ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪಾರಸ್ ಈಗ ಇಬ್ಭಾಗಗೊಂಡ ಎಲ್ ಜೆಪಿಯ ಒಂದು ಬಣದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. 

1978 ರಲ್ಲಿ ಜನತಾ ಪಕ್ಷದದಿಂದ ಅಲೌಲಿ ಕ್ಷೇತ್ರದಿಂದ (ರಾಮ್ ವಿಲಾಸ್ ಪಾಸ್ವಾನ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ) ಸ್ಪರ್ಧಿಸಿ ಶಾಸಕರಾಗಿದ್ದ ಪಾರಸ್, ನಂತರದಲ್ಲಿ ಎಲ್ ಜೆಪಿಯಿಂದ ಸ್ಪರ್ಧಿಸಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2017 ರಲ್ಲಿ ಬಿಹಾರದಲ್ಲಿ ಎನ್ ಡಿಎ ಸರ್ಕಾರ ರಚನೆಯಾದಾಗ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು. 

2019 ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಪಾರಸ್ ಸ್ಪರ್ಧಿಸಿದ್ದು ಸಹೋದರರ ನಡುವಿನ ಅನ್ಯೋನ್ಯತೆಗೆ ಸಾಕ್ಷಿಯಾಗಿತ್ತು. 

ಆದರೆ ಈ ಬಳಿಕ ಎಲ್ ಜೆಪಿ ರಾಷ್ಟ್ರಾಧ್ಯಕ್ಷನನ್ನಾಗಿ ಚಿರಾಗ್ ಪಾಸ್ವಾನ್ ಅವರನ್ನು ನೇಮಕ ಮಾಡಿದ್ದು ಪಾರಸ್ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಸೂಕ್ತ ಸಮಯದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿ ಎಲ್ ಜೆಪಿ ಪಕ್ಷದ ಮೇಲೆ ಹಿಡಿತ ಸಾಧಿಸಿದರು ಪಾರಸ್.

ರಾಮ್ ವಿಲಾಸ್ ಪಾಸ್ವಾನ್ ಅವರ ಸ್ಥಾನದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದ ಚಿರಾಗ್ ಪಾಸ್ವಾನ್, ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಉತ್ತಮ ಸ್ಥಿತಿಯಲ್ಲಿ ಮುನ್ನಡೆಸಲು ವಿಫಲರಾದರು ಹಾಗೂ ನಿತೀಶ್ ಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಎಲ್ ಜೆಪಿಯ ಮೇಲೆ ಹಿಡಿತ ಸಾಧಿಸಲು ಪಾರಸ್ ಬಳಸಿಕೊಂಡರು. 

ಎಲ್ ಜೆಪಿಯ ಸಂಸದರ ಬೆಂಬಲ ಪಡೆದ ಪಾರಸ್ ಚಿರಾಗ್ ನ್ನು ಲೋಕಸಭೆಯಲ್ಲಿ ಎಲ್ ಜೆಪಿ ನಾಯಕನ ಸ್ಥಾನದಿಂದ ಕೆಳಗಿಳಿಸಿ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದರು. 

ಚಿರಾಗ್ ಚುನಾವಣಾ ಆಯೋಗದ ಎದುರು ಪಾರಸ್ ನಡೆಯನ್ನು ಪ್ರಶ್ನಿಸಿದ್ದರಾದರೂ ಅದು ಫಲಿಸಲಿಲ್ಲ. ಪಾರಸ್ ಗೆ ಎಲ್ ಜೆಪಿ ಕೋಟಾದಡಿ ಕೇಂದ್ರ ಸಚಿವ ಸ್ಥಾನ ನೀಡದಂತೆ ಪ್ರಧಾನಿ ಮೋದಿಗೆ ಚಿರಾಗ್ ಪಾಸ್ವಾನ್ ಪತ್ರವನ್ನೂ ಬರೆದಿದ್ದರು. ಅಷ್ಟೇ ಅಲ್ಲದೇ ಪಾರಸ್ ನ್ನು ಕೇಂದ್ರ ಸಚಿವರನ್ನಾಗಿ ಮಾಡಿದರೆ ಕೋರ್ಟ್ ಮೆಟ್ಟಿಲೇರುವುದಾಗಿಯೂ ಚಿರಾಗ್ ಹೇಳಿದ್ದರು. ಈ ಎಲ್ಲದರ ನಡುವೆ 68 ವರ್ಷದ ಪಾರಸ್ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com