ಮೋಹನ್ ಭಾಗವತ್ ರ 'ಡಿಎನ್‌ಎ' ಹೇಳಿಕೆ ಒಪ್ಪುವುದಾದರೆ ಮತಾಂತರ ವಿರೋಧಿ ಕಾನೂನು ಯಾಕೆ ಬೇಕು?: ದಿಗ್ವಿಜಯ್ ಸಿಂಗ್

ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ 'ಎಲ್ಲ ಭಾರತೀಯರ ಡಿಎನ್ಎ' ಹೇಳಿಕೆ ಕುರಿತಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹಾಗಿದ್ದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಧಾರ್ಮಿಕ ಮತಾಂತರ ಮತ್ತು ಕಾನೂನು ವಿರುದ್ಧ ಕಾನೂನುಗಳನ್ನು ತರಬೇಕಾದ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ.
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
Updated on

ಸೆಹೋರ್: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ 'ಎಲ್ಲ ಭಾರತೀಯರ ಡಿಎನ್ಎ' ಹೇಳಿಕೆ ಕುರಿತಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹಾಗಿದ್ದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಧಾರ್ಮಿಕ ಮತಾಂತರ ಮತ್ತು ಕಾನೂನು ವಿರುದ್ಧ ಕಾನೂನುಗಳನ್ನು ತರಬೇಕಾದ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ. 

ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳು, ಮದುವೆ ಅಥವಾ ಮೋಸದ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಶಾಸನಗಳನ್ನು ಜಾರಿಗೆ ತಂದಿವೆ ಎಂದರು. 

'ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ ಆಗಿದ್ದರೆ ಧಾರ್ಮಿಕ ಮತಾಂತರ ಕಾನೂನು ಅಥವಾ ಲವ್-ಜಿಹಾದ್ ಕಾನೂನಿನ ಅವಶ್ಯಕತೆ ಏನು? ಆಗ, ಮೋಹನ್ ಭಾಗವತ್ ಜೀ ಮತ್ತು ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರ ಡಿಎನ್‌ಎ ಒಂದೇ ಆಗಿರುತ್ತದೆ ಎಂದು ಸಿಂಗ್ ಹೇಳಿದ್ದಾರೆ. 

ಭಗವತ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರಶ್ನಿಸಲಾಯಿತು. 

ಭಾನುವಾರ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ 'ಹಿಂದೂಸ್ತಾನ್ ಫಸ್ಟ್, ಹಿಂದೂಸ್ತಾನಿ ಬೆಸ್ಟ್' ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಭಗವತ್ ಅವರು 'ಎಲ್ಲ ಭಾರತೀಯರ ಡಿಎನ್‌ಎ ಒಂದೇ' ಎಂದು ಹೇಳಿದ್ದರು. ಇದಲ್ಲದೆ, ಭಗವತ್ 'ಹಸು ಪವಿತ್ರ ಪ್ರಾಣಿ, ಅದಕ್ಕೆ ಬೇರೆಯವರನ್ನು ಹತ್ಯೆ ಮಾಡುವುದು ಹಿಂದುತ್ವಕ್ಕೆ ವಿರುದ್ಧ ಎಂದು ಹೇಳಿದ್ದರು.

ಮರುದಿನ, ಬಿಜೆಪಿಯ ಕಟು ವಿಮರ್ಶಕ ಸಿಂಗ್, ಭಗವತ್ ಅವರ ಮಾತುಗಳು ನಿಜವಾಗಿದ್ದರೆ, ಮುಗ್ಧ ಮುಸ್ಲಿಂರಿಗೆ 'ಕಿರುಕುಳ' ನೀಡಿದ ಕೇಸರಿ ಪಕ್ಷದ ಎಲ್ಲ ನಾಯಕರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವಂತೆ ಅವರು ನಿರ್ದೇಶನಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಟೀಕಿಸಿದ ದಿಗ್ವಿಜಯ್ ಸಿಂಗ್ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ಮತ್ತು ಬಿಜೆಪಿ ಮುಖಂಡ ನರೋತ್ತಮ್ ಮಿಶ್ರಾ ವಾಗ್ದಾಳಿ ನಡೆಸಿದರು. 

ದೇಶದ ಏಕತೆ ಮತ್ತು ಸಮಗ್ರತೆಯನ್ನು ಹಾಗೇ ಉಳಿಸಿಕೊಳ್ಳುವುದು ಭಗವತ್‌ರ ಚಿಂತನೆಯಾಗಿದ್ದರೆ ಅದಕ್ಕೆ ವಿರೋಧವಾಗಿ ಸಿಂಗ್ ಚಿಂತಿಸುತ್ತಿದ್ದಾರೆ ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com