ನ್ಯಾಯಾಂಗ ವ್ಯವಸ್ಥೆಯಿರುವುದು ಸಾಮಾನ್ಯ ಜನರಿಗಾಗಿ, ಸುದೀರ್ಘ ವಾದ-ವಿವಾದಗಳಿಂದ ನ್ಯಾಯ ವಿಳಂಬ: ಸುಪ್ರೀಂ ಕೋರ್ಟ್ ಕಳವಳ

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಾಮಾನ್ಯ ಜನರಿಗಾಗಿ ಇರುವುದು ಎಂದು ಹೇಳಿರುವ ಸುಪ್ರೀಂ ಕೋರ್ಟ್ ವ್ಯಾಜ್ಯ-ವಿವಾದಗಳು ದೀರ್ಘಕಾಲದವರೆಗೆ ನಡೆಯುವುದು ಅದರಲ್ಲೂ ಕೋವಿಡ್-19 ಸಮಯದಲ್ಲಿ ವಿಚಾರಣೆ ಸುದೀರ್ಘವಾಗಿ ನಡೆಯುವುದಕ್ಕೆ ಕಳವಳ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಾಮಾನ್ಯ ಜನರಿಗಾಗಿ ಇರುವುದು ಎಂದು ಹೇಳಿರುವ ಸುಪ್ರೀಂ ಕೋರ್ಟ್ ವ್ಯಾಜ್ಯ-ವಿವಾದಗಳು ದೀರ್ಘಕಾಲದವರೆಗೆ ನಡೆಯುವುದು ಅದರಲ್ಲೂ ಕೋವಿಡ್-19 ಸಮಯದಲ್ಲಿ ವಿಚಾರಣೆ ಸುದೀರ್ಘವಾಗಿ ನಡೆಯುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ ಮೌಖಿಕ ಸಲ್ಲಿಕೆಯ ಅವಧಿಯನ್ನು ನಿರ್ಬಂಧಿಸಬೇಕಾಗಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ನ್ಯಾಯಪೀಠ ಕೂಡ ಈ ವಿಚಾರದಲ್ಲಿ ಸಮಾನ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿರುವ ನ್ಯಾಯಾಲಯ, ದಾವೆ ಹೂಡುವವರು ಅರ್ಥಮಾಡಿಕೊಳ್ಳುವ ಸ್ಪಷ್ಟ ಮತ್ತು ಸಣ್ಣ ತೀರ್ಪುಗಳಿಗಾಗಿ "ನಿಖರವಾದ ಬರವಣಿಗೆಯ ರೆನ್ ಮತ್ತು ಮಾರ್ಟಿನ್ ತತ್ವಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಹೇಳಿದೆ.

ಆದರೂ ಕೆಲವು ವಿಚಾರಣೆ ವೇಳೆ ಸುದೀರ್ಘ ಕಾಲ ವಿಚಾರಣೆಗೆ ಪೂರಕವಾದ ಸಲ್ಲಿಕೆಗಳು ಮತ್ತು ವಿಷಯಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ. ಮೇ 1, 2021ರ ವೇಳೆಗೆ ಸುಪ್ರೀಂ ಕೋರ್ಟ್ ಮುಂದೆ 67 ಸಾವಿರದ 898 ಬಾಕಿ ಉಳಿಕೆ ಪ್ರಕರಣಗಳಿವೆ. ದಿನನಿತ್ಯದ ಪ್ರಕರಣಗಳಿಗೆ ವ್ಯಯಿಸುವ ಸಮಯವು ದೊಡ್ಡ ನ್ಯಾಯಪೀಠಗಳ ಮುಂದೆ ಬಾಕಿ ಇರುವ ಕಾನೂನು ತತ್ವಗಳನ್ನು ಇತ್ಯರ್ಥಗೊಳಿಸಲು ಸ್ವಲ್ಪ ಸಮಯವನ್ನು ಹಿಡಿಯುತ್ತದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ, ಅದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಕೂಡ ಹೇಳಿದೆ.

ಸುದೀರ್ಘ ಸಮಯದವರೆಗೆ ವಾದಗಳು ನಡೆದರೆ ಜನಸಾಮಾನ್ಯರಿಗೆ ನ್ಯಾಯ ಸಿಗುವಲ್ಲಿ ವಿಳಂಬವಾಗುತ್ತದೆ ಎಂಬ ಕಳವಳವನ್ನು ಸುಪ್ರೀಂ ಕೋರ್ಟ್ ಇಂದು ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com