ಸೆಪ್ಟೆಂಬರ್ ನಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದನೆ ಪ್ರಾರಂಭಿಸಲಿರುವ ಸೆರಮ್ ಇನ್ಸ್ಟಿಟ್ಯೂಟ್

ಕೊರೋನಾ ವೈರಾಣುವನ್ನು ಎದುರಿಸುವುದಕ್ಕೆ ಕೋವಿಶೀಲ್ಡ್ ಲಸಿಕೆ ತಯಾರಿಸಿದ್ದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ರಷ್ಯಾದ ಸ್ಪುಟ್ನಿಕ್ ತಯಾರಿಕೆಗೂ ಮುಂದಾಗಿದೆ.
ಸ್ಪುಟ್ನಿಕ್ ಲಸಿಕೆ
ಸ್ಪುಟ್ನಿಕ್ ಲಸಿಕೆ

ನವದೆಹಲಿ: ಕೊರೋನಾ ವೈರಾಣುವನ್ನು ಎದುರಿಸುವುದಕ್ಕೆ ಕೋವಿಶೀಲ್ಡ್ ಲಸಿಕೆ ತಯಾರಿಸಿದ್ದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ರಷ್ಯಾದ ಸ್ಪುಟ್ನಿಕ್ ತಯಾರಿಕೆಗೂ ಮುಂದಾಗಿದೆ.

ಸೆಪ್ಟೆಂಬರ್ ನಲ್ಲಿ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸುವುದಾಗಿ ರಷ್ಯಾದ ನೇರ ಬಂಡವಾಳ ಹೂಡಿಕೆ ನಿಧಿ (ಆರ್ ಡಿಐಎಫ್) ಮಾಹಿತಿ ನೀಡಿದೆ.

"ಎಸ್ಐಐ ಪ್ರಯೋಗಾಲಯದಲ್ಲಿ ಸೆಪ್ಟೆಂಬರ್ ನಲ್ಲಿ ಸ್ಪುಟ್ನಿಕ್ ಲಸಿಕೆಯ ಮೊದಲ ಬ್ಯಾಚ್ ಉತ್ಪಾದನೆಯಾಗಲಿದೆ" ಎಂದು ಆರ್ ಡಿಐಎಫ್ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತದಲ್ಲಿ ವಾರ್ಷಿಕವಾಗಿ 3000 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಲು ಗುರಿ ಹೊಂದಲಾಗಿದೆ, ತಾಂತ್ರಿಕ ವರ್ಗಾವಣೆಯ ಪ್ರಕ್ರಿಯೆಯ ಭಾಗವಾಗಿ ಎಸ್ಐಐ ಸೆಲ್ ಹಾಗೂ ವೆಕ್ಟಾರ್ ಮಾದರಿಗಳನ್ನು ನೀಡಲಾಗಿದೆ" ಎಂದು ಆರ್ ಡಿಐಎಫ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com