ಕೋವಿಡ್ ಮೂರನೇ ಅಲೆ ತಡೆಗೆ ಏನು ಮಾಡಬೇಕು?

ಎರಡು ಕೋವಿಡ್-19 ಅಲೆಗಳಿಂದ ದೇಶ ಪಾಠ ಕಲಿಯಬೇಕಾಗಿದೆ. ಮೊದಲ ಅಲೆಯಲ್ಲಿ ಕಡಿಮೆ ಸಾಂಕ್ರಾಮಿಕದೊಂದಿಗೆ 10 ತಿಂಗಳ ಕಾಲ ಕಂಡುಬಂದಿದ್ದ ರೂಪಾಂತರ ವೈರಸ್ ಎರಡನೇ ಅಲೆ ವೇಳೆಯಲ್ಲಿ ಡೆಲ್ಟಾ (ಬಿ.1.617.2 ) ಸೇರಿದಂತೆ ಹೆಚ್ಚಾಗಿ ಹರಡುವುದರೊಂದಿಗೆ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ಎರಡು ಕೋವಿಡ್-19 ಅಲೆಗಳಿಂದ ದೇಶ ಪಾಠ ಕಲಿಯಬೇಕಾಗಿದೆ. ಮೊದಲ ಅಲೆಯಲ್ಲಿ ಕಡಿಮೆ ಸಾಂಕ್ರಾಮಿಕದೊಂದಿಗೆ  10 ತಿಂಗಳ ಕಾಲ ಕಂಡುಬಂದಿದ್ದ ರೂಪಾಂತರ ವೈರಸ್ ಎರಡನೇ ಅಲೆ ವೇಳೆಯಲ್ಲಿ ಡೆಲ್ಟಾ (ಬಿ.1.617.2 ) ಸೇರಿದಂತೆ ಹೆಚ್ಚಾಗಿ ಹರಡುವುದರೊಂದಿಗೆ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಯಿತು. ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಸರಿಯಾಗಿ ಅರಿಯದ ಕಾರಣ ಎರಡನೇ ಅಲೆಯೂ ಹೆಚ್ಚು ಆಕ್ರಮಣಕಾರಿಯಾಗಿತ್ತು.

ಕಾನ್ಫುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮೂರನೇ ಅಲೆಯ ತೀವ್ರತೆಯನ್ನು ಅಂದಾಜಿಸಿದೆ. ಒಂದು ರಾಷ್ಟ್ರವಾಗಿ ನಾವು ಪರಿಸ್ಥಿತಿಯನ್ನು ನಿಭಾಯಿಸಿ ಮೂರನೇ ತರಂಗವನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕಾದ ಸಮಯ ಇದಾಗಿದೆ. 

ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಭಾರತವು ಮೂರನೆಯ ತರಂಗವನ್ನು ಹೊಂದುತ್ತದೆಯೇ ಎಂಬುದು ಅಲ್ಲ, ಆದರೆ  ತಡೆಯುವ ಯೋಜನೆಯನ್ನು ನಾವು ಹೊಂದಿದ್ದೇವೆ. ಸಮಗ್ರ ಮತ್ತು ನಿಖರವಾದ ಯೋಜನೆಯ ಮೂಲಕ ನಾವು ಏನು ಮಾಡಬೇಕು?

ಆರಂಭದಲ್ಲಿ ಲಸಿಕೆ ಬಗ್ಗೆಗಿನ ಹಿಂಜರಿಕೆಯಿಂದ ಅದನ್ನು ತೆಗೆದುಕೊಳ್ಳುವವರು ಸಂಖ್ಯೆ ಕಡಿಮೆಯಿತ್ತು. ಕೇಂದ್ರ ಸರ್ಕಾರ ಲಸಿಕೆ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವುದರಿಂದ ಲಸಿಕೆ ಲಭ್ಯತೆಯಲ್ಲಿ ಸುಧಾರಿಸಿದೆ. ಆದಾಗ್ಯೂ, ಕಳೆದ ಆರು ತಿಂಗಳಲ್ಲಿ ಜುಲೈ 10ರವರೆಗೆ ಕೇವಲ ಶೇ.7.7 ರಷ್ಟು ಮಂದಿ ಮಾತ್ರ ದೇಶದಲ್ಲಿ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ.32.1 ರಷ್ಟು ಮಂದಿ ಸಿಂಗಲ್ ಡೋಸ್ ಲಸಿಕೆ ಪಡೆದಿದ್ದಾರೆ. ಮೂರನೇ ತರಂಗದ ಅಪಾಯವನ್ನು ತಪ್ಪಿಸಲು ನಾವು ಜನಸಂಖ್ಯೆಯ ಶೇ.60-80 ರಷ್ಟು ಲಸಿಕೆ ಪೂರ್ಣಗೊಳಿಸಲು ಇನ್ನೂ ಹಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ನಮ್ಮ ಇತರ ಆಯ್ಕೆಗಳು ಯಾವುವು?

ಸಾಮಾಜಿಕ ಲಸಿಕೆಯಿಂದ ಸಂಭಾವ್ಯ ಕೋವಿಡ್-19 ಮೂರನೇ ಅಲೆಯ ಪರಿಣಾಮವನ್ನು ತಗ್ಗಿಸಬಹುದು. ಸಾಮಾಜಿಕ ಲಸಿಕೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕೃತ ಮಾಹಿತಿ ನೀಡುವುದು, ಇಡೀ ಜನಸಂಖ್ಯೆಗೆ ಶಿಕ್ಷಣ ನೀಡುವುದು, ಎಲ್ಲಾ ಮಧ್ಯಸ್ಥಗಾರರನ್ನು ಒಳಗೊಳ್ಳುವುದು ಮತ್ತು ಲಭ್ಯವಿರುವ ಎಲ್ಲಾ ವೇದಿಕೆಗಳ ಮೂಲಕ ಸಂವಹನ ಮಾಡುವುದು ಅಗತ್ಯವಾಗಿರುತ್ತದೆ. ನಾವು ಅಕ್ಷರಶಃ ಪ್ರಚಾರದ ತಂತ್ರಗಳಿಗೆ ಹೋಗಿ ‘ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅಳವಡಿಸಿಕೊಳ್ಳಿ’ ಎಂಬ ಸಂದೇಶವನ್ನು ರವಾನಿಸಬೇಕಾಗಿದೆ. ಲಸಿಕೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತು ಹೆಚ್ಚುವರಿ ಸಂದೇಶಗಳನ್ನು ಸೇರಿಸಬೇಕು. ಇದನ್ನು ದೇಶಾದ್ಯಂತ ಪಂಚಾಯತ್ ಹಾಗೂ ವಾರ್ಡ್ ಮಟ್ಟದಲ್ಲಿ ಮಾಡಬೇಕಾಗಿದೆ. 

ನಾವು ಜನಸಂದಣಿಯನ್ನು ತಪ್ಪಿಸಬೇಕು, ವಿಶೇಷವಾಗಿ ಡೆಲ್ಟಾ ರೂಪಾಂತರವು ಸುತ್ತುವರಿದ ಸ್ಥಳಗಳಲ್ಲಿ ವಾಯುಗಾಮಿ ಆಗಿರಬಹುದು. ಸುತ್ತುವರಿದ ಸ್ಥಳಗಳಲ್ಲಿ ಜನರ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು, ಮಾಸ್ಕ್ ಧರಿಸಿ ಮತ್ತು ಕನಿಷ್ಠ ಅಂತರ ಭೌತಿಕ ಅಂತರ ಕಾಯ್ದುಕೊಳ್ಳುಬೇಕು, ಸಾರ್ವಜನಿಕ ಸಭೆ, ಸಾರ್ವಜನಿಕ ಸಾರಿಗೆಗೆ ಸೂಕ್ತ ಕ್ರಮಗಳೊಂದಿಗೆ ಅನುಮತಿ ನೀಡಬೇಕು, ಹವಾ ನಿಯಂತ್ರಣ ವ್ಯವಸ್ಥೆ ಬಂದ್ ಮಾಡಬೇಕು, ಪ್ರತಿಯೊಬ್ಬರು ಡಬಲ್ ಮಾಸ್ಕ್ ಧರಿಸಬೇಕು, ಸಾರ್ವಜನಿಕ ಸಾರಿಗೆ ಬಳಸುವ ಪ್ರಯಾಣಿಕರು, ಶಾಪಿಂಗ್ ಪ್ರದೇಶ, ಮಾಲ್ ಗಳು, ಸಭೆ ಮತ್ತು ಪೂಜಾ ಸ್ಥಳಗಳಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಲಸಿಕೆ ಹಾಗೂ ಕೋವಿಡ್ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟುಗೊಳಿಸಬೇಕು.

ಪ್ರತಿಯೊಬ್ಬ ವ್ಯಕ್ತಿಯ ಆಧಾರ್ ಜೋಡಣೆಯಿಂದ ಲಸಿಕೆ ಮತ್ತು ಕೋವಿಡ್ ಪರಿಸ್ಥಿತಿ ತಿಳಿಯಬೇಕು. ಲಸಿಕೆ ಪರಿಸ್ಥಿತಿ ಪರಿಶೀಲನೆಗಾಗಿ ನಮ್ಮ ಸಾಪ್ಟ್ ವೇರ್ ವೃತ್ತಿಪರರು ಇಂಟರ್ ನೆಟ್ ಆಧಾರಿತ ಆ್ಯಪ್ ನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಗೊಳಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ, ಹ್ಯಾಂಡ್ ಸ್ಯಾನಿಟೈಸರ್ಸ್ ಬಳಸದವರಿಗೆ ಪ್ರವೇಶವನ್ನು ನೀಡಬಾರದು. ಇತ್ತೀಚಿಗೆ ಅರುಣಾಚಲ ಪ್ರದೇಶದಲ್ಲಿ ಲಸಿಕೆ ತೆಗೆದುಕೊಂಡಂತಹ ಜನರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಇಂತಹ ಕ್ರಮವನ್ನು  ಇತರ ರಾಜ್ಯಗಳು ಕೂಡಾ ತೆಗೆದುಕೊಳ್ಳಬೇಕು.

ನಗರ ಪ್ರದೇಶಗಳು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕತೆ ಹೆಚ್ಚಿರುವುದರಿಂದ ಸುಲಭವಾಗಿ ಸೋಂಕು ಹೆಚ್ಚಾಗಬಹುದು. ಗ್ರಾಮೀಣ ಪ್ರದೇಶದಲ್ಲಿ ಶೇ.65 ರಷ್ಟು ಮಂದಿ ವಾಸಿಸುತ್ತಿದ್ದು, ಅಲ್ಲಿ ಸೋಂಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿರುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ವ್ಯಾನ್ ಗಳೊಂದಿಗೆ ಲಸಿಕೆಗೆ ಆದ್ಯತೆ ನೀಡಬೇಕು, ಎಲ್ಲರಿಗೂ ಲಸಿಕೆಯನ್ನು ತ್ವರಿತಗತಿಯಲ್ಲಿ ನೀಡಬೇಕಾಗಿದೆ ವಿದ್ಯಾರ್ಥಿಗಳು ಲಸಿಕೆ ಪಡೆದು ಭೌತಿಕ ತರಗತಿಗಳಿಗೆ ಹಾಜರಾಗುವವರೆಗೂ ಆನ್ ಲೈನ್ ಶಿಕ್ಷಣವನ್ನು ಶಾಲೆಗಳು ಮುಂದುವರೆಸಬೇಕಾಗಿದೆ.

 ಗರ್ಭಿಣಿಯರು ಇರುವ ಮನೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಅಗತ್ಯವಾಗಿದೆ. ಗರ್ಭಿಣಿಯರಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಜ್ವರ ಬಂದಂತಹ ಗರ್ಭಿಣಿಯರಿಗೆ ಪ್ರತ್ಯೇಕ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಆರ್ ಟಿ- ಪಿಸಿಆರ್  ಟೆಸ್ಟ್ ನ್ನು ನಿಯಮಿತವಾಗಿ ಮಾಡಬೇಕಾಗುತ್ತದೆ. ಕೋವಿಡ್ ಪರೀಕ್ಷಾ ವರದಿ ಬರುವವರೆಗೂ ಕೋವಿಡ್ ಯೇತರ ಗರ್ಭಿಣಿಯರು ಅವರ ಹತ್ತಿರ ಸುಳಿಯದಂತೆ ಎಚ್ಚರ ವಹಿಸಬೇಕು.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಸಂಭಾವ್ಯ ಕೋವಿಡ್-19 ಮೂರನೇ ಅಲೆಯನ್ನು ತಡೆಗಟ್ಟಬಹುದು ಎಂದು ರಾಣಿಪೇಟ್ ತಿರುಮಲೈ ಮಿಷನ್ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ. ಎಂ. ಎಸ್. ಶೇಷಾದ್ರಿ , ವೆಲ್ಲೂರಿನ ಸಿಎಂಸಿ ಕ್ಲಿನಿಕಲ್ ವೈರಲಾಜಿಯ ಮಾಜಿ ಪ್ರೊಫೆಸರ್  ಡಾ. ಟಿ ಜಾಕೊಬ್ ಜಾನ್
(mandalam.seshadri@gmail.com, tjacobjohn@yahoo.co.in) ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com