ಶೇ.80ರಷ್ಟು ಹೊಸ ಕೋವಿಡ್ ಪ್ರಕರಣಗಳಿಗೆ ಡೆಲ್ಟಾ ರೂಪಾಂತರ ಕಾರಣ: ಸರ್ಕಾರದ ತಜ್ಞರ ಸಮಿತಿ ಮುಖ್ಯಸ್ಥ

ದೇಶದಲ್ಲಿ ಕೋವಿಡ್-19 ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರ, ಶೇಕಡಾ 80 ರಷ್ಟು ಹೊಸ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ ಸಹ-ಅಧ್ಯಕ್ಷ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶದಲ್ಲಿ ಕೋವಿಡ್-19 ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರ, ಶೇಕಡಾ 80 ರಷ್ಟು ಹೊಸ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ ಸಹ-ಅಧ್ಯಕ್ಷ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ. ಹೊಸ, ಇನ್ನೂ ಹೆಚ್ಚು ಸಾಂಕ್ರಾಮಿಕದ ವೈರಾಣು ಬಂದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಅವರು ತಿಳಿಸಿದ್ದಾರೆ.

ಈ ರೂಪಾಂತರ ಅದರ ಹಿಂದಿನ ಆಲ್ಫಾ ರೂಪಾಂತರಕ್ಕಿಂತ ಶೇಕಡ 40-60 ರಷ್ಟು ಹೆಚ್ಚಿಗೆ ಹರಡಬಲ್ಲದು. ಅಲ್ಲದೇ, ಈಗಾಗಲೇ ಯುಕೆ, ಯುಎಸ್ ಮತ್ತು ಸಿಂಗಾಪುರ ಸೇರಿದಂತೆ 80 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯ ಪ್ರದೇಶ ಸೇರಿದಂತೆ ದೇಶಾದ್ಯಂತ 11 ರಾಜ್ಯಗಳಲ್ಲಿ  55-60 ಪ್ರಕರಣಗಳಲ್ಲಿ  ಡೆಲ್ಟಾ ಪ್ಲಸ್ ರೂಪಾಂತರದ ಎವೈ.1 ಮತ್ತು ಎವೈ.2 ಪತ್ತೆಯಾಗಿದೆ. ಅದರ ಹರಡುವಿಕೆ, ವೈರಲೆನ್ಸ್ ಮತ್ತು ಲಸಿಕೆ ತಪ್ಪಿಸಿಕೊಳ್ಳುವ ಗುಣಲಕ್ಷಣಗಳಿಗಾಗಿ ಇನ್ನೂ ಅಧ್ಯಯನ ಮಾಡಲಾಗುತ್ತಿದೆ ಎಂದು ಡಾ.ಅರೋರಾ ಹೇಳಿದ್ದಾರೆ.

ಡೆಲ್ಟಾ ರೂಪಾಂತರ ಎಂದು ಹೆಸರಾದ ಬಿ.1.617.2 ಕೋವಿಡ್-19 ರೂಪಾಂತರ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಗಿತ್ತು. ದೇಶದಲ್ಲಿ ಎರಡನೇ ಅಲೆ ಹರಡಲು ಇದೇ ಕಾರಣವಾಗಿತ್ತು. ಇಂದು ಶೇಕಡಾ 80 ರಷ್ಟು ಹೊಸ ಕೋವಿಡ್-19 ಪ್ರಕರಣಗಳಿಗೆ ಇದೇ ಕಾರಣವಾಗಿದೆ ಎಂದು ಡಾ.ಅರೋರಾ ತಿಳಿಸಿದ್ದಾರೆ.

ಇತರ ರೂಪಾಂತರಗಳಿಗೆ ಹೋಲಿಸಿದರೆ ಇದು ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆಯೇ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಡಾ. ಅರೋರಾ, ಸಿನ್ಸಿಟಿಯಮ್ ರಚನೆಯನ್ನು ಉತ್ತೇಜಿಸುವ ಕೆಲವು ರೂಪಾಂತರಗಳನ್ನು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಮಾನವ ಜೀವಕೋಶದ ಮೇಲೆ ಆಕ್ರಮಣ ಮಾಡುವಾಗ, ಅದು ವೇಗವಾಗಿ ಪುನರಾವರ್ತಿಸುತ್ತದೆ. ಇದು ಶ್ವಾಸಕೋಶದಂತಹ ಅಂಗಗಳಲ್ಲಿ ಬಲವಾದ ಉರಿಯೂತದ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಆದಾಗ್ಯೂ ಡೆಲ್ಟಾ ರೂಪಾಂತರದಿಂದಾಗಿ ರೋಗವು ಹೆಚ್ಚು ತೀವ್ರವಾಗಿರುತ್ತದೆ ಎಂದು ಹೇಳುವುದು ಕಷ್ಟ ಎಂದು ಅವರು ಮಾಹಿತಿ ನೀಡಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರ 'ಎವೈ 1 ಮತ್ತು ಎವೈ 2'ಗಳು ಮಹಾರಾಷ್ಟ್ರ, ತಮಿಳುನಾಡು, ಮತ್ತು ಮಧ್ಯಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿ 55-60 ಪ್ರಕರಣಗಳಲ್ಲಿ ಪತ್ತೆಯಾಗಿದೆ. ನೇಪಾಳ, ಪೋರ್ಚುಗಲ್ ನಂತಹ ದೇಶಗಳಲ್ಲಿಯೂ ಎವೈ 1 ಕಂಡುಬಂದಿದೆ. ಅದರ ಹರಡುವಿಕೆ, ಮತ್ತು ಗುಣಲಕ್ಷಣವನ್ನು ಇನ್ನೂ ಅಧ್ಯಯನ ಮಾಡಲಾಗುತ್ತಿದೆ. ಈ ವಿಷಯದ ಬಗ್ಗೆ ಐಸಿಎಂಆರ್ ಕೈಗೊಂಡ ಅಧ್ಯಯನಗಳ ಪ್ರಕಾರ ಸದ್ಯ ಲಭ್ಯವಿರುವ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಡಾ.ಅರೋರಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com