ಕೋವಿಡ್ ಟಿಪಿಆರ್ ಶೇ.5 ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಪ್ರಾಥಮಿಕ ಶಾಲೆ ತೆರೆಯಬಹುದು: ಐಸಿಎಂಆರ್ ಮುಖ್ಯಸ್ಥ

ಸರ್ಕಾರದ ಹಿರಿಯ ಅಧಿಕಾರಿಗಳು ಮೊದಲು ಪ್ರಾಥಮಿಕ ಶಾಲೆಗಳನ್ನು ಕೋವಿಡ್ ಟಿಪಿಆರ್ ಶೇ.5ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ತೆರೆಯುವುದಕ್ಕೆ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳು (ಸಾಂಕೇತಿಕ ಚಿತ್ರ)
ವಿದ್ಯಾರ್ಥಿಗಳು (ಸಾಂಕೇತಿಕ ಚಿತ್ರ)
Updated on

ನವದೆಹಲಿ: ಕೋವಿಡ್-19 ಎರಡನೇ ಅಲೆ ತಗ್ಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವೆ ಸರ್ಕಾರದ ಹಿರಿಯ ಅಧಿಕಾರಿಗಳು ಮೊದಲು ಪ್ರಾಥಮಿಕ ಶಾಲೆಗಳನ್ನು ಕೋವಿಡ್ ಟಿಪಿಆರ್ ಶೇ.5ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ತೆರೆಯುವುದಕ್ಕೆ ಸಲಹೆ ನೀಡಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಿಗೆ ಸೋಂಕನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕೆ ಸಾಧ್ಯವಿರುತ್ತದೆ. ಆದ್ದರಿಂದ ಶೇ.5 ರಷ್ಟು ಪಾಸಿಟಿವಿಟಿ ರೇಟ್ ಇರುವ ಪ್ರದೇಶಗಳಲ್ಲಿ ಮಾತ್ರ ಪ್ರಾಥಮಿಕ ಶಾಲೆಗಳನ್ನು ತೆರೆಯಬಹುದು, ಆದರೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದಿರುವುದನ್ನು ಶಾಲೆ ವ್ಯವಸ್ಥೆ ಖಾತ್ರಿಪಡಿಸಿಕೊಳ್ಳಲು ಐಸಿಎಂಆರ್ ಸಲಹೆ ನೀಡಿದೆ.

ಮಾರ್ಚ್ 2020 ರಿಂದ ದೇಶಾದ್ಯಂತ ಶಾಲೆಗಳಲ್ಲಿ ನಡೆಯುತ್ತಿದ್ದ ತರಗತಿಗಳು ಕೋವಿಡ್-19 ಸೋಂಕು ತಡೆಗಾಗಿ ಸ್ಥಗಿತಗೊಂಡಿದ್ದವು ಕೆಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ 9 ನೇ ತರಗತಿಯಿಂದ ಮೇಲ್ಪಟ್ಟ ತರಗತಿಗಳಿಗೆ ಶಾಲೆಯನ್ನು ಪ್ರಾರಂಭಿಸಲಾಗಿತ್ತು. ಆದರೆ 2 ನೇ ಅಲೆಯ ಪರಿಣಾಮ ಮತ್ತೆ ಶಾಲೆಗಳನ್ನು ಸ್ಥಗಿತಗೊಳಿಸಲಾಗಿತ್ತು. 

"ವಯಸ್ಕರಿಗೆ ಹೋಲಿಕೆ ಮಾಡಿದಲ್ಲಿ, ವೈರಾಣು ದೇಹಕ್ಕೆ ಸೇರುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಎಸಿಇ ರಿಸೆಪ್ಟರ್ ಜೀವಕೋಶಗಳು ಮಕ್ಕಳಲ್ಲಿ ಕಡಿಮೆ ಇರುತ್ತವೆ ಎಂದು ಐಸಿಎಂಆರ್ ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಇದೇ ವೇಳೆ ಅವರು ಸೆರೋಸರ್ವೇ ಕುರಿತಾಗಿಯೂ ಮಾಹಿತಿ ನೀಡಿದ್ದು, ಕೋವಿಡ್-19 ವಿರುದ್ಧ 6-10 ವಯಸ್ಸಿನ ಶೇ.57.2 ರಷ್ಟು ಮಕ್ಕಳಲ್ಲಿ ಹಾಗು 10-17 ವಯಸ್ಸಿನ ಶೇ.66.7 ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ ಎಂಬ ಮಾಹಿತಿ ನೀಡಿದ್ದಾರೆ. 

ಕೆಲವು ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಲ್ಲಿ ಕೋವಿಡ್ ನ ಯಾವುದೇ ಅಲೆಯಲ್ಲಿ ಶಾಲೆಗಳೂ ಮುಚ್ಚಿಲ್ಲ ಎಂದು ಬಲರಾಮ್ ಭಾರ್ಗವ ತಿಳಿಸಿದ್ದಾರೆ. "ಭಾರತ ಒಮ್ಮೆ ಶಾಲೆಗಳನ್ನು ಪುನಾರಂಭಗೊಳಿಸುವುದನ್ನು ಪರಿಗಣಿಸುವುದಾದರೆ ಮೊದಲು ಪ್ರಾಥಮಿಕ ಶಾಲೆಗಳನ್ನು ಪುನಾರಂಭ ಮಾಡಬೇಕು, ಶಾಲಾ ವಾಹನಗಳ ಚಾಲಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು" ಎಂದು ಐಸಿಎಂಆರ್ ಸಲಹೆ ನೀಡಿದೆ.  

ಇನ್ನು ಏಮ್ಸ್ ನ ನಿರ್ದೇಶಕ ರಣ್ದೀಪ್ ಗುಲೇರಿಯಾ ಅವರೂ ಸಹ ಕೋವಿಡ್ ಟಿಪಿಆರ್ ಶೇ.5ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ತೆರೆಯುವುದಕ್ಕೆ ಸಲಹೆ ನೀಡಿದ್ದು, ಕೋವಿಡ್-19 ಸೋಂಕು ಪ್ರಸರಣ ಹೆಚ್ಚಾದರೆ ತಕ್ಷಣ ಶಾಲೆಗಳಲ್ಲಿ ಆಫ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಬಹುದೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com