ಆಗಸ್ಟ್1 ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ಕೋವಿಡ್-19 ಸಾಂಕ್ರಾಮಿಕದಿಂದ ಏಪ್ರಿಲ್ ಮಧ್ಯಭಾಗದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ಮ್ಯೂಸಿಯಂ ಸಂಕೀರ್ಣಕ್ಕೆ ಆಗಸ್ಟ್ 1 ರಿಂದ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ರಾಷ್ಟ್ರಪತಿ ಭವನ
ರಾಷ್ಟ್ರಪತಿ ಭವನ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಏಪ್ರಿಲ್ ಮಧ್ಯಭಾಗದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ಮ್ಯೂಸಿಯಂ ಸಂಕೀರ್ಣಕ್ಕೆ ಆಗಸ್ಟ್ 1 ರಿಂದ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

(ಗೆಜೆಟೆಡ್ ರಜೆದಿನಗಳನ್ನು ಹೊರತುಪಡಿಸಿ) ಶನಿವಾರ ಮತ್ತು ಭಾನುವಾರ, ಮೊದಲೇ ಕಾಯ್ದಿರಿಸಿದ ವೇಳೆಯಲ್ಲಿ ಗರಿಷ್ಟ 25 ಜನರಿಗೆ ಮೀರದಂತೆ ರಾಷ್ಟ್ರಪತಿ ಭವನಕ್ಕೆ ಜನರು ಭೇಟಿ ನೀಡಬಹುದಾಗಿದೆ. 10-30 ರಿಂದ 11-30,  12-30 ರಿಂದ 13-30 ಮತ್ತು 14-30 ರಿಂದ 15-30 ಅವಧಿಯಲ್ಲಿ ಮಾತ್ರ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್ ವಾರದಲ್ಲಿ ಆರು ದಿನಗಳವರೆಗೂ ( ಮಂಗಳವಾರದಿಂದ ಭಾನುವಾರ) ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಮುಂಚಿತವಾಗಿ ಕಾಯ್ದಿರಿಸಿದ ವೇಳೆಯಲ್ಲಿ ಅಂದರೆ ಬೆಳಗ್ಗೆ 9-30ರಿಂದ 11 ಗಂಟೆ, 11-30 ರಿಂದ 13-00 ಗಂಟೆ, 13-30 ರಿಂದ 15-00 ಮತ್ತು 15-30 ರಿಂದ 17-00 ಗಂಟೆ ಅವಧಿಯಲ್ಲಿ ಗರಿಷ್ಠ 50 ಜನರು ಭೇಟಿ ನೀಡಬಹುದಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com