ಬಂಗಾಳದಲ್ಲಿ ಸೋಲು: ರಾಜ್ಯಸಭೆಗೆ ಸ್ವಪನ್ ದಾಸ್ ಗುಪ್ತಾ ಮರುನಾಮಕರಣ

ರಾಜ್ಯಸಭೆಗೆ ರಾಜೀನಾಮೆ ನೀಡಿ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮರುನಾಮಕರಣ ಮಾಡಿದೆ.
ಮೋದಿ-ಸ್ವಪನ್ ದಾಸ್ ಗುಪ್ತಾ
ಮೋದಿ-ಸ್ವಪನ್ ದಾಸ್ ಗುಪ್ತಾ
Updated on

ನವದೆಹಲಿ: ರಾಜ್ಯಸಭೆಗೆ ರಾಜೀನಾಮೆ ನೀಡಿ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮರುನಾಮಕರಣ ಮಾಡಿದೆ.

ಇದೇ ವೇಳೆ ಕೇಂದ್ರ ಸರ್ಕಾರ ಖ್ಯಾತ ವಕೀಲ ಮಹೇಶ್ ಜೆಠ್ಮಲಾನಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.

ಭಾರತದ ಸಂವಿಧಾನದ 80ನೇ ಪರಿಚ್ಛೇಧ(1) ರ ಉಪ-ಷರತ್ತು(ಎ) ನಿಂದ ನೀಡಲ್ಪಟ್ಟ ಅಧಿಕಾರವನ್ನು ಸ್ವಪನ್ ದಾಸ್‌ಗುಪ್ತಾ ಅವರನ್ನು ಪರಿಷತ್ತಿಗೆ ಮರುನಾಮಕರಣ ಮಾಡಲು ರಾಷ್ಟ್ರಪತಿಗಳಿಗೆ ಕಳುಹಿಸಿದ್ದು ರಾಷ್ಟ್ರಪತಿಗಳು ಅಂಕಿ ಹಾಕಿದ್ದಾರೆ. 

ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸ್ವಪನ್ ದಾಸ್ ಗುಪ್ತಾ ಅವಧಿ 24-04-2022ರ ತನಕ ಇರಲಿದೆ. ಇನ್ನು ರಘುನಾಥ್ ಮೊಹಾಪಾತ್ರ ಅವರ ನಿಧನದಿಂದಾಗಿ ಖಾಲಿ ಇದ್ದ ಸ್ಥಾನಕ್ಕೆ ಜೆಠ್ಮಲಾನಿಯನ್ನು ನಾಮನಿರ್ದೇಶನ ಮಾಡಲಾಗಿದ್ದು ಅವರ ಅವಧಿ 03-07-2024ರವರೆಗೆ ಇರಲಿದೆ.

ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಪ್ರಖ್ಯಾತ ವ್ಯಕ್ತಿಗಳನ್ನು ಮೇಲ್ಮನೆಗೆ ನಾಮಕರಣ ಮಾಡುತ್ತಾರೆ. ನಾಮನಿರ್ದೇಶಿತ ಸದಸ್ಯರನ್ನು ಸಾಹಿತ್ಯ, ವಿಜ್ಞಾನ, ಕ್ರೀಡೆ, ಕಲೆ ಮತ್ತು ಸಾಮಾಜಿಕ ಸೇವೆಯಂತಹ ಕ್ಷೇತ್ರಗಳಿಂದ ಆರಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com