ನವದೆಹಲಿ: ಭಾರತದ ಟೆಲಿಕಾಮ್ ನಿಯಂತ್ರಕ ಪ್ರಾಧಿಕಾರ ಜೂ.16 ರಂದು ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ನ್ನು ಪ್ರಾರಂಭಿಸಿದೆ.
ಟ್ರಾಯ್ ನ ಮೊಬೈಲ್ ಫೋನ್ ಆಪ್ ನ್ನು ಬಳಕೆ ಮಾಡುವುದಕ್ಕೆ ಸಾಧ್ಯವಾಗದವರು ಅಥವಾ ಬ್ರೌಸರ್ ನ್ನು ಮೊಬೈಲ್ ಫೋನ್ ನಲ್ಲಿ ಬಳಕೆ ಮಾಡಲು ಇಚ್ಛಿಸದವರು ಈ ವೆಬ್ ಪೋರ್ಟಲ್ ಮೂಲಕ ತಮ್ಮ ಇಷ್ಟದ ಟಿವಿ ಚಾನಲ್ ನ್ನು ಆಯ್ಕೆ ಮಾಡುವುದಕ್ಕಾಗಿ ಬಳಕೆ ಮಾಡಬಹುದಾಗಿದೆ.
ಕಳೆದ ವರ್ಷವೇ ಟ್ರಾಯ್ ಈ ಉದ್ದೇಶಕ್ಕಾಗಿ ಆಪ್ ನ್ನೂ ಅಭಿವೃದ್ಧಿಪಡಿಸಿತ್ತು. ಡಿಟಿಹೆಚ್/ ಕೇಬಲ್ ಆಪರೇಟರ್ ಗೆ ಕಳಿಸುವ ಮೊದಲೇ ಚಂದಾದಾರಿಕೆಯನ್ನು ಅತ್ಯುತ್ತಮವಾಗಿಸಿಕೊಳ್ಳುವುದನ್ನು ಸಾಧ್ಯವಾಗಿಸುವುದು ಆಪ್ ಹಾಗೂ ವೆಬ್ ಪೋರ್ಟಲ್ ನ ಮುಖ್ಯ ಉದ್ದೇಶವಾಗಿದೆ.
ಚಂದಾದಾರಿಕೆಯನ್ನು ಪರಿಶೀಲಿಸುವುದು, ಬದಲಾವಣೆ ಮಾಡುವುದು, ತಮ್ಮ ಕೇಬಲ್ ಆಪರೇಟರ್ ಗಳು ನೀಡಿರುವ ಚಾನಲ್ ಗಳ ಪಟ್ಟಿಯನ್ನು ನೋಡುವುದು ಹಾಗೂ ಅವುಗಳಲ್ಲಿ ಇಷ್ಟದ ಚಾನಲ್ ಗಳನ್ನು ಆಯ್ಕೆ ಮಾಡುವುದಕ್ಕೆ ಈ ವೆಬ್ ಪೋರ್ಟಲ್ ನ್ನು ಬಳಕೆ ಮಾಡಬಹುದಾಗಿದೆ. ಆಪ್ ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳೂ ಈ ವೆಬ್ ಪೋರ್ಟಲ್ ನಲ್ಲಿದ್ದು, ಡೌನ್ ಲೋಡ್ ಸೌಲಭ್ಯವನ್ನೂ ನೀಡಲಾಗಿದೆ.
ಗ್ರಾಹಕರು ಪ್ರತಿಕ್ರಿಯೆಗಳನ್ನು ಸಲ್ಲಿಸುವುದಕ್ಕೂ ಅವಕಾಶವಿದ್ದು, 16 ಡಿಟಿಹೆಚ್ ಹಾಗೂ ಕೇಬಲ್ ಆಪರೇಟರ್ ಗಳೊಂದಿಗೆ ಈ ವೆಬ್ ಪೋರ್ಟಲ್ ಹಾಗೂ ಆಪ್ ಕಾರ್ಯನಿರ್ವಹಿಸುತ್ತದೆ ಎಂದು ಟ್ರಾಯ್ ಹೇಳಿದೆ.
Advertisement