ರಾಮ್‌ದೇವ್
ರಾಮ್‌ದೇವ್

ಅಲೋಪತಿ ವಿರುದ್ಧ ಟೀಕಿಸಿದ್ದಕ್ಕೆ ಎಫ್‌ಐಆರ್‌: ಸುಪ್ರೀಂ ಕೋರ್ಟ್ ಮೊರೆ ಹೋದ ಬಾಬಾ ರಾಮ್‌ದೇವ್

ಕೋವಿಡ್-19 ಚಿಕಿತ್ಸೆಯಲ್ಲಿ ಅಲೋಪತಿಯ ಪರಿಣಾಮಕಾರಿತ್ವದ ಬಗ್ಗೆ ಮಾಡಿದ ಆರೋಪದ ಮೇಲೆ  ವಿವಿಧ ರಾಜ್ಯಗಳಲ್ಲಿ ದಾಖಲಾದ ಅನೇಕ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಕೋರಿ ಯೋಗ ಗುರು ರಾಮ್‌ದೇವ್ ಅವರು ಬುಧವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ನವದೆಹಲಿ: ಕೋವಿಡ್-19 ಚಿಕಿತ್ಸೆಯಲ್ಲಿ ಅಲೋಪತಿಯ ಪರಿಣಾಮಕಾರಿತ್ವದ ಬಗ್ಗೆ ಮಾಡಿದ ಆರೋಪದ ಮೇಲೆ ವಿವಿಧ ರಾಜ್ಯಗಳಲ್ಲಿ ದಾಖಲಾದ ಅನೇಕ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಕೋರಿ ಯೋಗ ಗುರು ರಾಮ್‌ದೇವ್ ಅವರು ಬುಧವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪಾಟ್ನಾ ಮತ್ತು ರಾಯ್‌ಪುರ ಶಾಖೆಗಳು ದಾಖಲಿಸಿದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಲು ರಾಮ್‌ದೇವ್ ಕೋರಿದ್ದಾರೆ. ಅಲ್ಲದೆ ಎಫ್‌ಐಆರ್‌ಗಳ ಒಗ್ಗೂಡಿಸುವಿಕೆ ಬಲವರ್ಧನೆ ಮತ್ತು ವಿಚಾರಣೆಯ ನಿಲುಗಡೆಗೆ ಅವರು ಕೋರಿದ್ದಾರೆ.

ರಾಮ್‌ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆಯ  ಸೆಕ್ಷನ್ 188 (ಸಾರ್ವಜನಿಕ ಸೇವಕರಸರಿಯಾದ ಆದೇಶಕ್ಕೆ  ಅಸಹಕಾರ), 269 (ರೋಗದ ಸೋಂಕನ್ನು ಜೀವಕ್ಕೆ ಅಪಾಯಕಾರಿಯಾಗಿ ಹರಡುವ ಸಾಧ್ಯತೆ), 504 (ಶಾಂತಿ ಉಲ್ಲಂಘನೆ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಅಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಇತರ ನಿಬಂಧನೆಗಳಡಿ ಸಹ ಪ್ರಕರಣ ದಾಖಲಾಗಿದೆ.

"ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ ಡಿಸಿವಿರ್ ರ್, ಫ್ಯಾಬಿಫ್ಲೂ, ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಇತರ ಔಷಧಿಗಳು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ" ಎಂದು ರಾಮ್‌ದೇವ್ ಅವರು ವೀಡಿಯೊದಲ್ಲಿ ಹೇಳಿದ್ದರು.

ಅವರ ಹೇಳಿಕೆಗಳು ಭಾರಿ ಆಕ್ರೋಶಕ್ಕೆ ಕಾರಣವಾದವು ಮತ್ತು ಐಎಂಎ ಅವರಿಗೆ ನೋಟಿಸ್ ಕಳುಹಿಸಿತು.

ಕೋವಿಡ್ -19 ಚಿಕಿತ್ಸೆಗಾಗಿ ವೈದ್ಯಕೀಯ ವಲಯ ಬಳಸುತ್ತಿರುವ ಔಷಧಿಗಳ ಬಗ್ಗೆ "ಸುಳ್ಳು" ಮಾಹಿತಿಯನ್ನು ಹರಡಿದೆ ಎಂಬ ಆರೋಪದ ಮೇಲೆ ಜೂನ್ 16 ರಂದು ಛತ್ತೀಸ್ ಘರ್ ರಾಯ್‌ಪುರದ ಪೊಲೀಸರು ರಾಮ್‌ದೇವ್ವಿರುದ್ಧ ರಾಯ್‌ಪುರದ ಐಎಂಎ ಘಟಕ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ದೂರಿನನ್ವಯ ಕಳೆದ ಒಂದು ವರ್ಷದಿಂದ, ರಾಮ್‌ದೇವ್ಅವರು ವೈದ್ಯಕೀಯ ವಲಯದಲ್ಲಿ  ಭಾರತ ಸರ್ಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಇತರರು ಬಳಸುವ ಔಷಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಮತ್ತುಬೆದರಿಕೆ ಹೇಳಿಕೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಮದೇವ್ ಅವರ ಹಲವಾರು ವಿಡಿಯೋಗಳಿವೆ, ಅದರಲ್ಲಿ ಅವರು ಇಂತಹ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com