
ನವದೆಹಲಿ: ರಾಜ್ಯಗಳಿಗೆ ಪಾರದರ್ಶಕವಾಗಿ ಕೋವಿಡ್ ಲಸಿಕೆಗಳನ್ನು ವಿತರಣೆ ಮಾಡಿಲ್ಲ ಎಂಬ ಮಾಧ್ಯಮಗಳ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ರಾಜ್ಯಗಳ ಜನಸಂಖ್ಯೆ, ಪ್ರಕರಣಗಳ ಸಂಖ್ಯೆ, ಬಳಕೆಯ ದಕ್ಷತೆ ಮತ್ತು ವ್ಯರ್ಥ ಅಂಶಗಳ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ರಾಜ್ಯಗಳಿಗೆ ಪಾರದರ್ಶಕವಾಗಿ ಕೋವಿಡ್ ಲಸಿಕೆ ವಿತರಣೆ ಮಾಡಿಲ್ಲ ಎಂಬ ಕೆಲ ಮಾಧ್ಯಮಗಳ ಆರೋಪ ಸಂಪೂರ್ಣವಾಗಿ ಆಧಾರ ರಹಿತವಾಗಿದ್ದು, ಪೂರ್ಣ ಮಾಹಿತಿ ಇಲ್ಲ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪಾರದರ್ಶಕ ರೀತಿಯಲ್ಲಿ ಕೋವಿಡ್-19 ಲಸಿಕೆ ವಿತರಣೆ ಮಾಡಿದೆ ಎಂದು ಸ್ಪಷ್ಟಪಡಿಸಿರುವ ಸಚಿವಾಲಯ, ವೈಜ್ಞಾನಿಕತೆ ಮತ್ತು ಸಾಂಕ್ರಾಮಿಕ ಘಟನೆ, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಆಧಾರದ ಮೇಲೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನವನ್ನು ರೂಪಿಸಲಾಗಿದೆ ಎಂದು ಹೇಳಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪರಿಣಾಮಕಾರಿ ಸಹಭಾಗಿತ್ವ ಮತ್ತು ಹೆಚ್ಚಿನ ಸಂಖ್ಯೆಯ ಜನರೊಂದಿಗೆ ಪರಿಣಾಮಕಾರಿಯಾಗಿ ಲಸಿಕೆ ಅಭಿಯಾನವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Advertisement