40 ಫಾರ್ಮಾ ಕಂಪನಿಗಳು ಕೋವಿಡ್ ವಿರೋಧಿ 2-ಡಿಜಿ ಔಷಧಿ ಉತ್ಪಾದನೆಗೆ ಆಸಕ್ತಿ ತೋರಿಸಿದೆ: ಡಿಆರ್‌ಡಿಒ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 2-ಡಿಜಿ ಔಷಧಿಯನ್ನು ಉತ್ಪಾದಿಸಲು 40 ಔಷಧೀಯ ಕಂಪನಿಗಳು ಮುಂದೆ ಬಂದಿದೆ ಎಂದು ಡಿಆರ್‌ಡಿಒ ಮದ್ರಾಸ್ ಹೈಕೋರ್ಟ್‌ನ ನ್ಯಾಯಪೀಠಕ್ಕೆ ಶುಕ್ರವಾರ ಮಾಹಿತಿ ನೀಡಿದೆ,
2-ಡಿಜಿ
2-ಡಿಜಿ
Updated on

ಚೆನ್ನೈ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 2-ಡಿಜಿ ಔಷಧಿಯನ್ನು ಉತ್ಪಾದಿಸಲು 40 ಔಷಧೀಯ ಕಂಪನಿಗಳು ಮುಂದೆ ಬಂದಿದೆ ಎಂದು ಡಿಆರ್‌ಡಿಒ ಮದ್ರಾಸ್ ಹೈಕೋರ್ಟ್‌ನ ನ್ಯಾಯಪೀಠಕ್ಕೆ ಶುಕ್ರವಾರ ಮಾಹಿತಿ ನೀಡಿದೆ,

ಈ ಔಷಧಿಯನ್ನು ಕೇವಲ ಒಂದು ಫಾರ್ಮಾ ಕಂಪನಿಯಾದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ಗೆ ತಯಾರಿಸಲು ಡಿಆರ್‌ಡಿಒ ಪರವಾನಗಿ ನೀಡಿತ್ತು. ಅನೇಕರು ಜೀವ ಕಳೆದುಕೊಳ್ಳುತ್ತಿರುವಾಗ ಔಷಧದ ಬೆಲೆಯನ್ನು ತಗ್ಗಿಸುವ ಅಗತ್ಯವಾಗಿ ದ ಹಲವಾರು ವೈದ್ಯಕೀಯ ಕಂಪನಿಗಳಿಗೆ ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಚೆನ್ನೈ ನಿವಾಸಿ ಡಿ ಸರವಣನ್ ನ್ಯಾಯಾಲಯವನ್ನು ಕೋರಿದ್ದರು.

2-ಡಿಜಿ ತಯಾರಿಕೆಗಾಗಿ ಇಒಐ ಅನ್ನು ವೆಬ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಆಹ್ವಾನಿಸಲಾಗಿದೆ ಎಂದು ಡಿಆರ್‌ಡಿಒ ನ  ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಶಂಕರ ನಾರಾಯಣನ್ ಶುಕ್ರವಾರ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಜುಲೈ 17 ರ ಹೊತ್ತಿಗೆ 40 ಕಂಪನಿಗಳು ಇದನ್ನು ತಯಾರಿಸಲು ಆಸಕ್ತಿ ವ್ಯಕ್ತಪಡಿಸಿವೆ ಮತ್ತು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆಎಂದು ಅವರು ಹೇಳಿದರು.

ಆದರೆ, ನ್ಯಾಯಮೂರ್ತಿಗಳಾದ ಎನ್.ಕಿರುಬಕರನ್ ಮತ್ತು ಟಿ.ವಿ.ತಮಿಳ್ ಸೆಲ್ವಿ  ಅವರನ್ನೊಳಗೊಂಡ ನ್ಯಾಯಪೀಠ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ  ಅರ್ಜಿಗಳನ್ನು ಪರಿಶೀಲಿಸಲು ಮತ್ತು ಆಯ್ದ ಕಂಪನಿಗಳಿಗೆ ವರ್ಗಾವಣೆಗೆ ಸಂಬಂಧಿಸಿದ ಅಂತಿಮ ಆದೇಶಗಳನ್ನು ನೀಡಲು ಅಗತ್ಯವಾದ ಸಮಯದ ಮಿತಿಯ ಬಗ್ಗೆ ಸೂಚನೆಗಳನ್ನು ಕೇಳಿದೆ.

ಇದೇ ವೇಳೆ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಡಾ. ಆನಂದಯ್ಯ ಅವರು ನೀಡಿದ ಚಿಕಿತ್ಸೆಯನ್ನು ಕೇಂದ್ರ ಸರ್ಕಾರದ ಸಲಹೆಗಾರರ ​​ಗಮನಕ್ಕೆ ನ್ಯಾಯಪೀಠ ತಂದಿದೆ.

"ವಿಶೇಷವಾಗಿ, ಆಸ್ಪತ್ರೆಗಳು ಮತ್ತು ವೈದ್ಯರು ಈ ಸಾಂಕ್ರಾಮಿಕ ಪರಿಸ್ಥಿತಿಯಿಂದಲೂ ಹಣವನ್ನು ಸಂಪಾದಿಸುತ್ತಿರುವಾಗ, ಔಷಧಿಯನ್ನು ಸಿದ್ಧಪಡಿಸಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರಿಗೆ ಉಚಿತವಾಗಿ ನೀಡುವ ಡಾ.ಅನಂದಯ್ಯ ಅವರ ಪ್ರಯತ್ನಗಳನ್ನು  ಶ್ಲಾಘಿಸಬೇಕಾಗಿದೆ ಮತ್ತು ಈ ನ್ಯಾಯಾಲಯ ಅವರು ಸಲ್ಲಿಸಿರುವ ಸೇವೆಯನ್ನು ಶ್ಲಾಘಿಸುತ್ತಾರೆ "ಎಂದು ನ್ಯಾಯಪೀಠ ಹೇ:ಳಿದೆ.

ಔಷಧವು ಪ್ರಸ್ತುತ ಐಸಿಎಂಆರ್ ಸಂಶೋಧನೆಯಲ್ಲಿದೆ ಎಂದು ಉತ್ತರಿಸಿದ ವಕೀಲರು ಹೇಳಿದರು. ಮುಂದಿನ ವಾರ ಅಂತಿಮ ವಿಚಾರಣೆಗೆ ಮುಂದೂಡುವ ಮುನ್ನ ಅಂತಿಮ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com