ಭಾರತ್ ವ್ಯಾಟಿಕಾ: ಉತ್ತರಾಖಂಡ್ ನಲ್ಲಿ ಜೀವ ವೈವಿದ್ಯ ಉದ್ಯಾನವನ!

ದೇಶದಲ್ಲಿ ಇದೇ ಪ್ರಥಮ ಬಾರಿಗೆ 28 ಪ್ರಾಂತ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮರಗಳನ್ನು ಹೊಂದಿರುವ ಜೀವ ವೈವಿಧ್ಯ 'ಭಾರತ್ ವ್ಯಾಟಿಕಾ' ಉತ್ತರಾಖಂಡ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಭಾರತ್ ವ್ಯಾಟಿಕಾ ಜೀವ ವೈವಿದ್ಯ ಉದ್ಯಾನವನ
ಭಾರತ್ ವ್ಯಾಟಿಕಾ ಜೀವ ವೈವಿದ್ಯ ಉದ್ಯಾನವನ

ಡೆಹ್ರಾಡೂನ್:  ದೇಶದಲ್ಲಿ ಇದೇ ಪ್ರಥಮ ಬಾರಿಗೆ 28 ಪ್ರಾಂತ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮರಗಳನ್ನು ಹೊಂದಿರುವ ಜೀವ ವೈವಿಧ್ಯ 'ಭಾರತ್ ವ್ಯಾಟಿಕಾ' ಉತ್ತರಾಖಂಡ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ವ್ಯಾಟಿಕಾ, ದೇಶದ ಭವ್ಯ ಜೈವಿಕ ವೈವಿಧ್ಯತೆಯ ಪ್ರದರ್ಶನದೊಂದಿಗೆ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

 ಮಾರ್ಚ್ 2020ಕ್ಕೂ ಮುಂಚೆ ಒಂದೂವರೆ ವರ್ಷಗಳ ಹಿಂದೆ ಇದನ್ನು ಆರಂಭಿಸಲು ಪ್ರಯತ್ನಿಸಲಾಯಿತು. ದೊಡ್ಡ ಪ್ರಯತ್ನದೊಂದಿಗೆ ಪ್ರತಿಯೊಂದು ತಳಿಯನ್ನು ಸಂಗ್ರಹಿಸಲಾಗಿದೆ. ದೇಶದ ಭವ್ಯ ಜೈವಿಕ ವೈವಿಧ್ಯತೆಯ ಪ್ರದರ್ಶನದೊಂದಿಗೆ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು ಭಾರತ್ ವಾಟಿಕ ಅವರ ಉದ್ದೇಶವಾಗಿದೆ ಎಂದು ಐಎಫ್ ಎಸ್ ಅಧಿಕಾರಿ ಚತುರ್ವೇದಿ ತಿಳಿಸಿದರು.

ಉಷ್ಣವಲಯದ ಆರ್ದ್ರ, ಆರ್ದ್ರ, ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳು, ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿರುವ ಪ್ರದೇಶಗಳು ಮತ್ತು ವಿವಿಧ ಹವಾಮಾನಗಳ ಮರಗಳಾಗಿವೆ. ಕೆಲವೊಂದು ಸಸಿಗಳು ಚಳಿಗಾಲಕ್ಕೆ ಹೊಂದಿಕೊಳ್ಳಲಾರವು, ಕೆಲವೊಂದು ಬೇಸಿಗೆ ಕಾಲಕ್ಕೆ ಹೊಂದಿಕೊಳ್ಳುವಂತಹ ಮರಗಳಾಗಿವೆ. ವಿವಿಧ ರಾಜ್ಯಗಳ ಮರಗಳನ್ನು ಇದೇ ಮೊದಲ ಬಾರಿಗೆ ಒಂದೇ ಜಾಗದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
 
ಮಹಾರಾಷ್ಟ್ರ ಮತ್ತು ಚಂಡೀಘಡ ರಾಜ್ಯಗಳ ಮಾವು, ತೆಲಂಗಾಣ ಮತ್ತು ರಾಜಸ್ಥಾನದ ಖೇಜಾರಿ, ಗುಜರಾತ್ ಮತ್ತು ಮಧ್ಯಪ್ರದೇಶದ ಬಾರ್ಗಡ್, ಬಿಹಾರ, ಹರಿಯಾಣ ಮತ್ತು ಒಡಿಶಾದ ಪೀಪಲ್, ಕೇರಳ ಮತ್ತು ತಮಿಳುನಾಡಿನ ತೆಂಗಿನ ಮರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಹೊಲ್ಲಾಂಗ್, ಚಂಡೀಘಡ ಮತ್ತು ಜಾರ್ಖಂಡ್ ನ ಸಾಲ್ ಮರಗಳು ಸೇರಿದಂತೆ 28 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ 24 ತಳಿಯ ಮರಗಳು ವ್ಯಾಟಿಕಾ ಪ್ರದರ್ಶನದಲ್ಲಿವೆ.

ಕರ್ನಾಟಕದ ಚಂದನ್, ತ್ರಿಪುರಾದಿಂದ ಗಂಧದ ಮರ, ಲಕ್ಷದೀಪ್ವದ ಬ್ರೇಡ್ ರೂಟ್, ಪಶ್ಚಿಮ ಬಂಗಾಳದ ಅಲೆಸ್ಟೋನಿಯಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವಿಪದ ಪ್ರಸಿದ್ಧ ಪುಡ್ಡೋಕು ಮರಗಳು, ಆಂಧ್ರಪ್ರದೇಶದ ನೀಮ್ ಮರಗಳು ಇಲ್ಲಿರುವುದಾಗಿ ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com