ಎಎಫ್‌ಎಸ್‌ಪಿಎ ಅಡಿ ನಾಗಾಲ್ಯಾಂಡ್ ಮತ್ತೆ 6 ತಿಂಗಳ ಅವಧಿಗೆ 'ತೊಂದರೆಗೊಳಗಾದ ಪ್ರದೇಶ': ಕೇಂದ್ರ ಸರ್ಕಾರ ಘೋಷಣೆ

ವಿವಾದಾತ್ಮಕ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯಡಿ ಡಿಸೆಂಬರ್ ಅಂತ್ಯದವರೆಗೆ ಇಡೀ ನಾಗಾಲ್ಯಾಂಡ್ ರಾಜ್ಯವನ್ನು ಇನ್ನೂ ಆರು ತಿಂಗಳ ಕಾಲ "ತೊಂದರೆಗೊಳಗಾದ ಪ್ರದೇಶ" ಎಂದು ಘೋಷಿಸಲಾಗಿದೆ.
ಎಎಫ್‌ಎಸ್‌ಪಿಎ ಅಡಿ ನಾಗಾಲ್ಯಾಂಡ್ ಮತ್ತೆ 6 ತಿಂಗಳ ಅವಧಿಗೆ 'ತೊಂದರೆಗೊಳಗಾದ ಪ್ರದೇಶ': ಕೇಂದ್ರ ಸರ್ಕಾರ ಘೋಷಣೆ
Updated on

ನವದೆಹಲಿ: ವಿವಾದಾತ್ಮಕ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯಡಿ ಡಿಸೆಂಬರ್ ಅಂತ್ಯದವರೆಗೆ ಇಡೀ ನಾಗಾಲ್ಯಾಂಡ್ ರಾಜ್ಯವನ್ನು ಇನ್ನೂ ಆರು ತಿಂಗಳ ಕಾಲ "ತೊಂದರೆಗೊಳಗಾದ ಪ್ರದೇಶ" ಎಂದು ಘೋಷಿಸಲಾಗಿದೆ, ಇದು ಭದ್ರತಾ ಪಡೆಗಳಿಗೆ ಕಾರ್ಯಾಚರಣೆ ನಡೆಸಲು ಮತ್ತು ಯಾವುದೇ ಪೂರ್ವ ಎಚ್ಚರಿಕೆ ಇಲ್ಲದೆ ಯಾರನ್ನಾದರೂ ಬಂಧಿಸಲು ಅಧಿಕಾರ ನೀಡುತ್ತದೆ.

ಕೇಂದ್ರ ಗೃಹ ಸಚಿವಾಲಯ ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿಇಡೀ ನಾಗಾಲ್ಯಾಂಡ್ ರಾಜ್ಯವನ್ನು ಒಳಗೊಂಡ ಪ್ರದೇಶವು ತುಂಬಾ ಗೊಂದಲ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದೆ, ಆದ್ದರಿಂದ, ಈಗ, ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958 (1958 ರ ನಂ .28) ರ ಸೆಕ್ಷನ್ 3 ರ ಅಧಿಕಾರವನ್ನು ಚಲಾಯಿಸಿ ಕೇಂದ್ರ ಸರ್ಕಾರವು ಈ ಮೂಲಕ ಇಡೀ ನಾಗಾಲ್ಯಾಂಡ್ ರಾಜ್ಯವನ್ನು 2021 ರ ಜೂನ್ 30 ರಿಂದ ಆರು ತಿಂಗಳ ಅವಧಿಗೆ "ತೊಂದರೆಗೊಳಗಾದ ಪ್ರದೇಶ" ಎಂದು ಘೋಷಿಸುತ್ತದೆ ಎಂಬುದಾಗಿ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕೊಲೆ, ಲೂಟಿ ಮತ್ತು ಸುಲಿಗೆ ಪ್ರಕರಣಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆಗಳ ಅನುಕೂಲಕ್ಕಾಗಿ ಈ ಕ್ರಮ ಅಗತ್ಯವಾಗಿದೆ. ಎಎಫ್‌ಎಸ್‌ಪಿಎ ನಾಗಾಲ್ಯಾಂಡ್‌ನಲ್ಲಿ ದಶಕಗಳಿಂದ ಜಾರಿಯಲ್ಲಿದೆ.

ನಾಗಾ ದಂಗೆಕೋರರ ಗುಂಪು ಎನ್‌ಎಸ್‌ಸಿಎನ್-ಐಎಂ ಪ್ರಧಾನ ಕಾರ್ಯದರ್ಶಿ ತುಯಿಂಗಲೆಂಗ್ ಮುಯಿವಾ ಮತ್ತು ಸರ್ಕಾರಿ ಸಂವಾದ ಅಧಿಕಾರಿ ಆರ್ ಎನ್ ರವಿ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ 2015 ರ ಆಗಸ್ಟ್ 3 ರಂದುಒಪ್ಪಂದಕ್ಕೆ ಸಹಿ ಹಾಕಿದ ನಂತರವೂ ಅದನ್ನು ಹಿಂತೆಗೆದುಕೊಂಡಿಲ್ಲ.

ನಾಗಾಲ್ಯಾಂಡ್ ನಲ್ಲಿ ದಶಕಗಳ ಬಂಡಾಯದ ನಂತರ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತಂದಾಗ 1997 ರಲ್ಲಿ ಮೊದಲ ಬಾರಿಗೆ 18 ವರ್ಷಗಳ ಅವಧಿಯಲ್ಲಿ 80 ಸುತ್ತಿನ ಮಾತುಕತೆಗಳ ನಂತರ ಈ ಒಪ್ಪಂದವು ಏರ್ಪಟ್ಟಿತ್ತು. ಆದರೆ, ಕೇಂದ್ರ ಸರ್ಕಾರವು ತಿರಸ್ಕರಿಸಿದ ನಾಗಾಲ್ಯಾಂಡ್‌ಗೆ ಎನ್‌ಎಸ್‌ಸಿಎನ್-ಐಎಂ ಪ್ರತ್ಯೇಕ ಧ್ವಜ ಮತ್ತು ಸಂವಿಧಾನವನ್ನು ಕೋರಿರುವುದರಿಂದ ಶಾಂತಿ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com