ಜೂನ್ 20ರ ವೇಳೆಗೆ 10ನೇ ತರಗತಿ ಫಲಿತಾಂಶ ಪ್ರಕಟ: ಇಂಟರ್ನಲ್ಸ್ ಆಧಾರದ ಮೇಲೆ ವಿದ್ಯಾರ್ಥಿಗಳ ಮೌಲ್ಯಮಾಪನ 

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿರುವ ಸಿಬಿಎಸ್ ಇ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ನೀತಿಯೊಂದನ್ನು ಅನುಸರಿಸುವುದಾಗಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿರುವ ಸಿಬಿಎಸ್ ಇ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ನೀತಿಯೊಂದನ್ನು ಅನುಸರಿಸುವುದಾಗಿ ಹೇಳಿದೆ.

ಈ ನೀತಿಯ ಪ್ರಕಾರ, ಪ್ರತಿ ವರ್ಷದಂತೆ ಎಲ್ಲಾ ವಿಷಯಗಳಲ್ಲಿ 20 ಅಂಕಗಳನ್ನು ಇಂಟರ್ನಲ್ ಅಸೆಸ್ ಮೆಂಟ್ ಗೆ ಮೀಸಲಿಟ್ಟರೆ, ಇಡೀ ವರ್ಷದಲ್ಲಿ ವಿದ್ಯಾರ್ಥಿ ಹಿಂದಿನ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು, ಮಾಡಿರುವ ಸಾಧನೆಗಳ ಆಧಾರದ ಮೇಲೆ ಉಳಿದ 80 ಅಂಕಗಳನ್ನು ನೀಡಲಾಗುತ್ತದೆ.

ಪ್ರತಿ ವಿಷಯಕ್ಕೆ ಗರಿಷ್ಠ 100 ಅಂಕಗಳಿಗೆ ವಿದ್ಯಾರ್ಥಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಮಂಡಳಿಯ ನೀತಿಯ ಪ್ರಕಾರ, 20 ಅಂಕಗಳು ಇಂಟರ್ನಲ್ ಅಸೆಸ್ ಮೆಂಟ್ ಗಾದರೆ ಉಳಿದ 80 ಅಂಕಗಳು ವರ್ಷದ ಕೊನೆಯ ಪರೀಕ್ಷೆಗಾಗಿರುತ್ತದೆ.

ಈ ವರ್ಷ 10ನೇ ತರಗತಿ ಫಲಿತಾಂಶ ಜೂನ್ 20ರೊಳಗೆ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com