ಸಂಗ್ರಹ ಚಿತ್ರ
ದೇಶ
ಕೋವಿಡ್ ಹೆಚ್ಚಳ: ಹರಿಯಾಣದಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ
ಕೊರೋನಾವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ, ಹರಿಯಾಣ ಸರ್ಕಾರವು ಮೇ 3 ರಿಂದ ಇಡೀ ರಾಜ್ಯದಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ಜಾರಿ ಮಾಡುವುದಾಗಿ ಪ್ರಕಟಿಸಿದೆ.
ಚಂಡೀಘರ್: ಕೊರೋನಾವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ, ಹರಿಯಾಣ ಸರ್ಕಾರವು ಮೇ 3 ರಿಂದ ಇಡೀ ರಾಜ್ಯದಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ಜಾರಿ ಮಾಡುವುದಾಗಿ ಪ್ರಕಟಿಸಿದೆ.
ಈ ಹಿಂದೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
"ಮೇ 3 ರಿಂದ ಇಡೀ ರಾಜ್ಯದಲ್ಲಿ 7 ದಿನಗಳ ಲಾಕ್ ಡೌನ್ ಇರುತ್ತದೆ" ಎಂದು ಹರಿಯಾಣದ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಭಾನುವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಶನಿವಾರ 125 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸಾವಿನ ಸಂಖ್ಯೆ 4,341 ಕ್ಕೆ ತಲುಪಿದ್ದು, 13,588 ಹೊಸ ಪ್ರಕರಣಗಳು ವರದಿಯಾಗಿದೆ. ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 5,01,566 ಕ್ಕೆ ತಲುಪಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ