ವಿವಿಧ ರಾಜ್ಯಗಳಿಗೆ ಮೇ 10 ರಿಂದ 16 ರವರೆಗಿನ ಬಳಕೆಗಾಗಿ ಕೇಂದ್ರದಿಂದ 19.2 ಲಕ್ಷ ರೆಮಿಡಿಸಿವಿರ್ ವಯಲ್ಸ್ ಹಂಚಿಕೆ

ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ  ರೆಮಿಡಿಸಿವಿರ್ ಇಂಜೆಕ್ಷನ್ ವಯಲ್ಸ್ ಗಳನ್ನುಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.
ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ
ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ
Updated on

ನವದೆಹಲಿ: ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ  ರೆಮಿಡಿಸಿವಿರ್ ಇಂಜೆಕ್ಷನ್ ವಯಲ್ಸ್ ಗಳನ್ನು
ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ. ಕರ್ನಾಟಕಕ್ಕೆ 2,62,346 ವಯಲ್ಸ್ ( ಶೇ.13.6)  ಒದಗಿಸಲಾಗಿದೆ.ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ 5 ಲಕ್ಷದ 75 ಸಾವಿರ ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರೆಮಿ ಡಿಸಿವಿರ್ ಹಂಚಿಕೆಯನ್ನು 2,62,346 ವಯಲ್ಸ್ ಗೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರಿಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com