ಗೋವಾ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಸಾವು: ಆಮ್ಲಜನಕ ಕೊರತೆ ಆರೋಪ

ಗೋವಾ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಸಾವು: ಆಮ್ಲಜನಕ ಕೊರತೆ ಆರೋಪ

26 ಕೋವಿಡ್ -19 ರೋಗಿಗಳು ಗೋವಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ ಸಾವನ್ನಪ್ಪಿದ್ದಾರೆ ಮತ್ತು ನಿಖರವಾದ ಕಾರಣ ತಿಳಿಯಲು ಹೈಕೋರ್ಟ್‌ನಿಂದ ತನಿಖೆಗೆ ಕೋರಿರುವುದಾಗಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ. 
Published on

ಪಣಜಿ: 26 ಕೋವಿಡ್-19 ರೋಗಿಗಳು ಗೋವಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ ಸಾವನ್ನಪ್ಪಿದ್ದಾರೆ ಮತ್ತು ನಿಖರವಾದ ಕಾರಣ ತಿಳಿಯಲು ಹೈಕೋರ್ಟ್‌ನಿಂದ ತನಿಖೆಗೆ ಕೋರಿರುವುದಾಗಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ. ಬೆಳಿಗ್ಗೆ 2 ರಿಂದ 6 ರವರೆಗೆ ಈ ಸಾವುನೋವುಗಳು ಸಂಭವಿಸಿವೆ ಎಂದು ಅವರು ಹೇಳಿದರು, ಆದರೆ ಇದರ ಹಿಂದಿನ ಕಾರಣ ಇನ್ನೂ ಖಚಿತವಾಗಿಲ್ಲ.

ಜಿಎಂಸಿಎಚ್‌ಗೆ ಭೇಟಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ಜಿಎಂಸಿಎಚ್‌ನಲ್ಲಿನ ಕೋವಿಡ್ ವಾರ್ಡ್‌ಗಳಿಗೆ ಅದರ ಪೂರೈಕೆಯ ನಡುವಿನ ವ್ಯತ್ಯಾಸ ರೋಗಿಗಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಿರಬಹುದು" ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, ಸೋಮವಾರದವರೆಗೆ ಜಿಎಂಸಿಎಚ್‌ನಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿನ ಕೊರತೆಯನ್ನು ಒಪ್ಪಿಕೊಂಡಿದ್ದಾರೆ. "ಈ ಸಾವುಗಳ ಹಿಂದಿನ ಕಾರಣಗಳನ್ನು ಹೈಕೋರ್ಟ್ ತನಿಖೆ ಮಾಡಬೇಕು. ಜಿಎಂಸಿಎಚ್‌ಗೆ ಆಮ್ಲಜನಕದ ಪೂರೈಕೆಯ ಬಗ್ಗೆ ಹೈಕೋರ್ಟ್ ಸಹ ಮಧ್ಯಪ್ರವೇಶಿಸಿ ಶ್ವೇತಪತ್ರವನ್ನು ಸಿದ್ಧಪಡಿಸಬೇಕು, ಇದು ವಿಷಯಗಳನ್ನು ಸರಿಯಾಗಿ ನಿರೂಪಿಸಲು ಸಹಾಯ ಮಾಡುತ್ತದೆ" ಎಂದು ಆರೋಗ್ಯ ಸಚಿವರು ಜಿಎಂಸಿಎಚ್‌ಗೆ ಭೇಟಿ ನೀಡಿದ ನಂತರ ಹೇಳಿದರು.

ಸೋಮವಾರದವರೆಗೆ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ 1,200 ಜಂಬೋ ಸಿಲಿಂಡರ್‌ಗಳಷ್ಟಿದ್ದು , ಅದರಲ್ಲಿ 400 ಮಾತ್ರ ಸರಬರಾಜು ಮಾಡಲಾಗಿದೆ ಎಂದು ರಾಣೆ ಹೇಳಿದರು. "ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಿದ್ದರೆ, ಆ ವ್ಯತ್ಯಾಸವನ್ನು ಹೇಗೆ ನಿವಾರಿಸುವುದು ಎಂಬುದರ ಕುರಿತು ಚರ್ಚೆಯನ್ನು ನಡೆಸಬೇಕು" ಎಂದು ಅವರು ಹೇಳಿದರು.

ಜಿಎಂಸಿಎಚ್‌ನಲ್ಲಿ ಕೋವಿಡ್19 ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರ ನೇಮಿಸಿರುವ ನೋಡಲ್ ಅಧಿಕಾರಿಗಳ ಮೂರು ಸದಸ್ಯರ ತಂಡವು ಸಿಎಂಗೆ ಸಮಸ್ಯೆಗಳ ಬಗ್ಗೆ ಅದರ ಆಳ ಅಗಲದ ಬಗ್ಗೆ ವಿವರ ನೀಡಬೇಕು.  ಹಿಂದಿನ ದಿನ, ಪಿಪಿಇ ಕಿಟ್ ಧರಿಸಿದ ಸಿಎಂ ಜಿಎಂಸಿಎಚ್‌ನ ಕೋವಿಡ್ 19 ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಭೇಟಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com