ಪಿಎಂ ಕೇರ್ಸ್ ನಿಧಿ ಮೂಲಕ 322.5 ಕೋಟಿ ವೆಚ್ಚದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್‌ ಖರೀದಿ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 1.5 ಲಕ್ಷ ಯುನಿಟ್‌ಗಳ 'ಆಕ್ಸಿಕೇರ್' ವ್ಯವಸ್ಥೆಯನ್ನು 322.5 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಪಿಎಂ ಕೇರ್ಸ್ ಫಂಡ್ ಅನುಮತಿ ನೀಡಿದೆ.
ಆಕ್ಸಿಜನ್ ಪೂರೈಕೆ ವ್ಯವಸ್ಥೆ
ಆಕ್ಸಿಜನ್ ಪೂರೈಕೆ ವ್ಯವಸ್ಥೆ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 1.5 ಲಕ್ಷ ಯುನಿಟ್‌ಗಳ 'ಆಕ್ಸಿಕೇರ್' ವ್ಯವಸ್ಥೆಯನ್ನು 322.5 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಪಿಎಂ ಕೇರ್ಸ್ ಫಂಡ್ ಅನುಮತಿ ನೀಡಿದೆ.

ಆಕ್ಸಿಕೇರ್ ಎನ್ನುವುದು ಎಸ್‌ಪಿಒ 2 ಆಧಾರಿತ ಆಮ್ಲಜನಕ ಪೂರೈಕೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಿಂದ ರೋಗಿಗಳಿಗೆ ಆಮ್ಲಜನಕ ನೀಡುವಿಕೆ ಮಟ್ಟ ನಿಯಂತ್ರಿಸುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹೈಪೋಕ್ಸಿಯಾ ಸ್ಥಿತಿಗೆ ತಲುಪದಂತೆ ತಡೆಯಬಲ್ಲ ಆಕ್ಸಿಕೇರ್ ಯುನಿಟನ್ನು ಡಿಆರ್‌ಡಿಒದ ಬೆಂಗಳೂರಿನ ಡಿಫೆನ್ಸ್ ಬಯೋ-ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ (ಡೆಬೆಲ್) ಅಭಿವೃದ್ಧಿಪಡಿಸಿದೆ.

ದೇಶದಲ್ಲಿ ಕೊರೋನಾ ದಿನ ಕಳೆದಂತೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ನೆರವಾಗಲು ಪಿಎಂ ಕೇರ್ಸ್ ನಿಧಿಯಡಿ 322.5 ಕೋಟಿ ರುಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಖರೀದಿ ಮಾಡಲಾಗುತ್ತಿದೆ. 

ಭಾರತೀಯ ಯೋಧರಿಗಾಗಿ ಈ ಆಕ್ಸಿಕೇರ್ ಯುನಿಟ್ ಬಳಸಲಾಗುತ್ತದೆ. ಎತ್ತರದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವುದಿಲ್ಲ. ಹೀಗಾಗಿ ಈ ಕಿಟ್ ಅಲ್ಲಿನ ಯೋಧರಿಗೆ ನೆರವಾಗುತ್ತದೆ. 

ಇದೀಗ ದೇಶದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಹೆಚ್ಚು ಜನರು ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಅಂತಹವರಿಗೆ ಈ ಕಿಟ್ ಗಳು ಹೆಚ್ಚು ನೆರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com