'ನಗಬೇಕೋ ಅಳಬೇಕೋ'? ಕೋವಿಡ್ ತಡೆಯಲು ಸಗಣಿ ಬಳಕೆ ಬಗ್ಗೆ ಅಖಿಲೇಶ್ ಯಾದವ್ ಟ್ವೀಟ್

ಕೋವಿಡ್ ವಿರುದ್ಧ ಪ್ರತಿರೋಧ ಶಕ್ತಿ ಪಡೆಯಲು ಜನರು ದೇಹಕ್ಕೆ ಗೋಮೂತ್ರ ಬೆರೆಸಿ ಸೆಗಣಿ ಮೆತ್ತಿಕೊಂಡಿರುವ ವಿಡಿಯೋ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 'ಟ್ವೀಟ್ ಮಾಡಿದ್ದಾರೆ. 
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ದೆಹಲಿ: ಕೋವಿಡ್ ವಿರುದ್ಧ ಪ್ರತಿರೋಧ ಶಕ್ತಿ ಪಡೆಯಲು ಜನರು ದೇಹಕ್ಕೆ ಗೋಮೂತ್ರ ಬೆರೆಸಿ ಸೆಗಣಿ ಮೆತ್ತಿಕೊಂಡಿರುವ ವಿಡಿಯೋ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 'ಟ್ವೀಟ್ ಮಾಡಿದ್ದಾರೆ. 

ಗುಜರಾತ್‌ನ ಅಹಮದಾಬಾದ್‌ನ ವೀಡಿಯೊವೊಂದನ್ನು ಕಾಮೆಂಟ್ ಮಾಡಿ, ಪುರುಷರು ಸೆಗಣಿ ಮತ್ತು ಮೂತ್ರದಲ್ಲಿ ಸಂತೋಷದಿಂದ ಮೀಯಿಸಿಕೊಳ್ಳುತ್ತಿರುವ ವೀಡಿಯೋ ನೋಡಿ ದಿಗ್ಭ್ರಮೆಗೊಂಡು ನಾವು ಅಳಬೇಕೇ ಅಥವಾ ನಗಬೇಕೇ ಎಂದು ಪ್ರಶ್ನಿಸಿದ್ದಾರೆ.

ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಂ ಎಂಬ ಶಾಲೆಯಲ್ಲಿ ಜನರು ದೇಹಕ್ಕೆ ಸೆಗಣಿ ಮೆತ್ತಿಕೊಂಡಿರುವುದರ ಬಗ್ಗೆ ರಾಯಿಟರ್ಸ್ ಸಂಸ್ಥೆಯ ವರದಿಯ ವಿಡಿಯೋವನ್ನು ಅಖಿಲೇಶ್ ರೀಟ್ವೀಟ್ ಮಾಡಿದ್ದಾರೆ.

ಈ ಶಾಲೆಯಲ್ಲಿ ಕೆಲವರು ವಾರಕ್ಕೊಮ್ಮೆ ಗೋವಿನ ಸಗಣಿ ಮತ್ತು ಮೂತ್ರವನ್ನು ತಮ್ಮ ದೇಹದ ಮೇಲೆ ಹಚ್ಚಿ, ಹಸುಗಳನ್ನು ತಬ್ಬಿಕೊಳ್ಳುತ್ತಾರ, ಯೋಗಾಭ್ಯಾಸ ಮಾಡುತ್ತಾರೆ. ಸುಮಾರು ಒಂದು 12 ಮಂದಿ ಪುರುಷರು ಮೈದಾನದಲ್ಲಿ ಅಂಗಿ ಬಿಚ್ಚಿ ಬಕೆಟ್ ನಲ್ಲಿರುವ ದ್ರವರೂಪದ ಹಸುವಿನ ಸೆಗಣಿಯನ್ನು ಮೈಕೈಗೆ ಹಚ್ಚಿಕೊಳ್ಳುತ್ತಿರುವುದು ವಿಡಿಯೊದಲ್ಲಿದೆ. ಸೆಗಣಿ ಹಚ್ಚಿದ ನಂತರ ವೃತ್ತಾಕಾರದಲ್ಲಿ ನಿಂತು ಎಲ್ಲರೂ ಪ್ರಾರ್ಥನೆ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com