ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಎದುರಿಸಿದ ರೀತಿ, ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯವೇ ಬಿಜೆಪಿ ಸೋಲಿಗೆ ಕಾರಣ: ಆರ್ ಎಸ್ಎಸ್ ಟೀಕೆ

ಭಾರತದ ಬಲ ಪಂಥೀಯ, ಹಿಂದೂವಾದಿ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್), ಕೇಸರಿ ಪಕ್ಷ ಬಿಜೆಪಿಯನ್ನು, ಅದು ಇತ್ತೀಚೆಗೆ ಮುಗಿದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮತ್ತು ಅಲ್ಲಿನ ಚುನಾವಣೆಯನ್ನು ಎದುರಿಸಿದ ರೀತಿಗೆ ಕಟುವಾಗಿ ಟೀಕಿಸಿದೆ.
ಬಿಜೆಪಿ ಬಾವುಟ
ಬಿಜೆಪಿ ಬಾವುಟ
Updated on

ಕೋಲ್ಕತ್ತಾ: ಭಾರತದ ಬಲ ಪಂಥೀಯ, ಬಲವಾದ ರಾಷ್ಟ್ರೀಯವಾದಿ, ಹಿಂದೂವಾದಿ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ಎಸ್), ಕೇಸರಿ ಪಕ್ಷ ಬಿಜೆಪಿಯನ್ನು, ಅದು ಇತ್ತೀಚೆಗೆ ಮುಗಿದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮತ್ತು ಅಲ್ಲಿನ ಚುನಾವಣೆಯನ್ನು ಎದುರಿಸಿದ ರೀತಿಗೆ ಕಟುವಾಗಿ ಟೀಕಿಸಿದೆ.

ಪಶ್ಚಿಮ ಬಂಗಾಳದ ಮತದಾರರಲ್ಲಿ ತೃಣಮೂಲ ಕಾಂಗ್ರೆಸ್ ನ ಜನಪ್ರಿಯತೆಯನ್ನು ಏಕೆ ಬಿಜೆಪಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ತನ್ನ ಮುಖವಾಣಿ ಆರ್ಗನೈಸರ್ ನಲ್ಲಿ ಜರೆದಿರುವ ಆರ್ ಎಸ್ ಎಸ್, ಕೋವಿಡ್-19 ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದು ಮತ್ತು ಮಮತಾ ಬ್ಯಾನರ್ಜಿಯವರ ಅಭಿವೃದ್ಧಿಶೀಲ ಯೋಜನೆಗಳು ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷದ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಎದುರಿಸುತ್ತಿರುವ ರೀತಿ ಬಗ್ಗೆ ಬಿಜೆಪಿಯ ನಿಲುವನ್ನು ಕಳೆದ ಮಾರ್ಚ್ ನಲ್ಲಿ ಅಹಮದಾಬಾದ್ ನಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ಆರ್ ಎಸ್ ಎಸ್ ವಿರೋಧಿಸಿತ್ತು. ಆದರೆ ಆರ್ ಎಸ್ ಎಸ್ ಮಾತಿಗೆ ಆಗ ಕೇಂದ್ರದ ಬಿಜೆಪಿ ನಾಯಕರು ಮಹತ್ವ ಕೊಟ್ಟಿರಲಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.

ಆರ್ಗನೈಸರ್ ಮುಖವಾಣಿಯಲ್ಲಿ ಬ್ಯಾಡ್ ಎಕ್ಸ್ಪರಿಮೆಂಟ್ಸ್ ಇನ್ ಬೆಂಗಾಲ್ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನದಲ್ಲಿ, ಫಲಾನುಭವಿಗಳಿಗೆ ವಿಭಿನ್ನ ಯೋಜನೆಗಳ ಮೂಲಕ ಟಿಎಂಸಿ ಗಮನ ಸೆಳೆದಿರುವುದು, ಕಳೆದ ಎರಡು ಹಂತಗಳಲ್ಲಿ (ಚುನಾವಣೆಗಳಲ್ಲಿ) ಕೋವಿಡ್ -19ನಲ್ಲಿ ಕೇಂದ್ರ ಸರ್ಕಾರದ ನಿರ್ವಹಣೆ ಪಶ್ಚಿಮ ಬಂಗಾಳ ಜನತೆ ಟಿಎಂಸಿ ನಾಯಕರನ್ನು ಸ್ವಾಗತಿಸಿ ಬಿಜೆಪಿಯನ್ನು ತಿರಸ್ಕರಿಸುವಂತೆ ಮಾಡಿತು ಎಂದು ಬರೆಯಲಾಗಿದೆ.

ಬಿಜೆಪಿ ಸೇರಿದಂತೆ ಎಡ ತೃತೀಯರಂಗ, ಕಾಂಗ್ರೆಸ್ ನ ಮತ ವಿಭಜನೆಯಾಗಿ ಮಮತಾ ಅವರ ತೃಣಮೂಲ ಕಾಂಗ್ರೆಸ್ ಗೆ ಹೋಗಿರುವುದು ಕೂಡ ಅವರ ಗೆಲುವಿಗೆ ಮತ್ತೊಂದು ಕಾರಣವಾಗಿದೆ. ಬಿಜೆಪಿಯ ಶೇಕಡಾ 2ರಷ್ಟು ಕಡಿಮೆ ಮತಗಳು, ಕಾಂಗ್ರೆಸ್ ಮತ್ತು ಎಡ ತೃತೀಯ ರಂಗದ ಶೇಕಡಾ 5ರಷ್ಟು ಮತಗಳು ಟಿಎಂಸಿ ಕಡೆ ವಾಲಿದ್ದು ಫಲಿತಾಂಶದಲ್ಲಿ ಎಲ್ಲಾ ಬದಲಾಗಲು ಕಾರಣವಾಯಿತು ಎಂದು ಆರ್ ಎಸ್ ಎಸ್ ಹೇಳಿದೆ.

ಕೆಳವರ್ಗದ ಸಮುದಾಯಗಳನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೂಡ ಬಿಜೆಪಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com