ಆಕ್ಸಿಜನ್ ಸಿಲೆಂಡರ್
ಆಕ್ಸಿಜನ್ ಸಿಲೆಂಡರ್

ಉಚಿತ ಆಕ್ಸಿಜನ್ ಪೂರೈಕೆ ಮೂಲಕ ಶಾಜಾನ್ ಪುರ ಯುವತಿಯ ಸಹಾಯಹಸ್ತ: ಸಾಮಾಜಿಕ ಕಳಕಳಿಗೆ ಮೆಚ್ಚುಗೆಯ ಮಹಾಪೂರ!

ಕೋವಿಡ್-19 ನಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿರುವವರಿಗಷ್ಟೇ ಅದೇ ಪರಿಸ್ಥಿತಿಯಲ್ಲಿರುವ ಮತ್ತೋರ್ವರ ನೋವು ಸ್ಪಷ್ಟವಾಗಿ ತಿಳಿಯುವುದಕ್ಕೆ ಸಾಧ್ಯ ಎನಿಸುತ್ತದೆ. 
Published on

ಶಾಜಹಾನ್ಪುರ: ಕೋವಿಡ್-19 ನಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿರುವವರಿಗಷ್ಟೇ ಅದೇ ಪರಿಸ್ಥಿತಿಯಲ್ಲಿರುವ ಮತ್ತೋರ್ವರ ನೋವು ಸ್ಪಷ್ಟವಾಗಿ ತಿಳಿಯುವುದಕ್ಕೆ ಸಾಧ್ಯ ಎನಿಸುತ್ತದೆ. 

ಅಂತಹದ್ದೇ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ಯುವತಿಯೋರ್ವಳು ತನಗೆ ಎದುರಾದ ಸಮಸ್ಯೆ ಮತ್ತೋರ್ವರಿಗೆ ಎದುರಾಗಬಾರದೆಂದು ನೆರವಿಗೆ ನಿಂತಿದ್ದಾಳೆ. ಆಕೆ ಶಾಜಹಾನ್ಪುರದ ಯುವತಿ ಆರ್ಶಿ (26) ಈಕೆ ಕೋವಿಡ್-19 ನಿಂದ ಬಳಲುತ್ತಿರುವವರಿಗೆ ಆಕ್ಸಿಜನ್ ಸಿಲೆಂಡರ್ ನ್ನು ಪೂರೈಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಈಕೆಗೆ ಸಿಲೆಂಡರ್ ವಾಲಿ ಬಿಟಿಯಾ (ಸಿಲೆಂಡರ್ ನೀಡುವ ಮಗಳು) ಎಂಬ ಹೆಸರು ಬಂದಿದೆ. 

"ನನ್ನ ತಂದೆ ಮಶೂರ್ ಗೆ ಕೋವಿಡ್-19 ಸೋಂಕು ತಗುಲಿ ಮನೆಯಲ್ಲಿಯೇ ಐಸೊಲೇಟ್ ಆಗಿದ್ದಾಗ ಉಸಿರಾಟದ ಸಮಸ್ಯೆ ತೀವ್ರಗೊಂಡು ಸಿಲೆಂಡರ್ ಗಾಗಿ ಅಲೆದಾಡಿದ್ದರು. ಆದರೆ ಮನೆಯಲ್ಲಿಯೇ ಇರುವುದರಿಂದ ಸಿಲೆಂಡರ್ ನೀಡುವುದಕ್ಕೆ ಸಾಧ್ಯವಿಲ್ಲ, ಆಸ್ಪತ್ರೆಗೆ ದಾಖಲಾಗಿ ಎಂಬ ಪ್ರತಿಕ್ರಿಯೆ ಬರುತ್ತಿತ್ತು, ಕೊನೆಗೂ ಸಿಟಿ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಸಿಲಿಂಡರ್ ವ್ಯವಸ್ಥೆಯನ್ನು ಮಾಡಲಾಯಿತು". ಎಂದು ತನ್ನ ಕರಾಳ ಅನುಭವವನ್ನು ಯುವತಿ ಬಿಚ್ಚಿಟ್ಟಿದ್ದಾರೆ. 

ಈಗ ತನಗೆ ಎದುರಾದ ಪರಿಸ್ಥಿತಿ ಯಾರಿಗೂ ಬರಬಾರದೆಂಬ ಸಂಕಲ್ಪದೊಂದಿಗೆ ಆಕ್ಸಿಜನ್ ಸಿಲೆಂಡರ್ ಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಯುವತಿ, ತನ್ನ ದ್ವಿಚಕ್ರ ವಾಹನ, ಸಹೋದರರು ಹಾಗೂ ಇನ್ನಿತರ ಸಹಚರರ ಸಹಾಯದೊಂದಿಗೆ ಈ ವರೆಗೂ 20 ಆಕ್ಸಿಜನ್ ಸಿಲೆಂಡರ್ ಗಳನ್ನು ಉಚಿತವಾಗಿ ನೀಡಿದ್ದಾರೆ. 

"ಉತ್ತರಾಖಂಡ್ ನ ಮೂಲದ ಸಾಮಾಜಿಕ ಸಂಘಟನೆಯೊಂದಿಗೆ ವಾಟ್ಸ್ ಮೂಲಕ ಪರಿಚಯ ಹೊಂದಿದೆ. ಅದೇ ಸಂಘಟನೆ ನನ್ನ ತಂದೆಗೂ ಆಕ್ಸಿಜನ್ ನೀಡಿತ್ತು. ಆಗಿನಿಂದ ನಾನೂ ಸಹ ವಾಟ್ಸ್ ಆಪ್ ಮೂಲಕ ಅಥವಾ ಫೋನ್ ಮೂಲಕ ಯಾರಾದರೂ ಆಕ್ಸಿಜನ್ ಗೆ ಮನವಿ ಮಾಡಿದಲ್ಲಿ, ಸಾಮಾಜಿಕ ಸಂಘಟನೆಗಳೊಂದಿಗೆ ಸೇರಿ ಸಹಾಯ ಮಾಡುತ್ತೇನೆ ಎಂದು ಯುವತಿ ತಿಳಿಸಿದ್ದಾರೆ.  ಯುವತಿಯ ಸಾಮಾಜಿಕ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 

X

Advertisement

X
Kannada Prabha
www.kannadaprabha.com