ಕೋವಿಡ್ ಚಿಕಿತ್ಸೆಯ ಮಾರ್ಗಸೂಚಿಗಳಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಟ್ಟ ಕೇಂದ್ರ

ಕೋವಿಡ್-19 ಚಿಕಿತ್ಸೆಯ ಕ್ಲಿನಿಕಲ್ ಗೈಡ್ ಲೈನ್ ಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದೆ, ತೀವ್ರವಾದ ರೋಗ ಅಥವಾ ಸಾವಿನ ಸಾಧ್ಯತೆ  ಕಡಿಮೆ ಮಾಡಲು ಪ್ರಯೋಜನಕಾರಿಯಲ್ಲ ಎಂದು ಕಂಡುಬಂದ ಕಾರಣ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದ  ಬಳಕೆಯನ್ನು ಮಾರ್ಗಸೂಚಿಯಿಂದ ಕೈಬಿಡಲಾಯಿತು.
ಕೋವಿಡ್ ಚಿಕಿತ್ಸೆಯ ಮಾರ್ಗಸೂಚಿಗಳಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಟ್ಟ ಕೇಂದ್ರ
Updated on

ನವದೆಹಲಿ: ಕೋವಿಡ್-19 ಚಿಕಿತ್ಸೆಯ ಕ್ಲಿನಿಕಲ್ ಗೈಡ್ ಲೈನ್ ಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದೆ, ತೀವ್ರವಾದ ರೋಗ ಅಥವಾ ಸಾವಿನ ಸಾಧ್ಯತೆ ಕಡಿಮೆ ಮಾಡಲು ಪ್ರಯೋಜನಕಾರಿಯಲ್ಲ ಎಂದು ಕಂಡುಬಂದ ಕಾರಣ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದ  ಬಳಕೆಯನ್ನು ಮಾರ್ಗಸೂಚಿಯಿಂದ ಕೈಬಿಡಲಾಯಿತು.

ಕಳೆದ ವಾರ ಕೋವಿಡ್  ಗಾಗಿನ ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಟಾಸ್ಕ್ ಫೋರ್ಸ್ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ. ಇದರಲ್ಲಿ ಎಲ್ಲಾ ಸದಸ್ಯರು ಪ್ಲಾಸ್ಮಾ ಬಳಕೆಯನ್ನು ಮಾರ್ಗಸೂಚಿಗಳಿಂದ ತೆಗೆದುಹಾಕುವ ಪರ ಇದ್ದರು. ವಯಸ್ಕ ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಕ್ಲಿನಿಕಲ್ ಗೈಡ್ ಲೈನ್ ಗಳನ್ನು "ಪರಿಷ್ಕರಿಸಿದೆ" ಮತ್ತು "ಪ್ಲಾಸ್ಮಾ ಥೆರಪಿ"ಯನ್ನು ಕೈಬಿಡಲಾಗಿದೆ" ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂದಿನ ಮಾರ್ಗಸೂಚಿ ಆರಂಭಿಕ, ಮಧ್ಯಮ ಕಾಯಿಲೆಯ ಹಂತದಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಬಳಕೆಯನ್ನು ಶಿಫಾರಸು ಮಾಡಲಾಗುತ್ತಿತ್ತು. ಮಾರ್ಗಸೂಚಿಗಳಿಂದ ಅದನ್ನು ತೆಗೆದುಹಾಕುವ ನಿರ್ಧಾರದ ಪರ ವೈದ್ಯರು ಮತ್ತು ವಿಜ್ಞಾನಿಗಳು ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಅವರಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ. ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ಮತ್ತು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರಿಗೆ ಕಳಿಸಲಾಗಿರುವ ಪತ್ರದಲ್ಲಿ, ಪ್ಲಾಸ್ಮಾ ಚಿಕಿತ್ಸೆಯ ಪ್ರಸ್ತುತ ಮಾರ್ಗಸೂಚಿ ಅಸ್ತಿತ್ವದಲ್ಲಿರುವ ಪುರಾವೆಗಳನ್ನು ಆಧರಿಸಿಲ್ಲ ಎಂದು ಸಾರ್ವಜನಿಕ ಆರೋಗ್ಯ ಪರಿಣಿತರು  ಆರೋಪಿಸಿದ್ದಾರೆ ಮತ್ತು ಔಟ್ ಕಮ್ ನಡುವಿನ ಸಂಭಾವ್ಯ ಸಂಬಂಧವನ್ನು ಸೂಚಿಸುವ ಕೆಲವು ಮುಂಚಿನ ಪುರಾವೆಗಳತ್ತ ಗಮನ ಸೆಳೆದಿದ್ದಾರೆ. 

"ಪ್ರಸ್ತುತ ಸಂಶೋಧನಾ ಪುರಾವೆಗಳು ಕೋವಿಡ್ ಚಿಕಿತ್ಸೆಗೆ ಪ್ಲಾಸ್ಮಾ ನಿಡುವುದರಿಂದ ಯಾವ ಯೋಜನವಿಲ್ಲ ಎಂದು ಸರ್ವಾನುಮತದಿಂದ ಸೂಚಿಸುತ್ತದೆ. ಆದಾಗ್ಯೂ, ಭಾರತದಾದ್ಯಂತದ ಆಸ್ಪತ್ರೆಗಳಲ್ಲಿ ಇದನ್ನು ಶಿಫಾರಸು ಮಾಡಲಾಗುತ್ತಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com