ಜೆ ಕೆ ದತ್
ದೇಶ
26/11 ಉಗ್ರದಾಳಿಯ ವಿರುದ್ಧ ಹೋರಾಡಿದ್ದ ಎನ್‌ಎಸ್‌ಜಿ ಮಾಜಿ ಮುಖ್ಯಸ್ಥ ಕೊರೋನಾದಿಂದ ನಿಧನ
2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಮಾಂಡೋ ಪಡೆಗೆ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಮಾಜಿ ಮಹಾನಿರ್ದೇಶಕ ಜೆಕೆ ದತ್(72) ಬುಧವಾರ ಕೋವಿಡ್-19 ನಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಮಾಂಡೋ ಪಡೆಗೆ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಮಾಜಿ ಮಹಾನಿರ್ದೇಶಕ ಜೆಕೆ ದತ್(72) ಬುಧವಾರ ಕೋವಿಡ್-19 ನಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿಯನ್ನು ಏಪ್ರಿಲ್ 14 ರಂದು ಗುರುಗ್ರಾಮದ ಮೆದಂತಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆಮ್ಲಜನಕದ ಮಟ್ಟ ಕ್ಷೀಣಿಸಲು ಪ್ರಾರಂಭಿಸಿದ್ದವೆಂದು ಕುಟುಂಬ ಮೂಲಗಳು ಪಿಟಿಐಗೆ ತಿಳಿಸಿವೆ.
"ಅವರು ಇಂದು ಮಧ್ಯಾಹ್ನ 3: 30 ಕ್ಕೆ ಹೃದಯ ಸ್ತಂಭನದಿಂದ ನಿಧನರಾದರು" ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದರು.
ದತ್ ಅವರ ಪತ್ನಿ, ಮಗ, ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದಾರೆ ಪುತ್ರಿ ಯುಕೆನಲ್ಲಿ ನೆಲೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ