ಉತ್ತಮವಾದ ಗಾಳಿ ಬೆಳಕಿನಿಂದ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಕಡಿಮೆ!

ಉತ್ತಮ ಗಾಳಿ-ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಕಡಿಮೆ ಇರಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮೇ.20 ರಂದು ಹೇಳಿದೆ.
ಕೋವಿಡ್-19 ಕೇರ್ ಕೇಂದ್ರವಾಗಿ ಮಾರ್ಪಾಡಾಗಿರುವ ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ನಿವಾಸ
ಕೋವಿಡ್-19 ಕೇರ್ ಕೇಂದ್ರವಾಗಿ ಮಾರ್ಪಾಡಾಗಿರುವ ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ನಿವಾಸ

ನವದೆಹಲಿ: ಉತ್ತಮ ಗಾಳಿ-ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಕಡಿಮೆ ಇರಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮೇ.20 ರಂದು ಹೇಳಿದೆ.

ವ್ಯಕ್ತಿಯಿಂದ ವ್ಯಕ್ತಿಗೆ ಕೋವಿಡ್-19 ವೈರಾಣು ಸೋಂಕು ಹರಡುವ ಸಾಧ್ಯತೆ ಉತ್ತಮ ಗಾಳಿ-ಬೆಳಕು ಇದ್ದಲ್ಲಿ ಕಡಿಮೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳಿದ್ದಾರೆ.

ಕೋವಿಡ್-19 ಸೋಂಕು ಪ್ರಸರಣ ತಡೆಗಟ್ಟಿ, ಸಾಂಕ್ರಾಮಿಕವನ್ನು ನಿಯಂತ್ರಿಸಿ- ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಷನ್, ಹಾಗೂ ವೆಂಟಿಲೇಷನ್ ಎಂಬ ಶೀರ್ಷಿಕೆಯಡಿ ಸಲಹೆಗಳನ್ನು ನೀಡಿರುವ ಪ್ರಧಾನ ವೈಜ್ಞಾನಿಕ ಸಲಹೆಗಾರರು ಮನೆಯಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಉತ್ತಮ-ಗಾಳಿ ಬೆಳಕು ಸಮುದಾಯ ರಕ್ಷಣೆಯಾಗಿವೆ ಎಂದು ಅವರು ಹೇಳಿದ್ದಾರೆ.

ವೈರಾಣು ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ಗಾಳಿ-ಬೆಳಕು ಮಹತ್ವದ ಪಾತ್ರ ವಹಿಸುತ್ತದೆ. ಗಾಳಿ-ಬೆಳಕು ಉತ್ತಮವಾಗಿದ್ದಲ್ಲಿ ರೋಗ ಹರಡುವಿಕೆಯ ಅಪಾಯ ಕಡಿಮೆ ಇದೆ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ. ಕಿಟಕಿಗಳನ್ನು, ಬಾಗಿಲುಗಳನ್ನು ತೆರೆಯುವುದರಿಂದ ವಾಸನೆಯನ್ನು ಹೋಗಲಾಡಿಸಬಹುದೋ ಹಾಗೆಯೇ ಗಾಳಿ ಬೆಳಕುಗಳಿಂದ ವೈರಾಣುಗಳ ಹರಡುವಿಕೆಯನ್ನೂ ಕಡಿಮೆ ಮಾಡಬಹುದಾಗಿದೆ ಎಂದು ಸಲಹೆಯಲ್ಲಿ ವಿವರಿಸಲಾಗಿದೆ.

ಮನೆ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಗಾಳಿ-ಬೆಳಕನ್ನು ಹೆಚ್ಚಿಸುವ ಈ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com