ಪುರಿ ಜಗನ್ನಾಥ ರಥಯಾತ್ರೆ: ರಥ ನಿರ್ಮಾಣದಲ್ಲಿದ್ದ 8 ಸೇವಕರಿಗೆ ಕೊರೋನಾ

ಪ್ರಸಿದ್ಧ ಯಾತ್ರಾ ಸ್ಥಳ ಪುರಿಯಲ್ಲಿ ಜಗನ್ನಾಥನ ರಥಯಾತ್ರೆಗಾಗಿರಥಗಳ ನಿರ್ಮಾಣ ಕಾರ್ಯಗಳು ನಿಗದಿಯಂತೆ ನಡೆಯುತ್ತಿದೆ ಎಂದು  ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ಗುರುವಾರ ತಿಳಿಸಿದೆ.
ರಥಯಾತ್ರೆ
ರಥಯಾತ್ರೆ
Updated on

ಪುರಿ: ಪ್ರಸಿದ್ಧ ಯಾತ್ರಾ ಸ್ಥಳ ಪುರಿಯಲ್ಲಿ ಜಗನ್ನಾಥನ ರಥಯಾತ್ರೆಗಾಗಿರಥಗಳ ನಿರ್ಮಾಣ ಕಾರ್ಯಗಳು ನಿಗದಿಯಂತೆ ನಡೆಯುತ್ತಿದೆ ಎಂದು  ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ಗುರುವಾರ ತಿಳಿಸಿದೆ. ಆದರೆ ಇದೆಲ್ಲದರ ನಡುವೆ ರಥಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುವ 88 ಜನರ ಪೈಕಿ ಹಾರಾಣ ಸಮುದಾಯದ ಮೂವರು ಸೇವಕರು ಮತ್ತು ಭೋಯಿ ಸಮುದಾಯಕ್ಕೆ ಸೇರಿದ ಐದು ಸೇವಕರಿಗೆ ಕೊರೋನಾ ಕಾಣಿಸಿಕೊಂಡಿದೆ. 

ಸೋಂಕಿತರಿಗೆ ಪುರಿಯಲ್ಲಿನ ಕೋವಿಡ್ ಕೇಂದ್ರವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯ ಆಡಳಿತಗಾರ ಕೃಷ್ಣ ಕುಮಾರ್ ಹೇಳಿದ್ದಾರೆ.

ಜುಲೈ 12 ರಂದು ವಾರ್ಷಿಕ ರಥಯಾತ್ರೆಗೆ ರಥ ತಯಾರಿ ನಿಗದಿಯಂತೆ ನಡೆಯುತ್ತಿದೆ ಎಂದು ಕುಮಾರ್ ಹೇಳಿದರು.

ಸೋಂಕಿಗೆ ನೆಗೆಟಿವ್ ವರದಿ ಪಡೆದ ಸೇವಕರಿಗೆ ಮಾತ್ರ ರಥಗಳನ್ನು ತಯಾರಿಸಲು 'ರಥ ಖುಲ'ದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು.  'ರಥ ಖುಲ' ಅನ್ನು ಬಯೋ ಬಬಲ್  ಆಗಿಸಲು ಎಸ್‌ಜೆಟಿಎ ನಿರ್ಧರಿಸಿದೆ ಎಂದು ಕುಮಾರ್ ಹೇಳಿದರು. ಕೋವಿಡ್ ಸೋಂಕಿನ ಪ್ರಸರಣದ ಅಪಾಯ ಕಡಿಮೆ ಮಾಡಲು  ಬಯೋ-ಬಬಲ್ ಹೊರಗಿನ ಪ್ರಪಂಚದಿಂದ ಪ್ರತ್ಯೇಕಿಸಲ್ಪಟ್ಟ ಸುರಕ್ಷಿತ ಸ್ಥಳವಾಗಿರಲಿದೆ. ಆ ಪ್ರದೇಶಕ್ಕೆ ಜನರು ಪ್ರವೇಶಿಸಲು ನಿರ್ಬಂಧವಿರುತ್ತದೆ.

ಕಾರ್ಮಿಕರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಕೆಲಸ ಪೂರ್ಣಗೊಳ್ಳುವವರೆಗೆ ಪ್ರತ್ಯೇಕ ವಸತಿ ನೀಡಲಾಗುತ್ತಿದೆ ಎಂದು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ. "ಅವರ ಕುಟುಂಬಗಳನ್ನು ಭೇಟಿ ಮಾಡಲು ಅವರಿಗೆ ಅನುಮತಿ ಇಲ್ಲ ಅಥವಾ ಅವರ ಕುಟುಂಬಗಳಿಂದ ಯಾರೂ ಅವರನ್ನು ಭೇಟಿ ಮಾಡಲು ಬರುವುದಿಲ್ಲ. ಸೋಂಕಿನಿಂದ ರಕ್ಷಿಸಿಕೊಳ್ಳಲು ಅವರನ್ನು ಸಂಪೂರ್ಣ ಪ್ರತ್ಯೇಕವಾಗಿರಿಸಲಾಗುತ್ತದೆ. ಅವರೆಲ್ಲರೂ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಬಳಸುತ್ತಾರೆ. ಶೀಘ್ರದಲ್ಲೇ ಅವರಿಗೆ ಎನ್-95 ಮುಖವಾಡಗಳನ್ನು ನೀಡಲಾಗುವುದು. ಸಾಮಾಜಿಕ ಅಂತರವನ್ನು ಸಹ ಸಾಧ್ಯವಾದಷ್ಟು ಅನುಸರಿಸಲಾಗುತ್ತದೆ " ಎಂದು ಕುಮಾರ್ ಹೇಳಿದರು.

ಕೋವಿಡ್ ಸೋಂಕಿಗೆ ಪಾಸಿಟಿವ್ಪರೀಕ್ಷೆ ನಡೆಸಿದ ಮೂವರು ಮಹಾರಾಣ ಸೇವಕರಲ್ಲಿ ಇಬ್ಬರು ಜಗನ್ನಾಥರವರ 'ನಂದಿಘೋಷ್ ' ರಥದ ನಿರ್ಮಾಣದ ಉಸ್ತುವಾರಿ ವಹಿಸಿದ್ದರು ಮತ್ತು ಒಬ್ಬರು ಸುಭದ್ರಾ ದೇವಿಯ 'ದರ್ಪದಲನ್' ರಥದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್‌ಜೆಟಿಎ ಆಡಳಿತಾಧಿಕಾರಿ (ಅಭಿವೃದ್ಧಿ) ಅಜಯ್ ಜೆನಾ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ  ಸೇವಕರು ಮತ್ತು ಅವರ ಇಬ್ಬರು ಕುಟುಂಬ ಸದಸ್ಯರು ಈವರೆಗೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜೆನಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com