ಮುಂಬೈ ಬಾರ್ಜ್‌ ದುರಂತ: ಕ್ಯಾಪ್ಟನ್‌ ವಿರುದ್ಧ ಎಫ್ಐಆರ್‌ ದಾಖಲು

ಟೌಕ್ಟೇ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಿದ ಬಾರ್ಜ್ ಪಿ -305 ರ ಕ್ಯಾಪ್ಟನ್ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಸಮುದ್ರದಲ್ಲಿ ಸಿಲುಕಿರುವವರ ರಕ್ಷಣೆ
ಸಮುದ್ರದಲ್ಲಿ ಸಿಲುಕಿರುವವರ ರಕ್ಷಣೆ

ಮುಂಬೈ: ಟೌಕ್ಟೇ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಿದ ಬಾರ್ಜ್ ಪಿ -305 ರ ಕ್ಯಾಪ್ಟನ್ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.

261 ಜನರನ್ನು ಹೊತ್ತೊಯ್ಯುತ್ತಿದ್ದ ಬಾರ್ಜ್ ಪಿ-305 ರ ಸೋಮವಾರ ಟೌಕ್ಟೇ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಿತ್ತು. ಈ ಘಟನೆ ನಡೆದು ಐದು ದಿನಗಳಾಗಿದ್ದು ಈವರೆಗೆ 49 ಶವಗಳು ಪತ್ತೆಯಾಗಿದ್ದು ಇನ್ನೂ 26 ಮಂದಿ ನಾಪತ್ತೆಯಾಗಿದ್ದಾರೆ. ಈ ನಾಪತ್ತೆಯಾಗಿರುವ 26 ಮಂದಿ ಪೈಕಿ ಕ್ಯಾಪ್ಟನ್ ಕೂಡಾ ಒಬ್ಬರು.

ಸುಮಾರು 24 ಗಂಟೆಗಳ ಕಾಲ ಸಮುದ್ರದಲ್ಲೇ ಉಳಿದಿದ್ದ ಬಾರ್ಜ್‌ನ ಮುಖ್ಯ ಎಂಜಿನಿಯರ್ ರೆಹಮಾನ್ ಶೇಖ್‌ನನ್ನು ರಕ್ಷಿಸಿದ ಬಳಿಕ, ಕ್ಯಾಪ್ಟನ್ ಹವಾಮಾನ ಇಲಾಖೆಯ ಎಚ್ಚರಿಕೆ ನಿರ್ಲಕ್ಷಿಸಿದ ಆರೋಪದಲ್ಲಿ ಕ್ಯಾಪ್ಟನ್‌ ವಿರುದ್ದ ದೂರು ದಾಖಲು ಮಾಡಲಾಗಿದೆ.

ಇನ್ನು ಗಾಯಗೊಂಡು ಮುಂಬೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾರ್ಜ್‌ನ ಮುಖ್ಯ ಎಂಜಿನಿಯರ್ ರೆಹಮಾನ್ ಶೇಖ್‌ ಮತ್ತೊಬ್ಬ ಮುಖ್ಯ ಎಂಜಿನಿಯರ್‌ ಆದ ತನ್ನ ಸಹೋದರ ಆಲಂ ಶೇಖ್ ಬಳಿ, "ಗಾಳಿಯ ವೇಗವು ಅಧಿಕವಾಗಿತ್ತು" ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com