ಮೃತರ ಹಕ್ಕುಗಳನ್ನು ರಕ್ಷಿಸಿ: ಶವಸಂಸ್ಕಾರ, ಆಂಬ್ಯುಲೆನ್ಸ್ ಸೇವೆಗಳ ದುಬಾರಿ ಶುಲ್ಕದ ವಿರುದ್ಧ ಸುಪ್ರೀಂ ಗೆ ಅರ್ಜಿ 

ಶವಸಂಸ್ಕಾರಗಳು, ಆಂಬುಲೆನ್ಸ್ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರ ಪರಿಣಾಮವಾಗಿ ಅದೆಷ್ಟೋ ಕುಟುಂಬಗಳಿಗೆ ಅಗಲಿದ ತಮ್ಮ ಸದಸ್ಯರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗದೇ ಗಂಗಾ ನದಿಯಲ್ಲಿ ಶವಗಳನ್ನು ಹಾಕುತ್ತಿರುವುದು ಬೇಸರ ಮೂಡಿಸುತ್ತಿದೆ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ನವದೆಹಲಿ: ಶವಸಂಸ್ಕಾರಗಳು, ಆಂಬುಲೆನ್ಸ್ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರ ಪರಿಣಾಮವಾಗಿ ಅದೆಷ್ಟೋ ಕುಟುಂಬಗಳಿಗೆ ಅಗಲಿದ ತಮ್ಮ ಸದಸ್ಯರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗದೇ ಗಂಗಾ ನದಿಯಲ್ಲಿ ಶವಗಳನ್ನು ಹಾಕುತ್ತಿರುವುದು ಬೇಸರ ಮೂಡಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಎನ್ ಜಿಒ ಡಿಎಂಸಿ ಹೇಳಿದೆ. 

ಎನ್ ಜಿಒ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟೀವ್ ಇಂಡಿಯಾ ಜೋಸ್ ಅಬ್ರಹಮ್ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, "ಆಂಬುಲೆನ್ಸ್, ಶವಸಂಸ್ಕಾರ ಸೇವೆಗಳ ಶುಲ್ಕ ದುಬಾರಿಯಾಗುತ್ತಿರುವುದರ ಪರಿಣಾಮವಾಗಿ ಗಂಗಾ ನದಿಗಳಲ್ಲಿ ಅದೆಷ್ಟೋ ಮಂದಿ ತಮ್ಮನ್ನು ಅಗಲಿದ ಸದಸ್ಯರ ಶವಗಳನ್ನು ಗಂಗಾ ನದಿಯಲ್ಲಿ ಹಾಕುತ್ತಿದ್ದಾರೆ" ಎಂದು ತಿಳಿಸಿದೆ. 

ಮೃತರ ಹಕ್ಕನ್ನು ಎತ್ತಿ ಹಿಡಿಯುವುದಕ್ಕೆ ಇತ್ತೀಚೆಗಷ್ಟೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲಹೆಗಳನ್ನು ಹೊರಡಿಸಿತ್ತು ಎಂದು ಎನ್ ಜಿಒ ಉಲ್ಲೇಖಿಸಿದೆ. 

"ಪರಿಸ್ಥಿತಿ ಹೀಗಿದ್ದರೂ ಸಹ ಯಾವುದೇ ಕಠಿಣ ಕ್ರಮವಿಲ್ಲ, ಶುಲ್ಕ ಹೆಚ್ಚಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ, ಮೃತರ ಹಕ್ಕುಗಳ ಬಗ್ಗೆ ಹೇಳಿದ್ದು, ಮೃತರ ಘನತೆಯನ್ನು ಗೌರವಿಸಬೇಕು ಎಂದು ಹೇಳಿದೆ. ಮೃತರ ಘನತೆ, ಹಕ್ಕುಗಳನ್ನು ಕಾಪಾಡುವುದಕ್ಕೆ ಕಾನೂನು ರಚಿಸಬೇಕು ಈ ಸಂಬಂಧ ಎಲ್ಲಾ ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳಿಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್ ಜಿಒ ಆಗ್ರಹಿಸಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com