12ನೇ ತರಗತಿ ಪರೀಕ್ಷೆ ನಡೆಸಲು ಬಹುತೇಕ ರಾಜ್ಯಗಳು ಒಲವು, ಜೂನ್ 1ಕ್ಕೆ ಅಂತಿಮ ನಿರ್ಧಾರ!

12ನೇ ತರಗತಿ ಪರೀಕ್ಷೆ ನಡೆಸಬೇಕೆ ಅಥವಾ ಶಾಲಾ ಮಟ್ಟದಲ್ಲಿ ಸಣ್ಣ ಮಟ್ಟಿನ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡುವುದೇ ಎಂಬ ಕುರಿತು ನಿನ್ನೆ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ಸಹಮತ ಬಾರದ ಕಾರಣ ನಿರ್ಧಾರಕ್ಕೆ ಬಂದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 12ನೇ ತರಗತಿ ಪರೀಕ್ಷೆ ನಡೆಸಬೇಕೆ ಅಥವಾ ಶಾಲಾ ಮಟ್ಟದಲ್ಲಿ ಸಣ್ಣ ಮಟ್ಟಿನ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡುವುದೇ ಎಂಬ ಕುರಿತು ನಿನ್ನೆ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ಸಹಮತ ಬಾರದ ಕಾರಣ ನಿರ್ಧಾರಕ್ಕೆ ಬಂದಿಲ್ಲ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ರಮೇಶ್ ಪೋಕ್ರಿಯಾಲ್, ಪ್ರಕಾಶ್ ಜಾವದೇಕರ್, ಸ್ಮೃತಿ ಇರಾನಿ, ಸಂಜಯ್ ದೊಟ್ರೆ ಭಾಗವಹಿಸಿದ್ದರು. ಅಲ್ಲದೆ ಹಲವು ರಾಜ್ಯಗಳ ಶಿಕ್ಷಣ ಸಚಿವರು, ಕಾರ್ಯದರ್ಶಿಗಳು ಕೂಡ ಹಾಜರಿದ್ದರು.

ಜುಲೈ 15ರಿಂದ ಆಗಸ್ಟ್ 26ರ ಮಧ್ಯೆ ಪರೀಕ್ಷೆ ನಡೆಸಲು ಸಿಬಿಎಸ್ ಇ ಪ್ರಸ್ತಾವನೆ ಸಲ್ಲಿಸಿದ್ದು ಫಲಿತಾಂಶ ಸೆಪ್ಟೆಂಬರ್ ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಹುತೇಕ ರಾಜ್ಯಗಳು ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟುಬಿಟ್ಟಿವೆ. ಕೇರಳ ಮತ್ತು ದೆಹಲಿ ರಾಜ್ಯಗಳು ಪರೀಕ್ಷೆಗೆ ಮೊದಲು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎಂದು ಪ್ರಸ್ತಾಪಿಸಿದರೆ ಮಹಾರಾಷ್ಟ್ರ ಪರೀಕ್ಷೆಯನ್ನೇ ರದ್ದುಮಾಡಬೇಕೆಂದು ಹೇಳಿದೆ.

ರಾಜ್ಯಗಳ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದ ನಂತರ ಈ ನಿಟ್ಟಿನಲ್ಲಿ ಇನ್ನಷ್ಟು ಚರ್ಚೆ, ಮಾತುಕತೆಗಳು ಮುಖ್ಯ ಎಂದು ತೀರ್ಮಾನಕ್ಕೆ ಬರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com