ಹರಿಯಾಣದ ಮೊಹಬ್ಬತ್ 60 ಸಾವಿರ ರೂ. ಬೆಲೆಯ ಕೋವಿಡ್-19 ಪ್ರತಿಕಾಯ ಕಾಕ್ಟೈಲ್ ಪಡೆದ ಮೊದಲ ಭಾರತೀಯ!

ಕಳೆದ ವರ್ಷ ಕೊರೋನಾಗೆ ತುತ್ತಾಗುತ್ತಿದ್ದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡಿದ್ದರು. ಇನ್ನು ಹರಿಯಾಣದ 84 ವರ್ಷದ ಮೊಹಬ್ಬತ್ ಸಿಂಗ್  59,750 ರೂಪಾಯಿ ಮೌಲ್ಯದ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುರುಗ್ರಾಮ್: ಕಳೆದ ವರ್ಷ ಕೊರೋನಾಗೆ ತುತ್ತಾಗುತ್ತಿದ್ದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡಿದ್ದರು. ಇನ್ನು ಹರಿಯಾಣದ 84 ವರ್ಷದ ಮೊಹಬ್ಬತ್ ಸಿಂಗ್  59,750 ರೂಪಾಯಿ ಮೌಲ್ಯದ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮೊಹಬ್ಬತ್ ಸಿಂಗ್ ಅವರಿಗೆ ಮಂಗಳವಾರ ಮೊದಲ ಡೋಸ್ ನೀಡಲಾಯಿತು. 

ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ ಎರಡು ವೇಗವಾಗಿ ಕಾರ್ಯನಿರ್ವಹಿಸುವ ಪ್ರತಿಕಾಯಗಳ ಕಾಕ್ಟೈಲ್-ಅತ್ಯಾಧುನಿಕ ಚಿಕಿತ್ಸೆಯಾಗಿ ನೋಡಲಾಗುತ್ತದೆ. ಇದನ್ನು ಅಲ್ಪ ಮತ್ತು ಮಧ್ಯಮ ಕೊರೋನಾ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಆರೋಗ್ಯ ಹದಗೆಡುವ ಮೊದಲು ರಕ್ಷಣೆ ನೀಡುತ್ತದೆ. ರೋಚೆ ಇಂಡಿಯಾ ಮತ್ತು ಸಿಪ್ಲಾ ಲಿಮಿಟೆಡ್ ಅಧಿಕೃತ ಪ್ರಕಟಣೆಯ ಪ್ರಕಾರ ರೋಚೆ ಆಂಟಿಬಾಡಿ ಕಾಕ್ಟೈಲ್ ಔಷಧದ ಮೊದಲ ಬ್ಯಾಚ್ ಸೋಮವಾರ ದೇಶಕ್ಕೆ ಬಂದಿತು.

'ಈ ಪ್ರತಿಕಾಯಗಳು ಆರಂಭಿಕ ಹಂತದ ಕೋವಿಡ್ -19 ವೈರಸ್ ಸೋಂಕಿತ ರೋಗಿಗೆ ನೀಡಿದರೆ, ವೈರಸ್ ಹರಡುವುದನ್ನು ತಡೆಯುತ್ತದೆ. ಅಲ್ಲದೆ ವೈರಸ್ ರೋಗಿಯ ಜೀವಕೋಶಗಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಕೊನೆಗೆ ವೈರಸ್ ಅನ್ನು ಕೊಲ್ಲುತ್ತದೆ ಎಂದು ಮೆಡಂತಾ ಆಸ್ಪತ್ರೆಯ ಅಧ್ಯಕ್ಷ ಮತ್ತು ಎಂಡಿ ಡಾಕ್ಟರ್ ನರೇಶ್ ಟ್ರೆಹನ್ ಎಎನ್‌ಐಗೆ ತಿಳಿಸಿದರು.

ಹೊಸ ರೂಪಾಂತರವಾದ ಬಿ .1.617.2 ವಿರುದ್ಧ ಸಹ ಪ್ರತಿಕಾಯಗಳು ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ಡಾ ಟೆಹ್ರಾನ್ ಹೇಳಿದರು. ಅಲ್ಲದೆ ಇದನ್ನು ಪ್ರಯೋಗಾಲಯಗಳಲ್ಲಿಯೂ ಪರಿಶೀಲಿಸಲಾಗಿದೆ. ಕೊರೋನಾಗೆ ತೀವ್ರವಾಗಿ ಗುರಿಯಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ, ಕೋವಿಡ್ -19ನಿಂದಾಗಿ ಆಮ್ಲಜನಕ ಚಿಕಿತ್ಸೆಯ ಅಗತ್ಯವಿರುವವರಿಗೆ, ಕೊರೋನಾದಿಂದ ವೆಂಟಿಲೆಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರತಿಕಾಯ ಕಾಕ್ಟೈಲ್ ಡೋಸ್ ಅನ್ನು ಶಿಫಾರಸು ಮಾಡುವುದಿಲ್ಲ. 

ಕೊರೋನಾ ಸೋಂಕು ತಗುಲಿದ ಏಳು ದಿನಗಳ ವೈರಲ್ ಪುನರಾವರ್ತನೆ ಹಂತ ಅಥವಾ ವೈರಸ್ ದ್ವಿಗುಣವಾಗುತ್ತಾ ಹೋಗುತ್ತದೆ. ಆದ್ದರಿಂದ, ಅದನ್ನು ನಿರ್ಬಂಧಿಸುವ ಮೂಲಕ ನೀವು ಪ್ರತಿಯೊಬ್ಬರಲ್ಲೂ ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಡಾ. ಟ್ರೆಹನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com