
ನವದೆಹಲಿ: ಬಿಜೆಪಿ ಮತ್ತು ಪ್ರತಿಪಕ್ಷ ಆಡಳಿತದ ರಾಜ್ಯಗಳು ತೆರಿಗೆ ಕಡಿತದ ಪ್ರಯೋಜನವನ್ನು ಜನಸಾಮಾನ್ಯರಿಗೆ ನೀಡಲಾಗುತ್ತದೆಯೇ ಎಂದು ಪಟ್ಟು ಹಿಡಿದ ನಂತರ ಕೋವಿಡ್-19 ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳ ಮೇಲಿನ ತೆರಿಗೆಯನ್ನು ಜಿಎಸ್ ಟಿ ಕೌನ್ಸಿಲ್ ಶುಕ್ರವಾರ ಬದಲಿಸಲಿಲ್ಲ.
ತೆರಿಗೆ ತಗ್ಗಿಸಲು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳು ಒತ್ತಡ ಹಾಕಿದವು. ಆದರೆ, ಕೇಂದ್ರ ಸರ್ಕಾರ ಹೊಂದಿರುವ ನಡೆ ಜನರಿಗೆ ಸ್ಪಷ್ಟವಾದ ಲಾಭಗಳಿಗೆ ಕಾರಣವಾಗುವುದಿಲ್ಲ. ಇದನ್ನು ಮಾಡಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಆದರೆ ತಾಂತ್ರಿಕ ಮತ್ತು ಕಾನೂನು ಸಮಿತಿ ಸಮಗ್ರವಾಗಿ ಹೋದಾಗ, ಅದು ಇತರರ ಮೇಲೆ ಬೀರುವ ಪರಿಣಾಮವನ್ನು ನೀವು ತಿಳಿಯುತ್ತೀರಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆದಾಯ ವೃದ್ದಿ ಅಂಶದ ಬಗ್ಗೆ ನಾನು ಮಾತನಾಡುತ್ತಿಲ್ಲ.ಆದರೆ, ಅದರ ಪರಿಣಾಮವಾಗಿ ಎಷ್ಟು ಇತರ ವಸ್ತುಗಳನ್ನು ಸೇರಿಸಲಾಗುವುದು ನೀವು ಅದನ್ನು ಹೇಗೆ ಕಾರ್ಯಗತಗೊಳಿಸಲಿದ್ದೀರಿ ಎಂದು ಅವರು ಕೇಳಿದರು.
43ನೇ ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳ ಮೇಲಿನ ದರ ಕುರಿತು ನಿರ್ಧರಿಸಲು ಸಚಿವರನ್ನೊಳಗೊಂಡ ಸಮಿತಿ ರಚಿಸಲಾಗುವುದು, ಜೂನ್ 8 ರೊಳಗೆ ಈ ಸಮಿತಿ ತನ್ನ ವರದಿಯನ್ನು ನೀಡಲಿದೆ ಎಂದರು.
ಪ್ರಸ್ತುತ, ದೇಶೀಯವಾಗಿ ತಯಾರಿಸಿದ ಲಸಿಕೆಗಳ ಮೇಲೆ ಶೇಕಡಾ 5 ರಷ್ಟು ಜಿಎಸ್ಟಿ ವಿಧಿಸಲಾಗಿದ್ದು, ಕೋವಿಡ್ ಡ್ರಗ್ಸ್ ಮತ್ತು ಆಕ್ಸಿಜನ್ ಸಾಂದ್ರಕಗಳ ಮೇಲೆ ಶೇ.12 ರಷ್ಟಿದೆ. ಸೂಕ್ತ ಸಂದರ್ಭದಲ್ಲಿ ಭಾರತೀಯರಿಗೆ ಲಸಿಕೆ ನೀಡುವುದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿತಾಸಕ್ತಿಯಾಗಿದೆ. ಮತ್ತು ರಾಜ್ಯಗಳು ಸಮಯಕ್ಕೆ ಸರಿಯಾಗಿ ಆದಾಯದ ಬಾಕಿ ಪಾವತಿ ಪಡೆಯುವುದಾಗಿ. ಸಮಾತೋಲಿತ ದೃಷ್ಟಿಯಲ್ಲಿ ಇಂದಿನ ಸಭೆ ನಡೆದಿದೆ ಎಂದು ಅವರು ಹೇಳಿದರು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಬಳಸುವ ಔಷಧ ಆಂಫೋಟೆರಿಸಿನ್ ಬಿ ಆಮದನ್ನು ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ. ಮೆಡಿಕಲ್ ಆಕ್ಸಿಜನ್, ಲಸಿಕೆಗಳಂತಹ ಕೋವಿಡ್ ಸಂಬಂಧಿತ ಸರಕುಗಳ ಆಮದಿಗೆ ಆಗಸ್ಟ್ 31ರವರೆಗೂ ಜಿಎಸ್ ಟಿಯಿಂದ ವಿನಾಯಿತಿ ನೀಡಲು ಕೌನ್ಸಿಲ್ ನಿರ್ಧರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Advertisement