11ನೇ, 12ನೇ ತರಗತಿಯ ಆಂತರಿಕ ಪರೀಕ್ಷೆಗಳ ಸರಾಸರಿ ಅಂಕಗಳನ್ನು ಸಲ್ಲಿಸುವಂತೆ ಶಾಲಾ ಮಂಡಳಿಗಳಿಗೆ ಸಿಐಸಿಎಸ್ಇ ಸೂಚನೆ

11ನೇ ತರಗತಿಯ ಪರೀಕ್ಷೆ ಮತ್ತು 12ನೇ ತರಗತಿಯ ನಡೆದ ಆಂತರಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಸರಾಸರಿ ಸೇರಿದಂತೆ ದತ್ತಾಂಶವನ್ನು ಸಲ್ಲಿಸುವಂತೆ ಸಿಐಸಿಎಸ್ಇ ಮಂಡಳಿ ತನ್ನ ಅಂಗಸಂಸ್ಥೆ ಶಾಲಾ ಮಂಡಳಿಗಳಿಗೆ ಸೂಚಿಸಿದೆ.
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ನವದೆಹಲಿ: 11ನೇ ತರಗತಿಯ ಪರೀಕ್ಷೆ ಮತ್ತು 12ನೇ ತರಗತಿಯ ನಡೆದ ಆಂತರಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಸರಾಸರಿ ಸೇರಿದಂತೆ ದತ್ತಾಂಶವನ್ನು ಸಲ್ಲಿಸುವಂತೆ ಸಿಐಸಿಎಸ್ಇ ಮಂಡಳಿ ತನ್ನ ಅಂಗಸಂಸ್ಥೆ ಶಾಲಾ ಮಂಡಳಿಗಳಿಗೆ ಸೂಚಿಸಿದೆ. 

ಕೊರೋನಾ ಎರಡನೇ ಅಲೆಯಿಂದಾಗಿ ಮೇ 4ಕ್ಕೆ ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆಗಳನ್ನು ಮಂಡಳಿ ಮುಂದೂಡಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಆದರೆ ಮಂಡಳಿ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಸಿಎಸ್ಇ) ಈಗಾಗಲೇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. "ಸಿಐಎಸ್ಸಿಇ 12ನೇ ತರಗತಿ ಪರೀಕ್ಷೆಗೆ ಹಾಜರುಪಡಿಸುವ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹವನ್ನು ಆರಂಭಿಸಿದೆ. ಅಲ್ಲದೆ ಪ್ರಾಂಶುಪಾಲರನ್ನು ಕಟ್ಟುನಿಟ್ಟಾಗಿ ಗೌಪ್ಯತೆ ಕಾಪಾಡಿ ಎಂದು ಸೂಚಿಸಲಾಗಿದೆ ಎಂದು ಸಿಐಎಸ್ಸಿಇ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶಾಲೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಮಂಡಳಿಯು ಕೋರಿದ ಮಾಹಿತಿಯು 11ನೇ ತರಗತಿಯಲ್ಲಿ(2019-20) ಅಭ್ಯರ್ಥಿಗಳು ಗಳಿಸಿದ ವಿಷಯಗಳ ಸರಾಸರಿ ಅಂಕಗಳು ಮತ್ತು 12ನೇ ತರಗತಿಯಲ್ಲಿ(2020-21) ಶಾಲೆಯು ನಡೆಸಿದ ವಿವಿಧ ಪರೀಕ್ಷೆಗಳು ಮತ್ತು ಪರೀಕ್ಷೆಗಳಲ್ಲಿ ಗಳಿಸಿದ ವಿಷಯಗಳ ಸರಾಸರಿ ಅಂಕಗಳನ್ನು ಒಳಗೊಂಡಿದೆ.

ದತ್ತಾಂಶವನ್ನು ಅಪ್ಲೋಡ್ ಮಾಡುವ ಪ್ರಕ್ರಿಕೆಯನ್ನು ಪೂರ್ಣಗೊಳಿಸಲು ಅಂತಿಮ ದಿನಾಂಕವನ್ನು ಮಂಡಳಿಯು ಜೂನ್ 7ಕ್ಕೆ ನಿಗದಿಪಡಿಸಿದೆ. 12ನೇ ತರಗತಿ ಪರೀಕ್ಷೆಯಲ್ಲಿ ಕೇಂದ್ರೀಯ ಪ್ರೌಡಶಾಲಾ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇನ್ನೂ ಅಂತಿಮ ಕರೆ ನೀಡಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯವು ಜೂನ್ 1 ರೊಳಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com