ಮೀಟೂ: ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ವಾಪಸ್ ನೀಡಿದ ಗೀತರಚನೆಕಾರ ವೈರಮುತ್ತು 

ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 
ಗೀತರಚನೆಕಾರ ವೈರಮುತ್ತು
ಗೀತರಚನೆಕಾರ ವೈರಮುತ್ತು

ಚೆನ್ನೈ: ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈರಮುತ್ತು ಪ್ರಶಸ್ತಿ ತೀರ್ಪುಗಾರರಿಗೆ ಅವಮಾನವಾಗದಂತೆ ಮಾಡುವುದಕ್ಕೆ ತಾವು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಇದೇ ವೇಳೆ, ಒಎನ್ ವಿ ಕಲ್ಚರಲ್ ಅಕಾಡೆಮಿ ಪ್ರಶಸ್ತಿ ನೀಡುವುದನ್ನು ಮರುಪರಿಶೀಲನೆ ಮಾಡುವ ನಿರ್ಧಾರದ ಹಿಂದೆ ಹಗೆತನವನ್ನು ದೂಷಿಸಿದ್ದಾರೆ. ಇದೇ ವೇಳೆ ಅಕಾಡೆಮಿಯಿಂದ ಘೋಷಣೆ ಮಾಡಲಾಗಿರುವ 3 ಲಕ್ಷ ಬಹುಮಾನದ ಹಣವನ್ನು ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ಗೆ ನೀಡುವಂತೆ ವೈರಮುತ್ತು ಮನವಿ ಮಾಡಿದ್ದು ತಾವೂ ಸಹ 2 ಲಕ್ಷ ರೂಪಾಯಿಗಳನ್ನು ಇದೇ ಕಾರಣಕ್ಕೆ ನೀಡುವುದಾಗಿ ಹೇಳುತ್ತಿದ್ದಾರೆ.

ವಿದ್ವಾಂಸ ತೀರ್ಪುಗಾರರಿಗೆ ನನ್ನ ವಿರುದ್ಧದ ಪ್ರತಿಭಟನೆಯಿಂದ ಮುಜುಗರವಾಗಬಾರದು, ಆದ್ದರಿಂದ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರ ಪ್ರಕಟಿಸುತ್ತಿದ್ದೇನೆ, ಆದ್ದರಿಂದ ವಿವಾದದ ನಡುವೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ತಪ್ಪಿಸುತ್ತಿದ್ದೇನೆ ಎಂದು ವೈರಮುತ್ತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com