ಹರಿದ್ವಾರ ಕುಂಭಮೇಳ (ಸಂಗ್ರಹ ಚಿತ್ರ)
ಹರಿದ್ವಾರ ಕುಂಭಮೇಳ (ಸಂಗ್ರಹ ಚಿತ್ರ)

ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ: ಭದ್ರತಾ ಉಸ್ತುವಾರಿ

ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ. 

ಡೆಹ್ರಾಡೂನ್: ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ. 

ಒಟ್ಟಾರೆ ಆರ್ ಟಿ-ಪಿಸಿಆರ್ ಪರೀಕ್ಷೆ ಪೈಕಿ ಶೇ.೦.2  ರಷ್ಟು ಮಾತ್ರ ಕೋವಿಡ್-19 ಸೋಂಕು ದೃಢಪಟ್ಟಿದೆ. ಪರೀಕ್ಷೆಗೆ ಒಳಪಟ್ಟ ಪೊಲೀಸ್ ಸಿಬ್ಬಂದಿಗಳ ಪೈಕಿ ಶೇ.೦5 ರಷ್ಟು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ ಆದ್ದರಿಂದ ಕೋವಿಡ್-19 ನ್ನು ಸೂಪರ್ ಸ್ಪ್ರೆಡರ್ ಎನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಮೇಳ ಐಜಿ ಸಂಜಯ್ ಗುಂಜ್ಯಾಲ್ ಈ ಬಗ್ಗೆ ಮಾತನಾಡಿದ್ದು ಏ.01 ರಿಂದ ಕುಂಭ ಮೇಳ ಅಧಿಕೃತವಾಗಿ ಪ್ರಾರಂಭವಾಯಿತು, ಆ ವೇಳೆಗೆ ಆಗಲೇ ಎರಡನೇ ಅಲೆ ಮಹಾರಾಷ್ಟ್ರ, ಹರ್ಯಾಣಗಳಲ್ಲಿ ತೀವ್ರವಾಗಿ ಪ್ರಾರಂಭವಾಗಿತ್ತು. ಜನವರಿ 1-ಏಪ್ರಿಲ್ 30 ವರೆಗಿನ ಹರಿದ್ವಾರ ಜಿಲ್ಲೆಯ ಕೋವಿಡ್-19 ಕೋವಿಡ್ ಡೇಟಾವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ, ಕುಂಭಮೇಳವನ್ನು ಸೂಪರ್ ಸ್ಪ್ರೆಡರ್ ಎಂದು ಹೇಳುವುದು ಸರಿಯಲ್ಲ ಎಂದು ಗುಂಜ್ಯಾಲ್ ಹೇಳಿದ್ದಾರೆ. 

ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜ.1 ರಿಂದ ಏಪ್ರಿಲ್.30 8.91 ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪೈಕಿ 1,945  ಪ್ರಕರಾಣಗಳಲ್ಲಿ ಸೋಂಕು ದೃಢಪಟ್ಟಿವೆ. 

ಕುಂಭಮೇಳದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 16,000 ಪೊಲೀಸ್ ಸಿಬ್ಬಂದಿಗಳ ಪೈಕಿ ಕೇವಲ 88 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಸಿಬ್ಬಂದಿಗಳು ಜನಸಂದಣಿಯೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದರು ಎಂಬುದು ಮತ್ತೊಂದು ಗಮಾರ್ಹ ಅಂಶ ಹೀಗಿದ್ದರೂ ಸಹ ಅತ್ಯಂತ ಕಡಿಮೆ ಮಂದಿ ಸಿಬ್ಬಂದಿ ಎಂದು ಅಧಿಕಾರಿಗಳು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com